ಬಳ್ಳಾರಿ

ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಜಯಂತ್ಯೋತ್ಸವ ಸಂಗೀತ ನಿಮಿತ್ಯ ಕಾರ್ಯಕ್ರಮ

ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಜಯಂತ್ಯೋತ್ಸವ ಸಂಗೀತ ನಿಮಿತ್ಯ ಕಾರ್ಯಕ್ರಮ

ಲೋಕದರ್ಶನ ವರದಿ 

ಬಳ್ಳಾರಿ 26: ಗುರುಕುಲ ಸಂಗೀತ ಕಲಾ ಸಂಸ್ಥೆ ಭಾಗ್ಯನಗರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ  ಜಯಂತ್ಯೋತ್ಸವ ಅಂಗವಾಗಿ ಕೊಪ್ಪಳದ ಪವಾರ್ ಆಡಿಟೋರಿಯಂ ಹಾಲ್‌ನಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 


ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಪಿ ಮರೇಗೌಡರ್ ಮಾತನಾಡಿ ಪುಟ್ಟರಾಜ ಗವಾಯಿಗಳವರು ಸಂಗೀತಕ್ಕೆ ನೀಡಿದ ಕೊಡುಗೆ ಅಪಾರವಾದದ್ದು,ಕಣ್ಣಿಲ್ಲದ ಅದೆಷ್ಟೋ ಜನರ ಬಾಳಿಗೆ ಬೆಳಕಾಗಿ ಅವರಿಗೆ ದಾರೀದೀಪವಾದ ಪುಟ್ಟರಾಜ ಕವಿ ಗವಾಯಿಗಳವರು ಸಂಗೀತದಲ್ಲಿ ಅನೇಕ ಪುಸ್ತಕಗಳನ್ನು ಹಾಗೂ ಸಾಹಿತ್ಯದಲ್ಲಿ  ಪುರಾಣ ಪುಣ್ಯ ಕಥೆಗಳನ್ನು ಬರೆದು ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಅಂತಹ ಮಹಾನ್ ಗವಾಯಿಗಳವರ ಜಯಂತೋತ್ಸವವನ್ನು ಆಚರಿಸಿದ್ದು ನಿಜಕ್ಕೂ ಸಂತಸದ ವಿಷಯವಾಗಿದೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಸಂಸ್ಥೆಯ ವತಿಯಿಂದ ಇದೇ ರೀತಿ ಮುಂದುವರೆಯಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಕ ಮಹೆಬೂಬ್ ಕಿಲ್ಲೇದಾರ್ ಮಹೇಶ್ ಮೋರಿಗೇರಿ  ವೀರ​‍್ಪ ಶ್ಯಾವಿ ಭಾಗವಹಿಸಿದ್ದರು  

ಕಾರ್ಯಕ್ರಮದಲ್ಲಿ ನಾಗರಾಜ ಶ್ಯಾವಿ ಹಿಂದುಸ್ತಾನಿ ಬಾನ್ಸುರಿ ವಾದನ, ವಿಜಯಲಕ್ಷ್ಮಿ ನಾಗರಾಜ ಸುಗಮ ಸಂಗೀತ, ಮಲ್ಲಿಕಾರ್ಜುನ ವಚನ ಸಂಗೀತ, ವೈಷ್ಣವಿ ರಾಘವೇಂದ್ರ ಜಾನಪದ ಸಂಗೀತ  ಪ್ರಸ್ತುತಪಡಿಸಿದರು. ಹಾರ್ಮೋನಿಯಂ ಸಾಥಿಯಾಗಿ ಹಿರಿಯ ಕಲಾವಿದರಾದ ರಾಮಚಂದ್ರ​‍್ಪ ಉಪ್ಪಾರ ತಬಲಾ ಸಾಥಿಯಾಗಿ ರಾಘವೇಂದ್ರ ಗಂಗಾವತಿ ತಾಳವಾದ್ಯದಲ್ಲಿ ಕೃಷ್ಣ ಸೊರಟೂರು ಬಾನ್ಸುರಿ ಸಾಥಿಯಲ್ಲಿ ಹೃಷಿಕೇಶ್ ಮರೇಗೌಡರ್ ಭಾಗವಹಿಸಿದ್ದರು. 


ಸುದ್ದಿ ಓದಿ