ನೇತಾಜಿ ಸುಭಾಷ್ ಚಂದ್ರ ಬೋಸ್ರ 125ನೇ ಜನ್ಮ ದಿನಾಚರಣೆ
ಬಳ್ಳಾರಿ 23: ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಜಿಲ್ಲಾ ಸಮಿತಿಗಳಿಂದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಸಮರಶೀಲ ನೇತಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜನ್ಮ ದಿನಾಚರಣೆಯನ್ನು ಈ ಮೂರು ಸಂಘಟನೆಗಳ ಜಿಲ್ಲಾ ಕಛೇರಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರು ಕೆ.ಎಮ್. ಈಶ್ವರಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಭಾವಚಿತ್ರಕ್ಕೆ ಮಾಲಾರೆ್ಣ ಮಾಡಿ ಮಾತನಾಡುತ್ತಾ ಯಾವುದೇ ಅನ್ಯಾಯ ಅಥವಾ ಶೋಷಣೆಯು ಘಟಿಸಿದಾಗ ಧ್ಯೆರ್ಯವಾಗಿ ತಲೆಯೆತ್ತಿ ಅದನ್ನು ಸಂಪೂರ್ಣವಾಗಿ ವಿರೋಧಿಸಬೇಕು. ‘ಅನ್ಯಾಯ ಮತ್ತು ಅಸತ್ಯದೊಂದಿಗೆ ರಾಜಿ ಮಾಡಿಕೊಳ್ಳವುದಕ್ಕಿಂತ ದೊಡ್ಡ ಅಪಾರಾದ ಇನ್ನೊಂದಿಲ್ಲ' ಎಂದು ನೇತಾಜಿ ರವರು ಹೇಳುತ್ತಾರೆ. ಐಎನ್ಎ ಕಟ್ಟಿ ಹೆಣ್ಣು ಮಕ್ಕಳು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಕರೆ ನೀಡಿ, ಮಹಿಳಾ ಸೈನಿಕರ ತುಕಡಿಯಾದ ಝಾನ್ಸಿ ರಾಣಿ ರೆಜಿಮೆಂಟ್ನ್ನು ಸ್ಥಾಪಿಸಿದರು ಎಂದು ನುಡಿದರು.
ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಅವರು ಮಾತನಾಡುತ್ತಾ ‘ಸ್ವಾತಂತ್ರ್ಯ ಜ್ಯೋತಿಗೆ ತನ್ನ ರಕ್ತ ತರ್ಣ ಮಾಡಿದ ಧೀರ, ವಿದ್ಯಾರ್ಥಿ-ಯುವಜನರ ಎದೆಯಲ್ಲಿ ಹೋರಾಟದ ಕಿಚ್ಚು ಹಚ್ಚಿದ ಸ್ವಾತಂತ್ರ್ಯ ಸಂಗ್ರಾಮದ ಸಮರಶೀಲ ನೇತಾರರು ನೇತಾಜಿ ಸುಭಾಷ್ ಚಂದ್ರ ಬೋಸ್' ರವರು. ಅವರ ಜೀವನಾದರ್ಶಗಳನ್ನು ವಿದ್ಯಾರ್ಥಿ ಯುವಜನರು ಅನುಸರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ ಅವರು ಮಾತನಾಡುತ್ತಾ ಶಿಕ್ಷಣದ ವ್ಯಾಪರಿಕರಣ, ಹಸಿವಿನ ಆಕ್ರಂದನ, ಬಡತನ, ನಿರುದ್ಯೋಗ, ಮಹಿಳೆಯರ ಮೇಲಿನ ಅಪಮಾನ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ-ಅನ್ಯಾಯವನ್ನು ಕೊನೆಗಾಣಿಸಿ, ಎಲ್ಲಾ ಮಾನವರು ಸಂತಸದಿ ಸಮನಾಗಿ ತಲೆಯೆತ್ತಿ ಬದುಕುವ ನೇತಾಜಿ ಕನಸಿನ ಸಮಾಜವಾದಿ ಭಾರತ ಕಟ್ಟುವ ಸಂಕಲ್ಪ ತೊಡೋಣ ಎಂದು ಕರೆ ನೀಡಿದರು.
ನಗರದ ಕಂಟೊನ್ಮೆಂಟ್ ಹತ್ತಿರದ ವಿಮ್ಸ್ ಕ್ರೀಡಾಂಗಣ, ಐಟಿಐ ಕಾಲೇಜು ಮೈದಾನ ಮುನಿಸಿಪಾಲ್ ಮೈದಾನ, ಜಿಲ್ಲಾ ಕ್ರೀಡಾಂಗಣವನ್ನೊಳಗೊಂಡಂತೆ ಜಿಲ್ಲೆಯ ಹಲವೆಡೆ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಗುರಳ್ಳಿ ರಾಜ, ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ ದೇವತ್ಕಲ್, ಕಛೇರಿ ಕಾರ್ಯದರ್ಶಿ ಕೆ.ಈರಣ್ಣ, ಜಿಲ್ಲಾ ಸೆಕ್ರೆಟರಿಯೆಟ್ ಸದಸ್ಯರಾದ ಎಮ್.ಶಾಂತಿ, ಕಂಬಳಿ ಮಂಜುನಾಥ, ಅನುಪಮಾ, ನಿಹಾರಿಕ, ಉಮಾದೇವಿ, ಪ್ರಮೋದ್, ಜಂಟಿ ಕಾರ್ಯದರ್ಶಿ ರೇಖಾ, ವಿದ್ಯಾವತಿ, ಉಮೇಶ್ ಎಸ್ ಮತ್ತು ಸದಸ್ಯರು, ವಿದ್ಯಾರ್ಥಿಗಳು ಮತ್ತು ನೂರಾರು ಸಾರ್ವಜನಿಕರು ಭಾಗಿಯಾದರು.