ಕ್ರೀಡಾಕೂಟದಲ್ಲಿ ಸಾಧನೆ //
ಲೋಕದರ್ಶನ ವರದಿ
ಮುಂಡಗೋಡ:ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಮುಂಡಗೋಡ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿನ ಆದಿಜಾಂಭವ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಸಾಧನೆ ತೋರಿದ್ದಾರೆ.
ರೋಷನ ಪವಾರ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ, ಚಕ್ರ ಎಸೆತ ದ್ವಿತೀಯ ಸ್ಥಾನ, ಜಾವಲಿನ್ ಎಸೆತದಲ್ಲಿ ತೃತೀಯ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಮತ್ತು ವಾಲಿಬಾಲ್ ದ್ವಿತೀಯ ಸ್ಥಾನ, ರೀಲೆ 100*400 ಮೂರನೇ ಸ್ಥಾನ, ನಾಮದೇವ ಕಾಟ್ರೋಟ 1500 ಮೀಟರ್ ಓಟ ಮೂರನೇ ಸ್ಥಾನ, ಆಕಾಶ ರಾಥೋಡ 200 ಮೀಟರ್ ಓಟದಲ್ಲಿ ಮೂರನೇ ಸ್ಥಾನ ಮತ್ತು ಮಮತಾ ಬಿಜಾಪುರ ಎತ್ತರ ಜಿಗಿತದಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ. ದೈಹಿಕ ಶಿಕ್ಷಕ ಗೋಪಾಲಕೃಷ್ಣ ನಾಯಕ ಇವರಿಗೆ ತರಬೇತಿ ನೀಡಿದ್ದರು.
ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾದ ಮತ್ತು ಭಾಗವಹಿಸಿದ ವಿದ್ಯಾರ್ಥಿಗಳಾದ ವೀಣಾ ಚಲವಾದಿ, ನಂದಿನಿ ಅಕ್ಕಿವಳ್ಳಿ, ಮುಸ್ಕಾನ್ ಯಲ್ಲಾಪುರ, ಲಕ್ಷ್ಮೀ ಆಡೂರ ಇವರಿಗೆ ಸಂಸ್ಥೆಯ ಅಧ್ಯಕ್ಷ ಎಸ್. ಫಕ್ಕೀರ್ಪ, ಮುಖ್ಯ ಶಿಕ್ಷಕ ಎಸ್.ಡಿ.ಮುಡೆಣ್ಣವರ ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.