ಬಳ್ಳಾರಿ

ಭೀಕರ ರಸ್ತೆ ಅಪಘಾತ: ಮೂವರು ಸಾವು

ಭೀಕರ ರಸ್ತೆ ಅಪಘಾತ: ಮೂವರು ಸಾವು

ಬಳ್ಳಾರಿ, ಮಾ.12:ಮಹಾಶಿವರಾತ್ರಿ ನಿಮಿತ್ಯ ಶಿವನ ದರ್ಶನ ಪಡೆದು ಊರಿಗೆ ವಾಪಸ್ಸಾಗುತ್ತಿದ್ದಾಗ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಬೈಪಾಸ್​ ಬಳಿ ಗುರುವಾರ ರಾತ್ರಿ ಸಂಭವಿಸಿದೆ.ಮೃತರನ್ನು ಬಳ್ಳಾರಿ ತಾಲೂಕಿನ ಎರಂಗಳಿ ಗ್ರಾಮದ ತಿರುಮಲ (25), ಪ್ರಕಾಶ (14), ಶರತ್ (25) ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ವೆಂಕಟೇಶ, ಮಲ್ಲಿಕಾರ್ಜುನ, ಲಿಂಗೇಶ್ ಎಂಬುವವರು ಗಾಯಗೊಂಡಿದ್ದು, ಬಳ್ಳಾರಿ ವಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸುದ್ದಿ ಓದಿ