-ಜನೌಷಧಿ ಆರೋಪ: ಪ್ರತಿಭಟನಾ ಸ್ಥಳಕ್ಕೆ ಶಾಸಕ ಸೋಮಶೇಖರ್ ರೆಡ್ಡಿ .,-
ಬಳ್ಳಾರಿ: ಬಡರೋಗಿಗಳ ಅನುಕೂಲವಾಗುವ ಜನೌಷಧಿ ಕೇಂದ್ರವನ್ನು ವಿಮ್ಸ್ ನಿರ್ದೇಶಕರ ಡಾ.ಗಂಗಾಧರ ಗೌಡ ಷಡ್ಯಂತ್ರದಿಂದ ಮುಚ್ಚಿಸಿದ್ದಾರೆ ಎಂದು ಆರೋಪಿಸಿ ಜನೌಷಧಿ ಕೇಂದ್ರದ ಮುಖ್ಯಸ್ಥ ಪ್ರದೀಪ್ ಕುಮಾರ್ ವಿಮ್ಸ್ ಆವರಣದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟವಧಿ ಪ್ರತಿಭಟನಾ ಸ್ಥಳಕ್ಕೆ ಶಾಸಕ ಸೋಮಶೇಖರ್ ರೆಡ್ಡಿ ಅವರು ಸೋಮವಾರ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ.
ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಅವರನ್ನು ಸ್ಥಳಕ್ಕೆ ಕರೆಸಿ ಜನೌಷಧಿ ಕೇಂದ್ರದ ಸಮಸ್ಯೆ ಕುರಿತು ಕೂಲಂಕುಷವಾಗಿ ಮಾಹಿತಿ ಪಡೆದುಕೊಂಡರು. ಬಡರೋಗಿಗಳಿಗೆ ಅನುಕೂಲವಾಗುವ ಜನೌಷಧಿ ಕೇಂದ್ರವನ್ನು ಅನಾವಶ್ಯಕವಾಗಿ ಮುಚ್ಚಿಸಿರುವುದನ್ನು ಮತ್ತೂ ಆರೋಗ್ಯ ಸಚಿವ ಸುಧಾಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರ ಪತ್ರಗಳಿಗೆ ಕಿಮ್ಮತ್ತಿಲ್ಲವಾ ಎಂದು ಖಂಡಿಸಿ ಶಾಸಕ ಸೋಮಶೇಖರ್ ರೆಡ್ಡಿ ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸೋಮಶೇಖರ್ ರೆಡ್ಡಿ ಅವರು, ಕೂಡಲೇ ಜನೌಷಧಿ ಕೇಂದ್ರವನ್ನು ಪುನಃ ಆರಂಭ ಮಾಡಲು ರಿನಿವಲ್ ಮಾಡಿಕೊಟ್ಟು ಬಡರೋಗಿಗಳಿಗೆ ಓಷಧಿ ಸಿಗುವಂತಾಗಲಿ ಎಂದರು.ಕೂಡಲೇ ಜನೌಷಧಿ ಕೇಂದ್ರವನ್ನು ರಿ ಓಪನ್ ಮಾಡಲು ರಿನಿವಲ್ ಮಾಡಿಕೊಟ್ಟು, ಜನೌಷಧಿ ಕೇಂದ್ರಕ್ಕೆ ಸೂಕ್ತವಾದ ಸ್ಥಳವನ್ನು ನಿಗದಿ ಮಾಡಿಕೊಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಡವರಿಗಾಗಿ ಆರಂಭಿಸಿರುವ ಜನೌಷಧಿ ಕೇಂದ್ರವನ್ನು ಬಡಜನರಿಗೆ ಓಷಧಿಗಳು ತಲುಪಬೇಕು. ಬಡವರಿಗೆ ಅಧಿಕ ದುಡ್ಡು ತೆಗೆದುಕೊಂಡು ಓಷಧಿ ಮಾರಾಟ ಮಾಡಬಾರದು ಎಂದು ಸೂಚನೆ ಕೊಟ್ಟರು.ಈ ಸಂದರ್ಭದಲ್ಲಿ ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ, ವಿಮ್ಸ್ ಆಡಳಿತ ಮಂಡಳಿ (ಇಸಿ) ಸದಸ್ಯ ಯು.ಶಿವಾನಂದ, ಕೃಷ್ಣರೆಡ್ಡಿ ಸೇರಿದಂತೆ ಹಲವರು ಜನರು ಇತರರು ನೆರೆದಿದ್ದರು.