ವಿಷ ಪೂರಿತ ಬಳ್ಳಿ ಸೇವಿಸಿ 48 ಕುರಿಗಳ ಸಾವು
ಹಗರಿಬೊಮ್ಮನಹಳ್ಳಿ 12 : ತಾಲೂಕಿನ ಉಪನಾಯಕನ ಹಳ್ಳಿ ಗ್ರಾಮದ 3 ಕುರಿಗಾಹಿಗಳಿಗೆ ಸೇರಿದ 48 ಕುರಿಗಳು ಮಂಗಳವಾರ ವಿಷ ಪೂರಿತ ಬಳ್ಳಿಯೊಂದನ್ನು ಸೇವಿಸಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಈ ವಿಷಯವಾಗಿ ಪಶು ವೈದ್ಯಾಧಿಕಾರಿ ಪತ್ರಿಕೆಯೊಂದಿಗೆ ಮಾತನಾಡಿ ಉಪನಾಯಕನ ಹಳ್ಳಿ ಗ್ರಾಮಕ್ಕೆ ಸೇರಿದ 3ಜನ ಕುರಿಗಾಹಿಗಳ 48 ಕುರಿಗಳು ಈ ವಿಷಪೂರಿತ ಬಳ್ಳಿಯನ್ನು ಸೇವಿಸಿದ್ದು ಸಾವನ್ನಪ್ಪಿವೆ, ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ನಮ್ಮ ವೈದ್ಯರ ತಂಡ ಭೇಟಿ ನೀಡಿ ಪ್ರಾಣ ತೆತ್ತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಸರಕಾರದಿಂದ ಪರಿಹಾರಕ್ಕೆ ಸಾವನ್ನಪ್ಪಿರುವ ಕುರಿಗಳ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.ಇನ್ನು ಕೆಲ ಕುರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಚಿಕಿತ್ಸೆಗೆ ಸ್ಪಂದಿಸುತ್ತಿವೆ. ಪಶು ವೈದ್ಯ ಡಾ. ರಾಘವೇಂದ್ರ, ಡಾ.ವಿಜಯ್ ಇದ್ದರು.
ಸ್ಥಳಕ್ಕೆ ಶಾಸಕರ ಪುತ್ರ ಭೇಟಿ : ವಿಷ ಪೂರಿತ ಬಳ್ಳಿಯನ್ನು ಸೇವಿಸಿ 48 ಕುರಿಗಳು ಸಾವನ್ನಪಿರುವ ಘಟನೆ ತಿಳಿದ ಕೂಡಲೇ ಶಾಸಕರ ಪುತ್ರ ಆಶೋಕ್ ನಾಯ್ಕ್ ಭೇಟಿ ನೀಡಿದ್ದು, ಸರಕಾರದಿಂದ ಪ್ರಾಣ ಕಳೆದುಕೊಂಡ ಕುರಿಗಳ ಮಾಹಿತಿಯನ್ನು ಸರಕಾರಕ್ಕೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ, ಶಾಸಕರು ಅನುಪಸ್ಥಿತಿಯಲ್ಲಿ ನಾನು ಭೇಟಿ ನೀಡಿದ್ದೇನೆ ನಾಳೆ ಅವರು ಸಂಪೂರ್ಣ ಮಾಹಿತಿ ಪಡೆದುಕೊಂಡು ಸರಕಾರದ ಪರಿಹಾರದ ಜೊತೆ ಶಾಸಕರ ವೈಯಕ್ತಿಕ ಪರಿಹಾರವನ್ನು ಘೋಷಿಸುವರು ಎಂದು ತಿಳಿಸಿದರು.
ಘಟನೆಯ ವಿವರ : ಉಪನಾಯಕನ ಹಳ್ಳಿ ಭಾಗದಲ್ಲಿ ಕುರಿಗಳಿಗೆ ಮೇಯಲು ಮೇವಿನ ಅಭಾವದಿಂದ ಕೆಲ ಬೆಳೆಗಳ ಕಟಾವು ಆದಮೇಲೆ ಹೊಲಗಳಲ್ಲಿನ ಹುಲ್ಲು ಮೇಯಿಸಲು ಕುರಿಗಾಹಿಗಳು ಬರುತ್ತಾರೆ ಅದೇ ರೀತಿ ಇಲ್ಲಿನ ಬೆಳೆ ಕೊಯ್ಲು ಮುಗಿದ ಬಳಿಕ ಅಲ್ಲಿ ಬಂದ ಕುರಿಗಳು ವಿಷಪೂರಿತ ಬಳ್ಳಿಯೊಂದನ್ನು ಸೇವಿಸಿ ಸಾವನ್ನಪ್ಪಿವೆ.