ಮನರಂಜನೆ

ಬಾಲಿವುಡ್ ನಟಿ ಆಲಿಯಾ ಭಟ್ ಗೂ ಅಮರಿಕೊಂಡ ಕೊರೊನಾ ಸೋಂಕು

ಬಾಲಿವುಡ್ ನಟಿ ಆಲಿಯಾ ಭಟ್ ಗೂ  ಅಮರಿಕೊಂಡ ಕೊರೊನಾ ಸೋಂಕು

ಮುಂಬೈ,  ಏ 2 : ದೇಶದಲ್ಲಿ ದಿನದಿಂದ ದಿನಕ್ಕೆ ಮತ್ತೆ ಕೊರೊನಾ ಸೊಂಕು  ಹೆಚ್ಚಳವಾಗುತ್ತಿದ್ದು, ಬಾಲಿವುಡ್ ನಟಿ ಆಲಿಯಾ ಭಟ್ ಗೆ ಕೊರೊನಾ ಸೋಂಕು ಅಮರಿಕೊಂಡಿದೆ. ಈ ಕುರಿತು ಇನ್ ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ಆಲಿಯಾಭಟ್, ಎಲ್ಲರಿಗೂ ನಮಸ್ಕಾರ, ನನಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ  ಪರೀಕ್ಷೆಯಲ್ಲಿ ಖಚಿತವಾಗಿದೆ.  ಕೂಡಲೇ ನಾನು ಪ್ರತ್ಯೇಕ ವಾಸಕ್ಕೆ ಒಳಗಾಗಿ,  ಹೋಮ್ ಕ್ವಾರಂಟೈನ್ ನಲ್ಲಿದ್ದೇನೆ.ನನ್ನ ವೈದ್ಯರ ಸಲಹೆಯಂತೆ ಎಲ್ಲ ಸುರಕ್ಷಾ ಕ್ರಮಅನುಸರಿಸುತ್ತಿದ್ದೇನೆ.ನಿಮ್ಮಲ್ಲರ ಪ್ರೀತಿ ಹಾಗೂ ಬೆಂಬಲಕ್ಕೆ ಕೃತಜ್ಞಳಾಗಿದ್ದೇನೆ. ದಯವಿಟ್ಟು ಸುರಕ್ಷಿತವಾಗಿರಿ ಕಾಳಜಿ ವಹಿಸಿ ಎಂದು ಅವರೇ ಸ್ವತಃ   ಬರೆದುಕೊಂಡಿದ್ದಾರೆ.



ಸುದ್ದಿ ಓದಿ