ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗೆ 33.05 ಲಕ್ಷ ಲಾಭ
ತಾಳಿಕೋಟಿ 05: ಪಟ್ಟಣದ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಾ. 31. 2022ಕ್ಕೆ ಅಂತ್ಯಗೊಂಡ 2021-22ನೇ ಹಣಕಾಸು ವರ್ಷದಲ್ಲಿ ಒಟ್ಟು 33.05 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಕುಂಬಾರ, ವ್ಯವಸ್ಥಾಪಕ ಶಂಕರಗೌಡ ಪಾಟೀಲ ತಿಳಿಸಿದರು.
?.7ರಂದು ನಡೆಯಲಿರುವ ಸಂಘದ 80ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಹಿನ್ನಲೆ ಪತ್ರಿಕೆಯೊಂದಿಗೆ ಮಾತನಾಡಿ ಈ ಮಾಹಿತಿ ನೀಡಿದ ಅವರು ಪ್ರಸ್ತುತ 5050 ಸದಸ್ಯರನ್ನು ಹೊಂದಿದ ಸಂಘ, ರೂ.278.82 ಲಕ್ಷ ಶೇರು ಬಂಡವಾಳ ರೂ471.69 ಲಕ್ಷ ಕಾಯ್ದಿರಿಸಿದ ನಿಧಿಗಳು ರೂ 2793.74 ಲಕ್ಷ ಠೇವುಗಳು, ರೂ4583.01 ಲಕ್ಷ ದುಡಿಯುವ ಬಂಡವಾಳ ಹೊಂದಿ ಆರ್ಥಿಕವಾಗಿ ಸದೃಢವಾಗಿದೆ.
ಪ್ರಸಕ್ತ ಸಾಲಿನಲ್ಲಿ 2870.12 ಲಕ್ಷ ರೂ ಸಾಲ ವಿತರಿಸಿದ್ದು, ಈ ವರ್ಷಾಂತ್ಯಕ್ಕೆ ಠೇವುಗಳು ರೂ2793.74 ಲಕ್ಷದಷ್ಟು ಹೆಚ್ಚಾಗಿದೆ. ಗ್ರಾಹಕರಿಗೆ ಈ ಬಾರಿ ಶೇ.6 ರಂತೆ ಲಾಭಾಂಶ ನೀಡಲು ಆಡಳಿತ ಮಂಡಳಿ ತೀರ್ಮಾನಿ ಸಿದೆ. ಈ ಅವಧಿಯಲ್ಲಿ ಬೆಳೆಸಾಲ ಹಾಗೂ ಕೃಷಿಯೇತರ ಸಾಲಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.
ಸಂಘದ ಸರ್ವತೋಮುಖ ಬೆಳವಣಿಗೆ ಹಾಗೂ ಅಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ಸಂಘದ ಸದಸ್ಯರು, ಗ್ರಾಹಕರು, ಠೇವುದಾರರು, ಹಿತೈಷಿಗಳು ಜೊತೆಗೆ ಪ್ರಮುಖವಾಗಿ ಸಂಘದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಪಾತ್ರ ಪ್ರಮುಖವಾಗಿದೆ. ಅವರೆಲ್ಲರಿಗೂ ನಾನು ಈ ಸಂದರ್ಭದಲ್ಲಿ. ಋಣಿಯಾಗಿರುವೆ ಎಂದರು