ಬಳ್ಳಾರಿ

ಗಣೇಶ ದೇವಸ್ಥಾನದಲ್ಲಿ 23ನೇ ವರ್ಷದ ಮಂಡಲ ಪೂಜೆ

ಗಣೇಶ ದೇವಸ್ಥಾನದಲ್ಲಿ 23ನೇ ವರ್ಷದ ಮಂಡಲ ಪೂಜೆ

ಬಳ್ಳಾರಿ 21:  ನಗರದಲ್ಲಿ 39ನೇ ಮತ್ತು 35ನೇ ವಾರ್ಡ್ ನಲ್ಲಿ ಬರುವ ಕೆ ಹೆಚ್ ಬಿ ಕಾಲೊನಿಯಲ್ಲಿರುವ ಗಣೇಶ ದೇವಸ್ಥಾನದಲ್ಲಿ ಬಳ್ಳಾರಿ ಧರ್ಮಶಾಸ್ತ್ರ ಭಕ್ತ ಮಂಡಳಿ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ 23ನೇ ವರ್ಷದ ಮಂಡಲ ಪೂಜೆಯನ್ನು ಹಿರಿಯ ಗುರುಸ್ವಾಮಿಗಳಾದ ಚಾತು ಗುರುಸ್ವಾಮಿ ಅವರ ನೇತೃತ್ವದಲ್ಲಿ ದಿ. 20ರಂದು ನೆರೆವೇರಿಸಲಾಯಿತು.ಪೂಜೆಯಲ್ಲಿ ನೂರಾರು ಭಕ್ತರು ಆಗಮಿಸಿ ಅಯ್ಯಪ್ಪನ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದರು. ಹಾಗೆ ಈ ಪೂಜೆಯಲ್ಲಿ ಯುವ ನಾಯಕ ಬಳ್ಳಾರಿ ಕಾಂಗ್ರೆಸ್ ನಗರ ವಿಧಾನಸಭೆ ಕ್ಷೇತ್ರದ ಆಕಾಂಕ್ಷಿ ನಾರಾ ಭರತ್ ರೆಡ್ಡಿ ಹಾಗೂ 35ನೇ ವಾರ್ಡ್ ನ ಮಹಾನಗರ ಪಾಲಿಕೆಯ ಸದಸ್ಯ ವಿ.ಶ್ರೀನಿವಾಸುಲು ಮಿಂಚು, 39ನೇ ವಾರ್ಡ್ ನ ಯುವ ನಾಯಕರು ಪಿ.ಜಗನ್ನಾಥ್, ವಿದ್ಯಾನಗರ ವಾಸು, ಹೊನ್ನೂರ್ ಸ್ವಾಮಿ, ಹಂಪಿ ಮಲ್ಲಿ, ರಾಜೇಶ್, ಡೆಲ್ಟಾ ರವಿ, ಹಾಗೂ ಧರ್ಮಶಾಸ್ತ್ರ ಭಕ್ತ ಮಂಡಳಿ ಸದಸ್ಯರಾದ ಶ್ರೀನಾಗೇಶ್ ಗುರುಸ್ವಾಮಿ, ಸೀಟ್ ಸೀನ ಗುರುಸ್ವಾಮಿ ,ವಾಟರ್ ಸೀನ ಗುರುಸ್ವಾಮಿ, ಬಿಜೆಪಿ ಸೀನ ಸ್ವಾಮಿ, ಹನುಮಂತ ಸ್ವಾಮಿ, ಗಾದಿಲಿಂಗ ಸ್ವಾಮಿ, ಬೀರಪ್ಪಸ್ವಾಮಿ, ಕಾತರ್ಿಕ್ ಸ್ವಾಮಿ, ಚಂದ್ರ ಸ್ವಾಮಿ, ಇನ್ನು ಅಯ್ಯಪ್ಪ ಭಕ್ತಾದಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ