ಲೇಖನಗಳು

ಒಲುಮೆ ಒಂದು ದಿವ್ಯ ದೀಕ್ಷೆ ಗೃಹ ತಪಸ್ಯೆಗೆ

ಒಲುಮೆ ಒಂದು ದಿವ್ಯ ದೀಕ್ಷೆ ಗೃಹ ತಪಸ್ಯೆಗೆ

ಒಲವು ಜಗತ್ತನ್ನು ಹಿಡಿದಿಡುವ ಸೂತ್ರ.ಜೀವನ ಸಾಕ್ಷಾತ್ಕರಿಸಿಕೊಳ್ಳುವ ಅಮರ,ಅದ್ಭುತ ಭಾವ.ಒಲವು ಪಡೆದವರು ಧನ್ಯರಾಗಿದ್ದಾರೆ.ಒಲವು ಕಳೆದುಕೊಂಡವರು ಅಮರರಾಗಿದ್ದಾರೆ. ಅದಕ್ಕೇ ಒಲವಿನ ಕವಿ ಬೇಂದ್ರೆ

 

ಒಲವಿನಲ್ಲಿ ಬೆಳಿ, ಒಲವಿನಲ್ಲಿ ಉಳಿ

ಒಲವೆ ಬಾಳ ಚೆಲುವು

ಒಲ್ಲದಿಲ್ಕ ಒಲಿಯುವದೆ ಎಲ್ಲ

ಒಲಿಯುವದು ಬದುಕು ಬಲವು

 

ಎನ್ನುತ್ತಾರೆ.ಒಲವಿನ ಮಹತ್ವವೇ ಅದು ಒಲವಿಲ್ಲದೆ ಏನಿದೆ ಇಲ್ಲಿ.ಅದಕ್ಕೆ ಕವಿಗಳು ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ ಎಂದಿದ್ದರು.ಶರಣರಂಥ ಶರಣರೇ ಒಲಿದವರು ಅಗಲುವ ಸಂಕಷ್ಟವನ್ನು ' ಒಲಿದವರ ಕೊಲುವಡೆ ಮಸೆದ ಕೂರಲಗೇಕೆ ,ಒಲ್ಲೆನೆಂಬುದೆ ಸಾಕು ' ಎಂಬ ವಾಣಿಯನ್ನು ನುಡಿದಿದ್ದರು. ಬದುಕು ಸಾರ್ಥಕವಾಗುವದೇ ಒಲಚಿನಿಂದ ಎನ್ನು ಕವಿ ಬೇಂದ್ರೆ ಇನ್ನೊಂದು ಶಲಿನಲ್ಲಿ

 

ಏನಿಹುದೋ ಎಂತಿಹುದೋ ಸಂಸಾರ ಸಾರ

ಕಂಡವರು ಯಾರದಾರ ಅಂತಪಾರ

ಹೃದಯ ಸಂಪುಟದಲ್ಕಿ ಒಲವ ಲೆಕ್ಕಣಿಕೆ

ಮಾಡಿ ಬರೆಯಲೊ ಹುಡುಗ ನಿನ್ನ ಒಕ್ಕಣಿಕೆ

 

ಎನ್ನುತ್ತಾರೆ.ವರಕವಿ ಬೇಂದ್ರೆ  ಶಬ್ದ ಗಾರುಡಿಗರು .ಒಲವೇ ಲೆಕ್ಕಣಿಕೆ ಯಂತೆ ! ಬರೆಯುವದು ಬಾಳ ಸಂಪುಟದಲ್ಲಿ! ಅಲ್ಲಿ ಹುಡುಗನ ಒಕ್ಕಣಿಕೆ ಪ್ರೀತಿಯೊಂ್ಲ್ಲದೆ ಏನಿರಲು ಸಾದ್ಯ. ಹೀಗೆ ಒಲವನ್ನೇ ಉಂಡುಟ್ಟು ಬೆಳೆದ ಕವಿ ಇನ್ನೊಬ್ಬರಿಲ್ಲ.

 

ನಮ್ಮ ಹಿರಿಯರು ತಮ್ಮ ಪ್ರೇಮ ಸಾರ್ಥಕ್ಯವನ್ನು ಮದುವೆಯೊಳಗಡೆ ,ತಮ್ಮ ಮನೆಯೊಳಗಡೆ, ಮಡದಿಯೊಂದಿಗೆ ಕಂಡರು.ನಮ್ಮದು ಮದುವೆಯಾಚೆಗಿನ ಪ್ರೇಮ ಸಲ್ಲ. ಮದುವೆ ಮುಂಚಿನ ಪ್ಎಏಮವೂ ಅಲ್ಲಿ ಅಷ್ಟು ಗೌರವಾರ್ಹವಾದುದಲ್ಲ..ಇಂದಿನ ಕಾಲದ ಅತ್ಯಾಧುನಿಕ ಲವ್..ಅವರಿಗೆ ಗೊತ್ತಿರಲಿಲ್ಲ. ಅವರದೇನಿದ್ದರೂ ನವಿಲೂರನೊಳಿಗೆಲ್ಲ ನೀನೇ ಬಲು ಚಲುವೆ ಅದಕೆ ನಮ್ಇಬ್ಬರಿಗೆ ನಾಳೆಯೇ ಮದುವೆ ಎನ್ನುವ  ಚೌಕಟ್ಟಿನೊಳಗೇ ಸಾದ್ಯವಾಗುವ ಪ್ರೇಮ.ಅದಕ್ಕೆ ರಾಷ್ಟ್ರಕವಿಗಳು ಒಲುಮೆ ಯನ್ನ ಗೃಹ ತಪಸ್ಸಿನ ದೀಕ್ಷೆ ಎಂದದ್ದು.ಇದು ಜಗತ್ತಿನ ಬೃಹತ್ ಹೊತ್ತಿಗೆ .ಅದನ್ನು ಓದುವದು ಒಂದು ಜನುಮದಲ್ಲಿ ಅಸಾಧ್ಯ.ಆದ್ದರಿಂದಲೇ ಬೇಂದ್ರೆ ಕವಿ

 

ಒಲವೆಂಬ ಹೊತ್ತಿಗೆಯನೋದಬಯಸುವ ಪ್ರಾಣಿ

ಬೆಲೆ ಎಷ್ಟು ಎಂದು ಕೇಳುವೆಯ ಹುಚ್ಚ

ಹಲ ಜನುಮ ದುಡಿದರೂ ಇಡೀ ಜನುಮ ಕಳೆದರೂ

ನೀ ತೆತ್ತಲಾರೆ ಬರೀ ಅಂಚೆ ವೆಚ್ಚ

 

ಒಲವೆಂಬ ಹೊತ್ತಗೆಯನ್ನ ಅಂಚೆಯಿಂದ ಬಂದಾಗ ಕೊಟದಟು ಬಿಡಿಸಿಕೊಳ್ಳುವದೂ ನಮ್ಮಿಂದ ಸಾಧ್ಯವಿಲ್ಲ.ಅಷ್ಟು ಬೃಹತ್ತಾದ ಕೈಪಿಡಿ ಅದು.ಹಾಗಾದರೆ ಅದು ಎಲ್ಲಿ ಜನಿಸುತ್ತದೆ ಎಂದರೆ ಅದು ಇದು ಎದೆಯಲ್ಲಿ ಜನಿಸುವ ರಸಗಂಗಾ ನದಿಯದು ಎನ್ನುವ ಕವಿ " ಹೆಸರದಕೆ ಪ್ರೀತಿ ಬಾಳಿನ ರೀತಿಯು ,ಆತ್ಮದ ‌ನೀತಿಯು" ಎಂದು ಉದ್ಘೋಸಿಸು ತ್ತಾರೆ.ಗಂಡು ಹೆಣ್ಣಿನ ಒಲವು ಹೋಗಿ ಆತ್ಮಾನುಭೂತಿಯಾಗಬೇಕು ಎನ್ನುವದು ಭಾರತೀಯರ ನಿಲುವು .ಇಂಥ ಪ್ರೇಮ ದೈವದೊಲುಮೆ ಯಿಲ್ಲದೇ ಸಾಧ್ಯವಾಗದು.ಅದು ಇದೊಂದೇ ಜನುಮಕ್ಕಂಟಿದುದಲ್ಲ.

ಸುದ್ದಿ ಓದಿ