ಅಧ್ಯಯನಯೋಗ್ಯ ಕೃತಿ 'ನುಡಿಗಟ್ಟು: ಒಂದು ಅವಲೋಕನ'
ಕಡಿಮೆ ಶಬ್ದ ಬಳಸಿ ಹೆಚ್ಚು ಅರ್ಥ ನೀಡುವ ಭಾಷೆ ನಿಜಕ್ಕೂ ಶ್ರೀಮಂಥ ಭಾಷೆ ಎನಿಸುತ್ತದೆ. ಒಂದಿಷ್ಟರಲ್ಲಿ ಸಾಕಷ್ಟು ಅರ್ಥ ವಿಸ್ತಾರವನ್ನುತೆರೆದಿಡಿವುವಕೌಶಲದ ಭಾಷೆ ನಮ್ಮದು. ನಮ್ಮಗ್ರಾ"ುಣ ಪರಿಸರದಲ್ಲಿಜನಪದರುತಮ್ಮ ನೋವು ನಲಿವು, ಜೀವನಾನುಭವವನ್ನುತಮ್ಮಜಾನಪದ ಸಾಹಿತ್ಯದ ಮೂಲಕ ಅಭಿವ್ಯಕ್ತಪಡಿಸಿ ಬದುಕನ್ನು ಸಾರವತ್ತಾಗಿ ರೂಪಿಸಿಕೊಂಡರು. ಆಧುನಿಕತೆಯ ಬಿರುಗಾಳಿಗೆ ಹಳ್ಳಿಗಳಲ್ಲಿ ಪರಂಪರಾಗತವಾಗಿ ಬಂದಆಚಾರ ವಿಚಾರ, ಸಂಸ್ಕಾರ, ಶ್ರಮಸಂಸ್ಕೃತಿಎಲ್ಲವೂ ಮರೆಯಾಗುತ್ತಿರುವ ಸಂದಿಗ್ಧತೆಯಲ್ಲಿ ಸಾಹಿತಿ ಶಿ.ಗು.ಕುಸುಗಲ್ಲ ಇವರುಇವೆಲ್ಲ ಉಳಿದು ನಮ್ಮಜೀವನರಸವತ್ತಾಗಿ ಅರ್ಥಪೂರ್ಣವಾಗಲು ನೆಲದಆದರ್ಶ ಪರಂಪರೆಗಳು ಪೂರಕವಾಗುತ್ತವೆ ಎಂಬ ವಿ ಶ್ವಾಸದಿಂದ'ನುಡಿಗಟ್ಟು : ಒಂದು ಅವಲೋಕನ' ಎಂಬ ಕೃತಿಯನ್ನು ಬರೆದುಕೃತಾರ್ಥರಾಗಿದ್ದಾರೆ. ಪುಸ್ತಕದ ಪ್ರಾರಂಭದಲ್ಲಿಇವರುತಮ್ಮ ಅನಿಸಿಕೆಯನ್ನು ಅರ್ಥಪೂರ್ಣವಾಗಿ ನಿವೇದಿಸಿದ್ದು ಗಮನಾರ್ಹವಾದುದು.
'ನಮ್ಮ ಮಾತಿಗೆ ಮಹತ್ವ, ವಿಶೇಷ ಅರ್ಥ ಬರಬೇಕಾದಲ್ಲಿ ಗಾದೆಗಳ ಮತ್ತುಜನ ಬಳಕೆಯಲ್ಲಿದ್ದ ವಿಶಿಷ್ಟ ಮಾತುಗಳಾದ ನುಡಿಗಟ್ಟುಗಳ ಇಲ್ಲವೆ ಪಡೆನುಡಿಗಳ ಅಂದರೆ ಅರ್ಥಪೂರ್ಣ ಪದಗಳ ಬಳಕೆ ಅಗತ್ಯವಾಗುತ್ತದೆ. ವಿಷಯದ ವಿಸ್ತಾರವನ್ನು, ಗಹನತೆಯನ್ನು ಬಿಡಿಸಿ ಒಂದಿಷ್ಟರಲ್ಲಿ ಸ್ವಾರಸ್ಯಮಯವಾಗಿ ಇವು ಜನಮನಕ್ಕೆ ಹಿಡಿಸುತ್ತವೆ. ಗಿಂಡಿಯಲ್ಲಿ ಸಾಗರದದರ್ಶನವನ್ನು ಮಾಡಿಸುವ ಶಕ್ತಿ ಇವುಗಳಿಗಿದೆ. ಮಾತಿಗೆ ಶಕ್ತಿ ತುಂಬುವ, ಮಾತಿಗೆ ಸ್ವಾರಸ್ಯ, ಸೊಗಸನ್ನು ನೀಡುವತಾಕತ್ತು ಇವುಗಳಲ್ಲಿದೆ. ಜೀವನಾನುಭದಜ್ಞಾನದಕಟ್ಟು ಈ ನುಡಿಗಟ್ಟುಗಳು.
ನಮ್ಮಜನಪದರ ನಿತ್ಯದ ಮಾತಿನಲ್ಲಿಇವು ಹಾಸುಹೊಕ್ಕಾಗಿವೆ. ಜನಸಮೂಹದ ಮನದ ತಿಳಿವಿಗಾಗಿ, ಅರಿವಿಗಾಗಿತಮ್ಮಜೀವನಾನುಭವದ ಆಳ ವಿಸ್ತಾರದ ದಿಸೆಯಲ್ಲಿ ಅನುಭವಿಗಳು ಅಭಿವ್ಯಕ್ತಪಡಿಸುವ ಪದಗಳ ಸಮುಚ್ಚಯವೇ ಈ ನುಡಿಗಟ್ಟುಗಳು ಹಾಗೂ ಗಾದೆಗಳು. ಮಾತಿಗೆಅರ್ಥವಂತಿಕೆಯ ಸುಂದರಚೌಕಟ್ಟನ್ನು ಇವು ಹಾಕುತ್ತವೆ. ಸರಳವಾಗಿ ಸುಂದರವಾಗಿಅರ್ಥವನ್ನುಅರುಹುವ ಇವು ಅರಿ"ವಿ ನ ದೀವಟಿಗೆಗಳಾಗಿವೆ. ಇವು ಸಮಾಜದಲ್ಲಿ ಶಾಂತಿ, ಸಮಾಧಾನ, ನ್ಯಾಯ ನೀತಿ ನೆಲೆಸುವಲ್ಲಿ ಸಹಕಾರಿಯಾಗುತ್ತವೆ.'
ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಉನ್ನತವಾದುದು. ಈ ಎಲ್ಲ ಹಿರಿಮೆಗಳಲ್ಲಿ ನುಡಿಗಟ್ಟುಗಳು ಒಂದು. ಇವುಗಳ ಉಳಿವು ಹಾಗೂ ಬೆಳವಣಿಗೆಯ ದ್ಟೃುಂದಈ ಕ್ಷೇತ್ರದಅಧ್ಯಯನ, ಅವುಗಳ ಒಳತಿರುಳಿನ ಅಳವಡಿಕೆ ಮುಖ್ಯವಾಗುತ್ತದೆ. ಸೃಜನಶೀಲ, ಸಂವೇದನಾಶೀಲ ಶಿ.ಗು.ಕುಸುಗಲ್ಲ ಇವರುಗಾ"ುಣ ಪರಿಸರ, ಪರಂಪರೆ ಮತ್ತುಅಲ್ಲಿಯಬದುಕನ್ನು ಸೂಕ್ಷಾ-್ಮವಲೋಕನ ಮಾಡಿದವರು. ಈ "ನ್ನೆಲೆಯಲ್ಲಿ 49 ನುಡಿಗಟ್ಟುಗಳನ್ನು ಆಯ್ಕೆ ಮಾಡಿ ಅವುಗಳ ಹುಟ್ಟು ಹಾಗೂ ಯಾವ ಸಮಯ, ಸಂದರ್ಭದಲ್ಲಿ ಅವುಗಳ ಉಪಯೋಗದಕುರಿತು ಹೃದಯಂಗಮವಾಗಿಈ ಪುಸ್ತಕದಲ್ಲಿಓದುಗರಿಗೆ ತಿಳಿಸಿದ್ದಾರೆ. ಜೀವನಾನುಭವದಆಗರವಾದ, ಜನಮನದ ತಿಳಿ"ಗಾಗಿ ನುಡಿಗಟ್ಟುಗಳು ಸುಂದರ ಬದುಕಿಗೆ ಮೆಟ್ಟಿಲುಗಳಾಗುತ್ತವೆ. ಸರಳ ಸುಂದರವಾಗಿ, ಅರ್ಥವತ್ತಾಗಿ ಮನಮುಟ್ಟಿವಂತೆಇರುವಇವರ ಸಾಹಿತ್ಯಜನಮನದ ಮೆಚ್ಚುಗೆಗೆ ಪಾತ್ರವಾಗುತ್ತದೆ. ಲೇಖನಗಳಲ್ಲಿ ಅಲ್ಲಲ್ಲಿ'ನುಡಿ ದೀಪ' ಗಳಾಗಿ ಓದುಗರ ಮನಸ್ಸಿಗೆ ಬೆಳಕಿಂಡಿಗಳಾಗಿ ಕೆಲ ನುಡಿಗಳುಶೋಭಿಸಿವೆ. 'ಶ್ರದ್ಧೆ ಸಾಧನೆಗೆ ಸೋಪಾನ', 'ಮನಸ್ಸು, ಹರಿಯುವ ನೀರಿನಂತೆ ಪರಿಶುದ್ಧವಾಗಿರಬೇಕು', 'ಹಾಲಿನಂಥ ಬದುಕುಒಮ್ಮೆಮ್ಮೆ ಹಾಲಾಲವಾಗುವದುಂಟು', 'ಜನಮನವನ್ನುಗೆಲ್ಲುವದರಲ್ಲಿ ಬದುಕಿನ ಸಾರ್ಥಕತೆಇದೆ', 'ಗಡಿಬಿಡಿಯಲ್ಲಿಗಂಡಾಂತರವಿದೆ', 'ಶಿಕ್ಷಣಕ್ಕಿಂತ ಸಂಸ್ಕಾರ ಮುಖ್ಯ', ಟೊಪ್ಪಿಗೆಧರಿಸುವದು ನಿಂತರೂಟೊಪ್ಪಿಗೆ ಹಾಕುವದು ನಿಂತಿಲ್ಲ'.
ಅಧ್ಯಯನಕ್ಕೆಯೋಗ್ಯವಾದ ಪುಸ್ತಕವಿದು. ಯುವಸಮೂಹಕ್ಕೆ, ವಿದ್ಯಾರ್ಥಿ ಬಳಗಕ್ಕೆ ಅಗತ್ಯವಾದ ಕೃತಿಯಾಗಿದೆ.
ನಿವೇದಿತ ಪ್ರಕಾಶನ, ಬೆಂಗಳೂರು, ಪುಟ 116. ಬೆಲೆ ರು.100/-
-ಜಿ.ಕೆ.ಕುಲಕರ್ಣಿ
ಸಾಹಿತಿಗಳು, ನಿ.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು,
ತುಮಕೂರು. ಮೊ. 9448250456