ಇದೆಲ್ಲಾ ಇವರಿಗೆ ಬೇಕಿತ್ತಾ...? ನಾಲಿಗೆ ಒಳ್ಳೇಯದಾದರೆ ನಾಡೆಲ್ಲ ಒಳ್ಳೆಯದು ಎಂದು ಸುಮ್ಮನೆ ಹೇಳಿಲ್ಲ ಸ್ವಾಮಿ...!
ಇದೆಲ್ಲಾ ಇವರಿಗೆ ಬೇಕಿತ್ತಾ...?
ನಾಲಿಗೆ ಒಳ್ಳೇಯದಾದರೆ ನಾಡೆಲ್ಲ ಒಳ್ಳೆಯದು ಎಂದು ಸುಮ್ಮನೆ ಹೇಳಿಲ್ಲ ಸ್ವಾಮಿ...!
ನನಗೆ ಈಗಲೂ ತಿಳಿಯುತ್ತಿಲ್ಲ. ಅದ್ಯಾವ ಪುರುಷಾರ್ಥಕ್ಕೆ ಇವರಿದನ್ನೆಲ್ಲ ಮಾಡುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ. ಕೆಲವೊಮ್ಮೆ ಇವರೇನು ಬೇಕು ಬೇಕಂತಲೇ ಮಾತನಾಡುತ್ತಾರೋ ಇಲ್ಲ ಬುದ್ದಿ ಇಲ್ಲದೆ ಲದ್ದಿ ತಿನ್ನುವ ಕೆಲಸಕ್ಕೆ ಕೈ ಹಾಕುತ್ತಾರೋ ಗೊತ್ತಾಗುತ್ತಿಲ್ಲ. ಯಾರನ್ನೋ ಮೆಚ್ಚಿಸುವ ಬರದಲ್ಲಿ ಇನ್ಯಾರನ್ನೋ ಅವಮಾನಿಸುವುದು. ಚಪ್ಪಾಳೆ ತಟ್ಟುವಂತ ನಾಲ್ಕು ಜನಗಳಿಗಾಗಿ ಕೋಟ್ಯಾಂತರ ಜನರ ಮನಸ್ಸಿಗೆ ನೋವುಂಟು ಮಾಡುವುದು, ವೇದಿಕೆಯ ಮೇಲಿದ್ದಾಗ ಮೈಮೇಲೆ ದೆವ್ವ ಬಂದವರಂತೆ ಬಾುಗೆ ಬಂದಂತೆ ಹರಟುವುದು, ನಂತರ ಅವರ ಮಾತುಗಳಿಗೆ ತೀರ್ವ "ರೋಧ ಎದುರಾಗುತ್ತಲೇ ತಪ್ಪಾುತು ಎಂದು ಕೈ ಮುಗಿಯುವುದು, ಅಷ್ಟಕ್ಕೆ ಸುಮ್ಮನಿರದೆ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತ ಮುಂದುವರಿಯುವುದು ಇವರಿಗೆ ಕೆಟ್ಟಚಾಳಿಯಾಗಿ ಮಾರ್ಪಟಟಿದೆ. ಒಳ್ಳೆಯದನ್ನು ಮಾತನಾಡುವುದಕ್ಕೆ ಕೊಟ್ಟ ನಾಲಿಗೆಯನ್ನು ಬಳಸಿಕೊಂಡು ಕೆಟ್ಟದನ್ನು ಬಿಂಬಿಸುವ ಯತ್ನ ಮಾಡಿ ಕೊನೆಗೆ ತಾನೇನು ಸಾಧಿಸಿದೆ ಎನ್ನುವುದನ್ನು ತಿಳಿಯದೇ ಸಾಗುವ ಈ ಜನಗಳನ್ನು ಕಂಡಾಗ ಒಂದು ತರಹದ ಅಸಹ್ಯದ ಭಾವನೆ ಉಂಟಾಗುತ್ತದೆ. ಅದರಲ್ಲೂ ಯಾರನ್ನು ನಾವು ಆರಧಿಸುತ್ತಿರುತ್ತೇವೊ, ಯಾರನ್ನು ನಾವು ನಾಯಕರೆಂದು ಬಿಂಬಿಸಿರುತ್ತೇವೊ, ಯಾರಗೆ ನಾವು ದೊಡ್ಡದಾದ ಸ್ಥಾನ ಮಾನ ನೀಡಿರುತ್ತೇವೊ, ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಮರ್ಯಾದೆ ನೀಡಿರುತ್ತೇವೊ ಅವರೇ ಮಣ್ಣು ತಿನ್ನುವ ಕೆಲಸ ಮಾಡಿದರೆ ಮನಸ್ಸಿಗೆ ತುಂಬ ಬೇಸರವಾಗದೇ ಇರುತ್ತದೆಯೇ? ಒಂದು ಕ್ಷಣದ ತೃಪ್ತಿಗಾಗಿ ತಮ್ಮ ಇಡೀ ಬದುಕಿನುದ್ದಕ್ಕೂ ಸಂಪಾದಿಸಿಕೊಂಡು ಬಂದ ಹೆಸರನ್ನು ಹಾಳು ಮಾಡಿಕೊಂಡಾಗ ಅಯ್ಯೋ ಇವರಿಗೇನು ಬಂದಿತ್ತು ದೊಡ್ಡ ರೋಗ? "ಗೆಕೆ ಮಾತನಾಡಿದರು? ಎಂದು ಉದ್ಘಾರ ತೆಗೆದು ಕೊನೆಗೆ ಇವರು ಕೂಡ ಅವರೇನಾ? ಎಂದು ಒಂದು ರೀತಿಯ ತಿರಸ್ಕೃತರ ಪಟ್ಟಿಯಲ್ಲಿಟ್ಟು ಬಿಡುತ್ತೇವೆ. ಅಲ್ಲಿಗೆ ಆದರ್ಶಗಳೆಲ್ಲ ಸತ್ತು, ಸಮಾಜದಲ್ಲಿ ಹೆಸರು ಮಾಡಿದ್ದ ಇವರ ಬದುಕಿಗೆ ಸೂತಕದ ಛಾಯೆ ಆವರಸಿ ಬಿಡುತ್ತದೆ. ಅದರೆ ಇದ್ಯಾವುದನ್ನು ಲೆಕ್ಕಿಸದೇ ಪ್ರತಿನಿತ್ಯ ಒಬ್ಬನಾದರೂ ಈ ಎಡವಟ್ಟು ಕಾರ್ಯಕ್ಕೆ ಅಣಿಯಾಗಿ ಸಮಾಜದ ಜನರಿಂದ ಛೀ...! ಥೂ...! ಎಂದು ಉಗಿಸಿಕೊಳ್ಳುತ್ತಾನೆ. ಇದು ಈ ದೇಶದ ದೌರ್ಭಾಗ್ಯವೆನಿಸುತ್ತದೆ.
ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದು ಹೊರಾಳಾಡುತ್ತಿರುವುದನ್ನು ಲೆಕ್ಕಿಸದ ಕೆಲವು ಜನಗಳು ಮತ್ತೊಬ್ಬರ ತಟ್ಟೆಯಲ್ಲಿ ನೋಣವೇನಾದರೂ ಬಿದ್ದಿದೆಯಾ ಎಂದು ಹುಡುಕಾಡಲು ಮುಂದಾಗುತ್ತಾರೆ. ಕೈಯಲ್ಲಿ ಮೈಕು ಸಿಕ್ಕುತ್ತಲೇ ಒಳ್ಳೆ ಮೈಕಾಸುರನ ಹಾಗೆ ಅಬ್ಬರಿಸಿ ಬೊಬ್ಬಿರಿದು ಉಗ್ರ ಪ್ರತಾಪಿಯಂತೆ ಪೋಸು ನೀಡುತ್ತಾರೆ. ಹಾಗೆ ಪೋಸು ನೀಡಿ ತಮ್ಮನ್ನು ಅಭಿಮಾನಿಸುವ ಜನಗಳಿಂತಲೇ ತಿರಸ್ಕಾರದ ಗಾಳಿಗೆ ನಲುಗಿ ಹೋಗುತ್ತಾರೆ. ಇಂಥಹ ಕಾರ್ಯಕ್ಕೆ ಈ ಬಾರಿ ಕೈ ಹಾಕಿದವರು ಪ್ರಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಮಾಜಿ ಶಾಸಕ ಕಾಶಪ್ಪನವರ. ಹಂಸಲೇಖಾ ಅವರು ಸಮಾನತೆಯ ಕುರಿತು ಮಾಡತನಾಡುವ ವೇಳೆಯಲ್ಲಿ ನಾಲಿಗೆ ಹರಿಬಿಟ್ಟು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರೆ ಕಾಶಪ್ಪನರವ ಅವರು ಪ್ರಚಾರದ ಹುಚ್ಚಿಗೆ ಬಿದ್ದು ಬಾುಗೆ ಬಂದಂತೆ ಹರಟಿ "ವಾದದ ಕೇಂದ್ರಬಿಂದುವಾಗಿರುವುದು "ಷಾಧನೀಯ. ಕಾಶಪ್ಪನವರ ಕಥೆ ಬಿಡಿ. ಏಕೆಂದರೆ ಸದಾ ಸುದ್ದಿಯಲ್ಲಿರುವುದಕ್ಕೆಂದೆ "ವಾದಗಳನ್ನು ಹುಟ್ಟು ಹಾಕುವ ಗುಣ ಕಾಶಪ್ಪನವರಿಗೆ ಕರಗತವಾಗಿ ಹೋಗಿದೆ. "ಗಾಗಿ ಅವರು ಏನೇ "ವಾದಾತ್ಮಕ ಹೇಳಿಕೆ ನೀಡಿದರು ಜನ ಅವರನ್ನು ನಿರ್ಲಕ್ಷ ಮಾಡಿ ಬಿಡುತ್ತಾರೆ. ಆದರೆ ಯಾವತ್ತೂ ಯಾರ ಬಗ್ಗೆಯೂ ಮಾತನಾಡದ ವ್ಯಕ್ತಿ, ಸಂಗೀತ ಲೋಕದಲ್ಲಿ ಒಂದು ಹೊಸ ಅಲೆಯನ್ನು ಸ್ಠೃಸಿದ ಹಂಸಲೇಖರಂತ ಶ್ರೇಷ್ಠ ಸಂಗೀತಗಾರ "ವಾದಾತ್ಮಕವಾಗಿ ಮಾತನಾಡಿರುವುದು ಇಂದು ತೀರ್ವ ಚರ್ಚೆಗೆ ಗ್ರಾಸವಾಗಿರುವುದಲ್ಲದೆ ಪರ "ರೋಧ ಜೋರಾಗಿ ನಡೆಯುತ್ತಿದೆ. ದಲಿತರು ಮತ್ತು ಬಲಿತರು ಎಂದು ಮಾತನಾಡುತ್ತ ತಮ್ಮ ಮಾತಿನ ನಡುವೆ ಪೇಜಾವರ ಶ್ರೀಗಳನ್ನು ಎಳೆದು ತಂದು "ವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇಷ್ಟು ದಿನ ನಾದವನ್ನು ಹರಿಬಿಟ್ಟ ವ್ಯಕ್ತಿ ಇಂದು ನಾಲಿಗೆಯನ್ನು ಹರಿ ಬಿಡುವ ಮೂಲಕ ಉನ್ನತ ಸ್ಥಾನದಿಂದ ಒಂದು ಬಾರಿಗೆ ನೆಲಕ್ಕಪ್ಪಳಿಸಿರುವುದು ನಿಜಕ್ಕೂ "ಷಾಧದ ಸಂಗತಿ. ದಲಿತರ ಮನೆಗೆ ಹೋದ ಶ್ರೀಗಳು ದಲಿತರ ಆಹಾರ ಪದ್ಧತಿಯನ್ನು ಸ್ವೀಕರಿಸಿಬೇಕಿತ್ತು ಆಗ ಅವರ ಸಮಾನತೆಯ ಮಂತ್ರ ಸತ್ಯವಾಗುತ್ತಿತ್ತು ಎನ್ನುವ ಮಟ್ಟದಲ್ಲಿ ಮಾತನಾಡಿದ ಅವರು ಮಾಂಸಾಹಾರ ಸೇವನೆ ಮಾಡಿದರೆ ಅದು ಸಮಾನತೆಗೆ ನಾಂದಿ ಹಾಡುತ್ತಿತ್ತು ಎನ್ನುವ ಮಟ್ಟದಲ್ಲಿ ಬಿಂಬಿಸಿದ್ದಾರೆ. ಕನ್ನಡ ಸಾ"ತ್ಯದ ಬಗ್ಗೆ ಹಾಗೂ ಕನ್ನಡ ಭಾಷೆಯ ಬಗ್ಗೆ ಮಾತನಾಡುವ ಆ ವ್ಯಕ್ತಿ ಈ ರೀತಿಯ ಹೇಳಿಕೆಯ ಪರಿಣಾಮವೇನಾಗಬಹುದು ಎನ್ನುವುದನ್ನು ಒಂದು ಕ್ಷಣವೂ ಕೂಡ ಯೋಚಸಲಿಲ್ಲವೇಕೆ ಎನ್ನುವುದೇ ನನಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಅದರಲ್ಲೂ ಅವರು ಹೇಳಿದ್ದು ಯಾವ ಅರ್ಥದಲ್ಲಿ ಎನ್ನುವುದು ಬಹುಶಃ ಅವರಿಗೆ ಖಚಿತತೆ ಇಲ್ಲ. ಆದ ಕಾರಣವೇ ಅದನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಅವರ ಅರ್ಧಾಂಗಿಯೇ ಅದನ್ನು "ರೋಧಿಸುತ್ತಾಳೆಂದರೆ ಇವರು ಮಾತನಾಡಿದ ಭಾವನೆ ಬೇರೊಬ್ಬರಿಗೆ ಹೇಗಾಗಿರಬಾರದು ಹೇಳಿ? ಅದೇ ಕಾರಣಕ್ಕಾಗಿಯೇ ಹಂಸಲೇಖರಿಂದ "ವಾದವನ್ನು ಅರಗಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ. ಈ ಕಾರಣದಿಂದಾಗಿಯೇ ಸಮಾಜದ ಕಣ್ಣಿನಲ್ಲಿ ನಿಕೃಷ್ಟವಾಗುತ್ತಿರುವುದಂತೂ ಸತ್ಯ.
ಇನ್ನು ಅವರ ಹೇಳಿಕೆಯನ್ನು ಕೆಲವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು "ರೋಧ ಮಾಡುತ್ತಿದ್ದಾರೆ. ಯಾರಾದರೂ ಸಮರ್ಥನೆ ಮಾಡಿಕೊಳ್ಳಲಿ ಬಿಡಲಿ ಆದರೆ ಈ ಹೇಳಿಕೆುಂದ ಸಮಾಜಕ್ಕೆ ಇವರೇನು ಸಂದೇಶ ನೀಡುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ ಸಾಕು. ಇವರು ದಲಿತರು ಮತ್ತು ಬಲಿತರು ಎನ್ನುವ ಅಂತರವನ್ನು ಹೋಗಲಾಡಿಸಿ, ಸಮಾನತೆ ಬರಲಿ ಎನ್ನುವ ಸದಾಶಯ ವ್ಯಕ್ತಪಡಿಸಿದ್ದನ್ನು ಒಪ್ಪಿಕೊಳ್ಳಬಹುದು. ಆದರೆ ಅದನ್ನು ಮಾತನಾಡುತ್ತ ಮಾಂಸಾಹಾರ ಸೇವನೆ ಮಾಡಿದಾಗ ಮಾತ್ರ ಜಾತ್ಯತೀತವಾದಿಗಳಾಗುತ್ತಾರೆ ಎನ್ನುವ ಮಟ್ಟಕ್ಕೆ ಮಾತನಾಡಿದ್ದು ನಿಜಕ್ಕೂ ಖೇಧಕರ. ಯಾರನ್ನು ಮೆಚ್ಚಿಸುವುದಕ್ಕೆ ಈ ಮಾತುಗಳನ್ನಾಡಿದರೋ ಗೊತ್ತಿಲ್ಲ. ಆದರೆ ಆ ಒಂದು ಮಾತಿನಿಂದ ತಮ್ಮ ಮೇಲೆ ಅಭಿಮಾನಿಗಳು ಇಟ್ಟ ಭರವಸೆಗೆ ಮಸಿ ಬಳಿದು ಬಿಟ್ಟರೇನೋ ಎನ್ನುವ ಭಾವನೆ ನನ್ನನ್ನು ಕಾಡುತ್ತಿದೆ. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಹಾಡುಗಳನ್ನು ಯಾವತ್ತೂ ಮರೆಯಲು ಸಾಧ್ಯ"ಲ್ಲ. ರಿಯಾಲಿಟಿ ಹೆಸರಿನ ರೀಲ್ ಷೋನಲ್ಲಿ ಅವರು ಮಾತನಾಡುತ್ತದ್ದ ಅರ್ಥಪೂರ್ಣವಾದ ಮಾತುಗಳನ್ನು ಎಂದು "ರೋಧಿಸಲು ಸಾಧ್ಯ"ಲ್ಲ. ಆದರೆ ಇಂದು ಅವರು ಆಡಿದ ಮಾತುಗಳನ್ನು ಯಾವ ಕಾಲಕ್ಕೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅದ್ಯಾಕೋ ಗೊತ್ತಿಲ್ಲ ಇತ್ತಿಚಿನ ದಿನಗಳಲ್ಲಿ ಒಂದು ಧರ್ಮವನ್ನು ಮುಂದೆ ಮಾಡಿಕೊಂಡು ಮಾತನಾಡುವುದು, ಅವಹೇಳನಕಾರಿಯಾದ ಹೇಳಿಕೆ ನೀಡುವುದು ಟ್ರೆಂಡ್ ಆಗಿ ಬಿಟ್ಟಿದೆ. ಅದರಲ್ಲೂ "ಂದೂತ್ವವನ್ನು "ರೋಧಿಸಿ ಮಾತನಾಡುವುದು ಕೆಲವರಿಗೆ ರೋಗವಾಗಿ ಅಂಟಿದೆ. ಆ ಅಂಟು ರೋಗವನ್ನು ಮತ್ತೊಬ್ಬರಿಗೆ ಅಂಟಿಸಲು ಪ್ರಯತ್ನ ಮಾಡುತ್ತ ಇಂಥಹ ಅನಾಹುತಗಳಿಗೆ ಕಾರಣವಾಗುತ್ತಿರುವುದು ನಿಜಕ್ಕೂ "ಷಾಧನೀಯ. ಭಾರತ ಸಂ"ಧಾನದಲ್ಲಿ ಎಲ್ಲ ಧರ್ಮದವರಿಗೂ ಅವಕಾಶ ನೀಡಿದ್ದಾರೆ. ಇಲ್ಲಿ ಯಾವುದೇ ಧರ್ಮವನ್ನು ರ್್ಟರಾಯ ಧರ್ಮವೆಂದು ಸಾರಿಲ್ಲ. ಜಾತ್ಯತೀತ ಭಾರತ ಎಂದೇ ಉಲ್ಲೇಖ ಮಾಡಿದ್ದಾರೆ. ಆದರೂ ಈ ದೇಶವನ್ನು ಒಂದು ಧರ್ಮಕ್ಕೆ ಸೀ"ುತ ಮಾಡಲು ಹೊರಟಿದ್ದಾರೆ ಎಂದು ಬೊಬ್ಬೆ ಹೊಡೆಯುವ ಕೆಲಸ ನಿರಂತರವಾಗಿ ನಡೆಯುತ್ತಿರುವುದು ಭ"ಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ ಈ ರೀತಿಯ ಹೇಳಿಕೆಗಳನ್ನು ನೀಡುವುದರ ಮೂಲಕ ಅಲ್ಲಿ ಸೇರಿರುವ ಅವರಂತಹ ಕೆಲಸ"ಲ್ಲದ ನಾಲ್ಕು ಜನಗಳ ಬಾುಂದ ಜೈಕಾರ ಹಾಕಿಸಕೊಳ್ಳಬಹುದೇ "ನಃ ಈ ದೇಶದಲ್ಲಿ ಏನಾದರು ಬದಲಾವಣೆ ತರುವುದಕ್ಕೆ ಸಾಧ್ಯ"ದೆಯೇ ಹೇಳಿ? ನಾಲ್ಕು ಜನಗಳ ಜೈಕಾರದ ಬೆನ್ನಟ್ಟಿ ಕೋಟ್ಯಾಂತರ ಜನಗಳಿಂದ ಧಿಕ್ಕಾರ ಹಾಕಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಅದರಲ್ಲೂ ಸತ್ತವನ್ನು ಹೊತ್ತು ತಂದು ಅವಹೇಳನ ಮಾಡುವುದು ಯಾವ ಪುರುಷಾರ್ಥಕ್ಕೆ? ಇತಿಹಾಸದಲ್ಲಿ ಮರೆಯದಾವರನ್ನು ತಂದು ಮೆರೆಸುವುದು, ಅವರ ಹೆಸರನ್ನು ಮುಂದೆ ಮಾಡಿಕೊಂಡು "ವಾದ ಹುಟ್ಟಿಸುವುದು, "ವಾದವನ್ನು ಮುಂದಿಟ್ಟುಕೊಂಡು ಜನಪ್ರೀಯತೆ ಗಿಟ್ಟಿಸಿಕೊಳ್ಳುವುದು, "ವಾದವನ್ನು ಬಗೆಹಸರಿಸಿದ್ದೇವೆ, ಬಗೆಹರಿಸುತ್ತೇವೆ ಎನ್ನುತ್ತ ಮತ ಬೇಟೆಗೆ ಮುಂದಾಗುವುದು, ಸಾಮಾನ್ಯನ ಭಾವನೆಗಳಿಗೆ ಬೆಂಕಿ ಇಟ್ಟು ಅದರಲ್ಲಿ ತಮ್ಮ ಸ್ವಾರ್ಥದ ಬೇಳೆ ಬೇುಸಿಕೊಳ್ಳುವುದು ಸಧ್ಯ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇದರ ಪರಿಣಾಮವಾಗಿಯೇ ಇಂದು ಭವ್ಯ ಭಾರತದಲ್ಲಿ ಧರ್ಮದ ದಳ್ಳುರಿ ನಮ್ಮನ್ನು ಸುಡುತ್ತಿರುವುದು. ಇದರ ಕುರಿತು ನಾವು ಯೋಚಿಸುವುದೇ ಇಲ್ಲ. ಬದಲಿಗೆ ಕೆಟ್ಟ ಹೇಳಿಕೆಗಳನ್ನು ಕೇಳಿ ಕೈ ಕಟ್ಟಿ ಕುಳಿತುಕೊಳ್ಳುತ್ತೇವೆ. ನಂತರ ಅದೇ ಹಾಡು ಅದೇ ರಾಗ ಎನ್ನುವ ಹಾಗಾಗುತ್ತಿರುವುದು ಸೋಚನೀಯ ಸಂಗತಿ.
ಹಂಸಲೇಖ ಎಂದಾಕ್ಷಣ ಎಲ್ಲರ ಮನದಲ್ಲೂ ಅವರ ಹಾಡುಗಳೇ ಮಾರ್ಧನಿಸುತ್ತಿದ್ದವು. ಆದರೆ ಇಂದು ಅವರ ಹೇಳಿಕೆಯೇ ವಿಜೃಂಭಿಸುತ್ತಿರುವುದರಿಂದ ಅವರ ಪ್ರಖ್ಯಾತಿ ಇಂದು ಕುಖ್ಯಾತಿಯಾಗಿ ಪರಿಣ"ುಸುತ್ತಿದೆ. ಅದರ ಮಧ್ಯದಲ್ಲಿ ಪರ "ರೋಧಗಳು ಕೊಚ್ಚೆಯನ್ನು ಮತ್ತಷ್ಟು ಕಲಕಿ ದುರ್ಗಂಧ ಎಬ್ಬಿಸುತ್ತಿದೆ. ಇಷ್ಟಕ್ಕೂ ಹೇಳಿಕೆ ನೀಡುವ ನಾವುಗಳು ಯಾವತ್ತಾದರೂ ದೇಶಕ್ಕಾಗಿ ಏನಾದರೂ ಮಾಡಿದ್ದೀವಾ? ಕಷ್ಟದಲ್ಲಿದ್ದವರಿಗೆ ನೆರವಾಗಿದ್ದೀವಾ? ನೊಂದವರ ಕಣ್ಣೀರನ್ನು ಒರೆಸಿದ್ದೀವಾ? ಸಂಕಟದಲ್ಲಿದ್ದವರಿಗೆ ಸಮಾಧಾನ ಹೇಳಿದ್ದೀವಾ? ಇಲ್ಲಾ ಅಲ್ಲವೇ? ನಾವು ಸರಿಯಾಗಿದ್ದು ಇನ್ನೊಬ್ಬರ ಬಗ್ಗೆ ಮಾತನಾಡಿದರೆ ಅದಕ್ಕೋಂದು ಅರ್ಥ"ರುತ್ತದೆ. ಅದನ್ನು ಬಿಟ್ಟಿ ನಾವೇ ಸರಿ ಇಲ್ಲ ಎಂದು ಗೊತ್ತಿದ್ದು ಇನ್ನೊಬ್ಬರೆಡೆಗೆ ಬೆರಳು ಮಾಡಿದರೆ ಅದು ಮೂರ್ಖತನವಾಗುವುದಿಲ್ಲವೇ? ಇದೇ ಕಾರಣಕ್ಕಾಗಿಯೇ ಹಂಸಲೇಖ ಹೊತ್ತಿಸಿದ ಕಿಡಿ ಇಂದು ರಾಜ್ಯದಲ್ಲಿ ಬೆಂಕಿಯ ಕೆನ್ನಾಲಿಗೆಯನ್ನು ಚಾಚುತ್ತಿದೆ. ಅದರ ಮಧ್ಯದಲ್ಲಿ ಮಾಜಿ ಶಾಸಕ ಕಾಶಪ್ಪನವರ ಮಾತನಾಡುತ್ತ; ಸಾವರ್ಕರ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ. "ರ್ ಸಾವರ್ಕರ ಎಂದು ಕರೆಯುವುದಕ್ಕೆ ಅವನೇನು ಟಿಪ್ಪು"ನ ಹಾಗೆ ಖಡ್ಗ "ಡಿದು ಬ್ರಿಟೀಷರ "ರುದ್ಧ ಹೋರಾಟ ಮಾಡಿದ್ದಾನಾ? ಟಿಪ್ಪುವನ್ನು "ರನೆಂದು ಕರೆಯಬಹುದು ಆದರೆ ಸಾವರ್ಕರ್ನನ್ನು "ರನೆಂದು ಏಕೆ ಕರೆಯುತ್ತೀರಿ? ಎಂದು ಹೇಳುವ ಮೂಲಕ ಕೀಳು ಮಟ್ಟದ ಪ್ರಚಾರಕ್ಕೆ ಮುಂದಾಗಿರುವುದು ಈ ದೇಶದಲ್ಲಿ ಧರ್ಮವನ್ನು ಬೈದವನು ಮಾತ್ರ ಮುನ್ನಲೆಗೆ ಬರುತ್ತಾನೆ ಎನ್ನುವುದಕ್ಕೆ ಸಾಕ್ಷ್ಯ ಒದಗಿಸುತ್ತದೆ. ಒಂದು ಕೋ"ುನ ವ್ಯಕ್ತಿಯನ್ನು ಹೊಗಳುತ್ತ ಇನ್ನೊಬ್ಬರನ್ನು ತೆಗಳಿದರೆ ತನ್ನನ್ನು ತಾನು ಜಾತ್ಯಾತೀತವಾದಿ ಎಂದು ಸಾಬೀತು ಮಾಡಿಕೊಂಡಂತೆ ಎನ್ನುವುದು ಅವರ ನಿಲುವಾಗಿದೆ. "ಂದೂ ಧರ್ಮವನ್ನು "ರೋಧಿಸುತ್ತೇನೆ ಎಂದು ಹೇಳುವ ಅವರು ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುತ್ತೇನೆ ಎನ್ನುತ್ತಾರೆ. ಆದರೆ ಬಸವಣ್ಣನ ಒಂದೂ ತತ್ವವು ಅವರ ಬದುಕಿನಲ್ಲಿ ಅಳವಡಿಸಿಕೊಳ್ಳದ ಇವರು ಅದ್ಯಾವ ಸೀಮೆಯ ಲಿಂಗಾಯತ ಹೋರಾಟಗಾರರೋ ಗೊತ್ತಿಲ್ಲ. ಕಲಬೇಡ, ಕೊಲೆಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಎಂದು ಹೇಳಿದ ಬಸವಣ್ಣನ ಹೆಸರಲ್ಲಿ ಧರ್ಮ ಸ್ಥಾಪನೆಗೆ ನಿಂತಿರುವ ಇವರಿಗೆ ಯಾರು ಏನು ಮಾಡಿದ್ದಾರೆ ಎನ್ನುವುದರ ಪರಿವೆಯೇ ಇಲ್ಲದೇ ನಾಲಿಗೆಯನ್ನು ಹರಿಬಿಟ್ಟು ಬಸವ ತತ್ವಕ್ಕೆ "ರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ರೀತಿಯ ಹೇಳಿಕೆ ನೀಡಿ ಅವರ ಏನು ಮಾಡಬೇಕೆಂದಿದ್ದಾರೆ ಎನ್ನುವುದೇ ಗೊತ್ತಿಲ್ಲ. ಇಂಗ್ಲಂಡ್ ದೇಶದಿಂದ ಬ್ಯಾರಿಸ್ಟರ್ ಆಗಿ ಬರಬೇಕಿದ್ದ ಸಾವರ್ಕರ್ ಅಲ್ಲಿಯೇ ಸ್ವಾತಂತ್ರ್ಯದ ಕಿಚ್ಚು ಹಚ್ಚಿ ದಿಂಗ್ರಾನಂತಹ ಕ್ರಾಂತಿಕಾರಿಯನ್ನು ಹುಟ್ಟು ಹಾಕಿದರು. ಕಡಲು ಜಿಗಿದಿದ್ದು ಜೀವ ಉಳಿಸಿಕೊಳ್ಳುವುದಕ್ಕೆ ಎಂದು ಹೇಳುವ ಕಾಶಪ್ಪನವರಿಗೆ ಬ್ರಿಟೀಷರ "ಚಾರಗಳನ್ನು "ರೋಧಿಸಿದ್ದಕ್ಕಾಗಿ ಎರಡೆರಡು ಜೀವಾವಧಿ ಶಿಕ್ಷೆಯನ್ನು ಅನುಭ"ಸಿದವರು ಸಾವರ್ಕರ್ ಅವರೇ ಎನ್ನುವುದು ಪಾಪ ಗೊತ್ತಿಲ್ಲ ಎನಿಸುತ್ತದೆ. ಇವರೇನು ಕತ್ತಿ "ಡಿದು ಬ್ರಿಟೀಷರ "ರುದ್ಧ ಹೋರಾಟ ಮಾಡಿದರೆ ಎಂದು ಪ್ರಶ್ನೆ ಮಾಡುವ ಇವರಿಗೆ ಧೀಮಂತ ಕ್ರಾಂತಿಕಾರಿ ಸುಭಾಶ್ಚಂದ್ರ ಬೋಸ್ ಆಜಾದ್ "ಂದ್ ಪೌಜ್ ಕಟ್ಟುವುದಕ್ಕೆ ಪ್ರೇರಣೆ ಕೊಟ್ಟವರು ಇದೇ "ರ್ ಸಾವರ್ಕರ್ ಎನ್ನುವುದು ಗೊತ್ತಿಲ್ಲ. ಇದೆಲ್ಲವನ್ನು ಕಂಡಾಗ ಅಲ್ಪಜ್ಞಾನಿ ಮಹಾಗ"ರ್ ಎನ್ನುವ ಮಾತು ನೆನಪಾಗುತ್ತದೆ. ಅದಕ್ಕೆ ಅಮಲಿನಲ್ಲಿ ಮಾತನಾಡಿದಂತೆ ಹೇಳಿಕೆ ನೀಡುತ್ತಿದ್ದಾರೆ. ಇದು "ಚಿತ್ರ ಆದರೂ ಸತ್ಯ.
ಇವರೆಲ್ಲ ಈ ದೇಶದಲ್ಲಿ ಏನು ಮಾಡಲು ಹೊರಟಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ. ಸ್ವಾತಂತ್ರ್ಯ ಗಂಗೆಯ ಒಡಲಿ ಧುಮುಕಿ ಇತಿಹಾಸದಲ್ಲಿ "ರಾಜಮಾನರಾದವರನ್ನು ಎಳೆದು ತಂದು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ಇವರಿಗ್ಯಾವ ನೈತಿಕತೆ ಇದೆ ಹೇಳಿ? ಅವರಾದರೋ ದೇಶಕ್ಕಾಗಿ ಮಡಿದವರು. ನಾವುಗಳೋ ಸ್ವಾರ್ಥಕ್ಕಾಗಿ ಯಾರನ್ನು ಬೇಕಾದರು ಬೈಯುವವರು. "ಗಿರುವಾಗ ಈ ರೀತಿಯ ಹೇಳಿಕೆಗಳಿಂದ ಏನು ಸಾಧನೆ ಮಾಡುವುದಕ್ಕೆ ಸಾಧ್ಯ"ದೆ ಎನ್ನುವುದೇ ಅರ್ಥವಾಗುತ್ತಿಲ್ಲ. ನನ್ನ ಧರ್ಮ ನನಗೆ ಶ್ರೇಷ್ಠ ಎಂದು ಹೇಳಿ ಬೇಡ ಅಂದವರಾ್ಯರು? ಹಾಗೆಂದು ಅನ್ಯ ಧರ್ಮವನ್ನು, ಅನ್ಯ ಧ"ುರ್ಯರನ್ನು ಜರಿಯವುದು "ಯಾಳಿಸುವುದು ಸರಿ ಅಲ್ಲ. ಅದನ್ನು ಭಾರತ ಸಂ"ಧಾನ ಕೂಡ ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ತೋಂಟದ ಸಿದ್ಧಲಿಂಗಪ್ಪನವರು ಹೇಳಿದ್ದು "ಜಾತಿ ಧರ್ಮ ನಮ್ಮ ನಮ್ಮ ಜಗಲಿ ಮ್ಯಾಲ ಭಾರತ ಸಂ"ಧಾನ ನಮ್ಮ ನಮ್ಮ ಎದಿ ಮ್ಯಾಲ" ಎಂದು. ಅಂಥ ಪುಣ್ಯಾತ್ಮರು ಹಾಕಿಕೊಟ್ಟ ಬಸವ ಪಥದಲ್ಲಿ ಸಾಗುವವರಿಗೆ ಇಂಥಹ ಹೇಳಿಕೆಗಳ ಅವಶ್ಯಕತೆ ಇದೆಯೇ? ಅದರಲ್ಲೂ ಜನ ನಾಯಕರಾದವರು ಸದಾ ಬೇರೊಬ್ಬರಿಗೆ ಮಾದರಿಯಾಗಬೇಕು. ಅದನ್ನು ಬಿಟ್ಟು ಬೇರೊಬ್ಬರ ಮನಸ್ಸುನ್ನು ನೋ"ಸುವ ವ್ಯಕ್ತಿಯಾದರೆ ಮುಂದಿನ ಅವರ ನಡೆಯನ್ನು ಯುವಪಡೆ ಒಪ್ಪುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆಯೇ ನೀವೆ ಹೇಳಿ? ಯಾವ ಧರ್ಮವನ್ನು "ಯಾಳಿಸುತ್ತಿದ್ದೀರೊ, ಯಾವ ಧರ್ಮವನ್ನು ಹೋಗಳುತ್ತಿದ್ದೀರೋ ಅವರೆಲ್ಲರಿಗೂ ನನ್ನದೊಂದೆ ಪ್ರಶ್ನೆ. ಹಸಿದವನಿಗೆ ಅನ್ನವನ್ನು ನೀಡದ ಧರ್ಮ, "ಧವೆಯ ಕಣೀರು ಒರೆಸದ ಧರ್ಮ, ನೊಂದವರಿಗೆ ಸಾಂತ್ವನ ಹೇಳಿದ ಧರ್ಮ, ನೋ"ಗೆ ಸ್ಪಂದಿಸದ ಧರ್ಮ ಅದನ್ನು ಧರ್ಮ ಎಂದು ಕರೆಯುವುದಕ್ಕೆ ಸಾಧ್ಯವೇ ಇಲ್ಲ. "ಗಿರುವಾಗ ಇದ್ಯಾವುದಕ್ಕೂ ಮುಂದಾಗದೇ ಬರೀ ನಾಲಿಗೆಯನ್ನು ಮುಂದು ಮಾಡಿದರೆ ಯಾವ ಧರ್ಮ ತಾನೇ ತಮ್ಮನ್ನು ಒಪ್ಪುತ್ತದೆ ಹೇಳಿ? ಸಾವರ್ಕರ್ ಬಗ್ಗೆ ಹೇಳಿಕೆ ಕೊಟ್ಟೆ, ಪೇಜಾವರ ಶ್ರೀಗಳನ್ನು ಪ್ರಶ್ನೆ ಮಾಡಿದೆ ಎನ್ನುವ ಮುನ್ನ ಒಂದು ಬಾರಿ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುವುದು ಒಳ್ಳೇಯದು. ಅವರು ಮಾಡಿದ ಕಾರ್ಯದಲ್ಲಿ ಒಂದು ಕಣವಾದರೂ ನಾವು ಮಾಡಿದ್ದೀವಾ ಹೇಳಿ? ಅಂದ ಮೇಲೆ ಅವರ ಕುರಿತು ಮಾತನಾಡುವುದಕ್ಕಾಗಲಿ ಅವರನ್ನು ಪ್ರಶ್ನಿಸುವುದಕ್ಕಾಗಲಿ ನಮಗ್ಯಾವ ಅಧಿಕಾರ"ದೆ? ಇಲ್ಲ ಎಂದ ಮೇಲೆ ಚರಿತ್ರೆಯಲ್ಲಿರುವವರನ್ನು ಚರಿತ್ರೆಯಲ್ಲಿಯೇ ಬಿಟ್ಟು ಬಿಡಿ, ತಾವುಗಳು ಉತ್ತಮ ಚಾರಿತ್ರ್ಯವನ್ನು ಹೊಂದಿ ಅದ್ಭುತ ಕಾರ್ಯ ಮಾಡಿ ಚರಿತ್ರೆಯಲ್ಲಿ ಒಂದು ಸ್ಥಾನ ಪಡೆದುಕೊಳ್ಳಲು ಪ್ರಯತ್ನ ಪಡಿ. ಎಲ್ಲ ಮಾಡಿದವರನ್ನೇ ತಮ್ಮಂತವರು ಪ್ರಶ್ನೆ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಮುಂದೆ ನಿಮ್ಮ ಕುರಿತು ಇನ್ನೆಂತೆಂತ ಪ್ರಶ್ನೆಗಳು ಹುಟ್ಟಬಹುದು "ಚಾರ ಮಾಡಿ. ಹೇಳಿಕೆ ನೀಡುವುದು ಸರಳ ಆದರೆ ಅದರಿಂದ ಆಗುವ ತಪ್ಪುಗಳನ್ನು ಸರಿ ಮಾಡುವುದು ಅತೀ ಕಷ್ಟ. ಅದಕ್ಕೆ ನಮ್ಮ ದಾಸಶ್ರೇಷ್ಠರು ಹೇಳಿದ್ದು "ಆಚಾರ"ಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ" ಎಂದು. ಇದನ್ನು ಅವರು ಅಂದೇ ಮನಗಂಡಿದ್ದರು. ಅದಕ್ಕೆ ಆವಾಗಲೇ ಆ ಮಾತನ್ನು ಹೇಳಿದ್ದರು. ಈಗ ಆ ಹೇಳಿಕೆಯನ್ನು ಇವರೆಲ್ಲ ಸಾಬೀತು ಮಾಡಿ ತೋರಿಸುತ್ತಿದ್ದಾರೆ ಅಷ್ಟೇ. ಒಟ್ಟಿನಲ್ಲಿ ಸತ್ತವರನಿಟ್ಟುಕೊಂಡು ಸ್ವಾರ್ಥ ಸಾಧಿಸಿಕೊಳ್ಳುವ ಬದಲು ಬದುಕಿರುವಾಗ ನಾಲ್ಕು ಜನರಿಗೆ ಒಳ್ಳೆಯದು ಮಾಡಿ ಸತ್ತ ಮೇಲೆ ನೆನಪಾಗಿ ಉಳಿಯುವುದು ಒಳ್ಳೇಯದಲ್ಲವೇ?
ಮಂಜುನಾಥ ಮ. ಜುನಗೊಂಡ
ವಿಜಯಪುರ