ಜೂನಿಯರ್ ಭರತನಾಟ್ಯ ಪರೀಕ್ಷೆಯಲ್ಲಿ ಶೇ.85ರಷ್ಟು ಅಂಕ
ಲೋಕದರ್ಶನ ವರದಿ
ಕಂಪ್ಲಿ:ಸೆ.25: ತಾಲೂಕಿನ ಸಂಗೀತಾ ರಾಮಚಂದ್ರ ಚಿತ್ರಗಾರ ಇವರ ಪುತ್ರಿ ಸ್ನೇಹಾ ಚಿತ್ರಗಾರ ಇವರು ಈಚೆಗೆ ನಡೆದ ಜ್ಯೂನಿಯರ್ ಭರತನಾಟ್ಯ ಪರೀಕ್ಷೆಯಲ್ಲಿ ಶೇ.85ರಷ್ಟು ಅಂಕಗಳ ಉತ್ತೀರ್ಣದೊಂದಿಗೆ ಸಾಧನೆಗೈದಿದ್ದಾಳೆ.
2018ರ ಏಪ್ರಿಲ್ನಲ್ಲಿ ಬೆಂಗಳೂರಿನ ಕೆಎಸ್ಇಇಬಿ ನಡೆಸಿದ ಜ್ಯೂನಿಯರ್ ಭರತ ನಾಟ್ಯ ಪರೀಕ್ಷೆಯಲ್ಲಿ 400ಕ್ಕೆ 340ಅಂಕಗಳನ್ನು ಗಳಿಸಿದ್ದಾಳೆ.
ಬಳ್ಳಾರಿಯ ಲಕ್ಷ್ಮಿ ಕಲಾ ಕ್ಷೇತ್ರದ ಪ್ರಾಚಾರ್ಯ ಎಸ್.ಕೆ.ಆರ್.ಜಿಲಾನಿ ಭಾಷ ಇವರಲ್ಲಿ ಭರತ ನಾಟ್ಯ ಅಭ್ಯಾಸುತ್ತಿದ್ದು, ಸದ್ಯ ಗಂಗಾವತಿ ಚೈತನ್ಯ ಟೆಕ್ನೋ ಶಾಲೆಯಲ್ಲಿ 8ನೇತರಗತಿ ಅಭ್ಯಾಸಿಸುತ್ತಿದ್ದಾಳೆ.