ಗದಗ

ಸಾಧಕರಿಗೆ ಸೇವಾ ಮನೋಭಾವ ಮುಖ್ಯ: ಡಾ. ವಿಠ್ಠಲ ಕೋಳಿ

ಸಾಧಕರಿಗೆ ಸೇವಾ ಮನೋಭಾವ ಮುಖ್ಯ: ಡಾ. ವಿಠ್ಠಲ ಕೋಳಿ

ಲೋಕದರ್ಶನ ವರದಿ 

ಗದಗ, ಸೆಪ್ಟೆಂಬರ್ 24: ಕೆ.ಎಲ್‌.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಗದಗದ ರಾಷ್ಟ್ರೀಯ ಸೇವಾ ಯೋಜನೆ (ಓಖಖ) ಘಟಕದ ವತಿಯಿಂದ ಓಖಖ ದಿನಾಚರಣೆ ಕಾರ್ಯಕ್ರಮವನ್ನು ವಿವಿಧ ಚಟುವಟಿಕೆಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.  

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಆಯೋಜಕರಾದ ಡಾ. ರಾಮಚಂದ್ರ ಪಡೆಸೂರ ಅವರು, ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 24ರಂದು ರಾಷ್ಟ್ರೀಯ ಸೇವಾ ಯೋಜನೆ  ದಿನಾಚರಣೆಯನ್ನು ಆಚರಿಸಲಾಗುತ್ತದೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮಶತಮಾನೋತ್ಸವದ ವರ್ಷವಾದ 1969ರ ಸೆಪ್ಟೆಂಬರ್ 24ರಂದು ದೇಶದ 37 ವಿಶ್ವವಿದ್ಯಾಲಯಗಳಲ್ಲಿ ಓಖಖ ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಇದರ ಸ್ಮರಣಾರ್ಥವಾಗಿ ಪ್ರತಿವರ್ಷ ಸೆಪ್ಟೆಂಬರ್ 24ರಂದು ಓಖಖ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.  

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ವಿಠ್ಠಲ ಕೋಳಿ ಅವರು ಮಾತನಾಡಿ, ಓಖಖನ ಪ್ರಮುಖ ಧ್ಯೇಯವಾಕ್ಯ “ನನಗಲ್ಲ, ನಿನಗೆ” (ಓಠ ಒಜ ಃಣಣ ಙಠ) ಎಂಬುದಾಗಿದೆ. ಇದು ನಿಸ್ವಾರ್ಥ ಸೇವೆ, ಪ್ರಜಾಪ್ರಭುತ್ವದ ತತ್ವಗಳು ಹಾಗೂ ಸಹಬಾಳ್ವೆಯ ಮಹತ್ವವನ್ನು ಸಾರುತ್ತದೆ.

ಸಾರ್ವಜನಿಕ ಸೇವೆಯ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣಗಳು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಓಖಖನ ಪ್ರಮುಖ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟರು.  

ಮಹಾವಿದ್ಯಾಲಯದಲ್ಲಿ ಓಖಖ ದಿನಾಚರಣೆಯ ಅಂಗವಾಗಿ ಕ್ವಿಜ್, ರಂಗೋಲಿ ಸ್ಪರ್ಧೆ, ಸ್ವಚ್ಛತಾ ಕಾರ್ಯಕ್ರಮ ಹಾಗೂ ವಿಶೇಷ ಉಪನ್ಯಾಸ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ವಿಶೇಷವಾಗಿ ಆಚರಿಸಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.  

ಓಖಖ ಧ್ವಜಾರೋಹಣ ನೆರವೇರಿಸಿದ ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಡಾ. ವೀಣಾ ಈ. ಅವರು ಮಾತನಾಡಿ, ಓಖಖ ದಿನಾಚರಣೆಯು ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವವನ್ನು ಬೆಳೆಸುವ ಮಹತ್ವದ ದಿನವಾಗಿದೆ.

ಹಳ್ಳಿಗಳ ಅಭಿವೃದ್ಧಿ ಹಾಗೂ ಸಮಾಜ ಸೇವೆಯ ಉದ್ದೇಶವನ್ನು ಹೊಂದಿರುವ ಓಖಖ ಈಗಾಗಲೇ ಸಾಕಷ್ಟು ಪ್ರಗತಿ ಸಾಧಿಸಿದೆ. ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ದೇಶವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರು, ಓಖಖ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ವಿದ್ಯಾರ್ಥಿ ಪ್ರತಿನಿಧಿಗಳಾದ ಸೋಮಶೇಖರ ಕುರಿ ಮತ್ತು ಮಮತಾ ಉಳ್ಳಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಕುಮಾರಿ ಶ್ರೀದೇವಿ ರೊಟ್ಟಿ ಸ್ವಾಗತಿಸಿದರು. ಕುಮಾರಿ ಎಚ್‌. ಸಪೂರಾಬೇಗಂ ವಂದಿಸಿದರು. 


ಸುದ್ದಿ ಓದಿ