ಸುಡುಗಾಡು ಬದುಕಿಗೆ ಒಂದಷ್ಟು ಒಳ್ಳೆಯದು ದಕ್ಕದೇ ಹೋದರೆ!
ಶುಭಾ ಗಿರಣಿಮನೆ
ಮನುಷ್ಯನ ಬದುಕಿಗೆ ಏರಿಳಿತಗಳು ಸಹಜ. ಆ ಏರಿಳಿತವನ್ನು ಹೇಗೆ ತೆಗೆದುಕೊಳ್ಳುತ್ತಾನೆ ಎನ್ನುವದರ ಮೇಲೆ ಅವನ ಮನಸ್ಥಿತಿಯ ಸ್ವಾಸ್ಥ್ಯವು ಅಡಗಿದೆ. ತನ್ನದೇ ವಯಕ್ತಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಾಗಿರಲಿ, ಅಥವಾ ಸಮಾಜದಲ್ಲಿ ತೊಡಗಿಸಿಕೊಳ್ಳುವುದಾಗಿರಲಿ ಅಡತಡೆಗಳು ಬಹಳಷ್ಟು ಎದುರಾಗುತ್ತದೆ. ಆ ತಡೆಗಳ ಎದುರು ನಿಲ್ಲುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಕಠಿಣ ಮನಸ್ಸಿನವರು ಆದದ್ದಾಗಲಿ ಎಂದು ಮುನ್ನುಗ್ಗುವರು. ಆದರೆ ಮೃದು ಮನಸ್ಸಿನವರಿಗೆ ಅಳುಕು, ಅಧೈರ್ಯವೇ ಹೆಚ್ಚಾಗಿ ಬಿಟ್ಟಿರುತ್ತದೆ.
ಸಾಮಾನ್ಯ ಮನುಷ್ಯನ ಕನಸು ಒಂದೇ. ತನಗೆ ಒಳ್ಳೇಯದಾಗಬೇಕು, ತನ್ನ ಸುತ್ತಲಿನವರಿಗೆ ಒಳಿತಾಗಬೇಕು, ಅದಕ್ಕೂ ಒಂದೆಜ್ಜೆ ಮುಂದಿಟ್ಟರೆ ತನ್ನ ಸಮಾಜ ಚೆನ್ನಾಗಿರಬೇಕು. ಈ ಮೂರು ಸ್ಥಿತಿಯನ್ನು ಒಳಿತಾಗಿಸಲು ಸಾಕಷ್ಟು ಜನರು ಹೋರಾಡುತ್ತಾರೆ. ತನ್ನ ಒಳಿತನ್ನು ನೋಡಿಕೊಂಡು ಬೇರೆ ಯಾರ ಗೊಡವೆಗೂ ಹೋಗದವನಿಗೆ ಹೆಚ್ಚಿನ ಹೊಡೆತಗಳು ಬರುವುದಿಲ್ಲ. ಯಾರು ಏನಾದರೂ ಕಿರಿಕಿರಿಯ ಮಾತು ಆಡಿದರೆ ತನಗೆ ಸಂಬಂಧ ಇಲ್ಲ ಎಂದು ಸುಮ್ಮನಿರುತ್ತಾನೆ. ಮಾತಿಗೆ ನಿಂತರೆ ತಾನು ಯಾರಿಗೂ ಏನನ್ನು ಮಾಡಲು ಹೋಗಿಯೇ ಇಲ್ಲ ಎಂದು ಸಾಬೀತು ಮಾಡಿ ತಣ್ಣಗಿರುತ್ತಾನೆ. ಎರಡನೇಯವನು ತನ್ನ ಸುತ್ತಲಿನವರಿಗೆ ಒಳಿತಾಗಲಿ ಎಂದು ಬಯಸುವವನು. ಇವನಿಗೆ ಇರುವಷ್ಟು ತೊಡಕು ಬೇರೆ ಯಾರಿಗೂ ಇಲ್ಲ. ಸುತ್ತ ಇರುವವರೆಲ್ಲ ಬಂಧುಗಳು, "ುತ್ರರು, ಪರಿಚಯಸ್ಥರು ಒಟ್ಟಿನಲ್ಲಿ ಈತನ ಖಾಸಗಿತನ ಗೊತ್ತಿರುವವರು. ಅವನಿಂದ ಆಗುವ ಸಹಾಯದ ಲಾಭ ಇಲ್ಲಿ ಯಾರೂ ಬೇಡ ಎಂದು ಹೇಳುವುದೇ ಇಲ್ಲ. ಆದರೆ ಅದೇ ಸಹಾಯದಲ್ಲಿ ಸಣ್ಣ ಎಡವಟ್ಟಾದರೂ ಮುಗಿತು, ವಾಚಾಮಗೋಚರ ಮಾತನಾಡುತ್ತಾರೆ. ವಯಕ್ತಿಕ "ಚಾರವನ್ನು ತೆಗೆದುಕೊಂಡು ಅಪಪ್ರಚಾರ ಮಾಡಲು ಆರಂಭಿಸುತ್ತಾರೆ. ಒಟ್ಟಿನಲ್ಲಿ ಕುಗ್ಗಿಸಲು ಎಷ್ಟು ಸಾಧ್ಯವೋ ಅಷ್ಟೆಲ್ಲ ಪ್ರಯತ್ನಗಳು ನಡೆದುಬಿಡುತ್ತವೆ.
ಇನ್ನು ಸಮಾಜ ಸೇವೆ ಎಂದು ದುಡಿಯುವವರು. ಇವರು ಯಾರಿಗೂ ತಮ್ಮ ಬದುಕನ್ನು ಬಿಟ್ಟುಕೊಡುವುದಿಲ್ಲ. ತನ್ನಿಂದ ಏನು ಸಾಧ್ಯವೋ ಎಲ್ಲವನ್ನು ಮಾಡುತ್ತಾರೆ. ಅಲ್ಲಿ ತನ್ನವರು, ಪರಿಚಯಸ್ಥರು ಎನ್ನುವದು ಇರುವುದಿಲ್ಲ. ಅಪರಿಚಿತರಾಗಿದ್ದರೂ ಅವರಿಗೆ ಯಾವುದು ಕೊರತೆಯೋ ಅದನ್ನು ಗುರುತಿಸಿಕೊಳ್ಳುತ್ತಾರೆ. ಅಲ್ಲಿ ಅವರ ಜೊತೆ ಇದ್ದು ಮತ್ತೆ ಮುಂದೆ ನಡೆಯುತ್ತಾರೆ. ಅಲ್ಲಿ ಆತನನ್ನು ತುಳಿಯುವ ಪ್ರಯತ್ನ ನಡೆಯುವುದಿಲ್ಲ ಅಂತಿಲ್ಲ. ಅಲ್ಲಿಯೂ ಈ ಪರಿಚಯದವರೇ ಎದುರಾಗುವುದು, ಅವನು ಸರಿಲ್ಲ, ತನ್ನ ಹೆಸರು ಪತ್ರಿಕೆಯಲ್ಲಿ ಬರಲೆಂದು ಮಾಡುತ್ತಾನೆ, ಅವನನ್ನು ನಂಬಬೇಡಿ "ಗೆ ಅವಹೇಳನ ಮಾಡುತ್ತಿರುತ್ತಾರೆ. ಆದರೆ ಈ ಕ್ಷುಲ್ಲಕ ಹೇಳಿಕೆಗೆ ಆತ ತಲೆ ಕೆಡಿಸಿಕೊಳ್ಳದೆ ಮತ್ತೊಂದು ದೊಡ್ಡ ಮಟ್ಟದ ಕೆಲಸಕ್ಕೆ ಕೈ ಹಾ"ಬಿಟ್ಟಿದ್ದರಿಂದ ಇಲ್ಲಿನ ಮಾತುಗಳು ಗೌಣವಾಗುತ್ತದೆ.
ನಮ್ಮಲ್ಲಿ ಸುರೇಶ ಎನ್ನುವ ಕಾಂಟ್ರಾಕ್ಟ್ದಾರರೊಬ್ಬರು ಇದ್ದರು. ಅವರು ಸರಕಾರಿ ವಲಯದ ಬಿಲ್ಡಿಂಗ್, ರಸ್ತೆ, ಪಾಗಾರು "ಗೆ ಯಾವುದೇ ಇರಲಿ ತಾವೇ ವ"ಸಿಕೊಳ್ಳುತ್ತಿದ್ದರು. ಸರಕಾರದಿಂದ ಬಂದ ಹಣದಲ್ಲಿ ಎಷ್ಟು ನೀಟಾಗಿ ಕೆಲಸ ಮಾಡಲು ಸಾಧ್ಯವೋ ಅಷ್ಟು ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದರು. ಆದರೆ ಕೆಲಸ ಮಾತ್ರ ನಿಧಾನಗತಿಯಲ್ಲಿರುತಿತ್ತು. ಆಗೆಲ್ಲ, ಆ ವ್ಯಕ್ತಿಗೆ ಯಾಕೆ ಕೊಡುತ್ತೀರಿ. ಕೆಲಸ ನಿಧಾನ, ಜೊತೆಗೆ ಕಟ್ಟಡ ಕಟ್ಟಲು ಸಾಕಷ್ಟು ಸಿಮೆಂಟು ಉಪಯೋಗಿಸುವುದಿಲ್ಲ. ಕಲ್ಲಿನ ಕಡಿಗಳನ್ನು ಸಿಮೆಂಟಿನ ಲೆಕ್ಕವನ್ನು ತಪ್ಪಾಗಿ ತೋರಿಸಿ ಹಣ ದೋಚುತ್ತಾನೆ ಎನ್ನುವಂತಹ ಮಾತುಗಳು ಬರುತ್ತಲೇ ಇದ್ದವು. ಇದರಿಂದ ನೋಂದ ಆತ 'ಈ ಊರವರ ಬಾುಗೆ ಬಿದ್ದು ಸಾಕಾುತು. ಕಾಂಟ್ರಾಕ್ಟ್ ಕೆಲಸ ಬಿಟ್ಟು ಬಿಡುತ್ತೇನೆ. ಕೂಲಿ ಮಾಡಿಕೊಂಡು ತಿನ್ನುವುದೇ ಲೇಸು' ಎನ್ನುವ ಮಾತು ಆ ಸುರೇಶ್ ಎನ್ನುವವರಿಂದ ಬಂದಿತ್ತು. ಅಂದರೆ ಅವರ ಮನಸ್ಸು ತಮ್ಮವರಿಂದಲೇ "ಗೆ ದಾಳಿಯಾಗುವುದನ್ನು ಸ"ಸಿಕೊಳ್ಳದಾಗಿತ್ತು. ಕೆಲವೇ ದಿನದಲ್ಲಿ ಆ ವ್ಯಕ್ತಿ ಹೃದಯಘಾತವಾಗಿ ತೀರಿ ಹೋದರು. ಅವರು ಹೋದ ನಂತರ ಅದೇ ಜನರು ಸುರೇಶ ಅದೆಷ್ಟು ಒಳ್ಳೆಯ ಕೆಲಸ ಮಾಡಿಸುತ್ತಿದ್ದ. ನಿಧಾನವಾದರೂ ಕಟ್ಟಡಗಳ ನಿರ್ಮಾಣದಲ್ಲಿ ಒಳ್ಳೆ ಕೆಲಸ ಮಾಡುತ್ತಿದ್ದ. ಅವನಂಥಹ ಕಂಟ್ರಾಕ್ಟ್ದಾರ ಮತ್ತೆ ಸಿಗೊಲ್ಲ. ಎಲ್ಲ ದುಡ್ಡು ಮಾಡಲೆಂದೆ ಬರ್ತಾರೆ. ಅವನು ಹಳೆ ಮನೆಯಲ್ಲೇ ಉಳಿದು ಹೋದ. ಬೇರೆಯವರಾಗಿದ್ದರೆ ತನ್ನ ಮನೆ ಸ್ವಂತದ್ದು ಚೆಂದದ ಮನೆ ಕಟ್ಟಿಕೊಳ್ಳುತ್ತಿದ್ದರು ಒಳ್ಳೆಯ ಮನುಷ್ಯನಾಗಿದ್ದ "ಗೆ ಬಡಬಡಾುಸಿದ್ದರು.
ಪ್ರಯೋಜನ ಏನು? ಇದ್ದಾಗ ತೆಗಳಿ ಸತ್ತ ಮೇಲೆ ಹೊಗಳಿದರೆ ಲಾಭವೇನು? ಮನುಷ್ಯ ಸತ್ತ ಮೇಲೆ ಏನಾಗುತ್ತಾನೆ ಎಂದು ಯಾರಿಗೂ ತಿಳದಿಲ್ಲ. ಇದ್ದಾಗ ಮಾತ್ರ ಅವನಿಗೆ ನೋವಾಗುವುದು, ಬೇಸರವಾಗುವುದು, ದುಃಖ ಹುಟ್ಟುವುದು. ಹಾಗಾಗಿ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ, ಕೀಳಾಗಿ, ಅವಹೇಳನಕಾರಿಯಾಗಿ ಮಾತನಾಡುವಾಗ ಸ್ವಲ್ಪವಾದರೂ ಯೋಚಿಸಬೇಕು. ಆ ಯೋಚನೆ ಇಲ್ಲದೇ ಮಾತನಾಡಿದರೆ ಒಳ್ಳೆಯವರ ಎದುರು ನಿಲ್ಲುವ ಯೋಗ್ಯತೆಯಂತು ಇರುವುದೇ ಇಲ್ಲ. ಕೊನೆಗೆ ಲಂಚ ತಿಂದ ವ್ಯಕ್ತಿಗಿಂತ ಮಾತಾಡಿದ ವ್ಯಕ್ತಿಯೇ ಕೆಳಮಟ್ಟದಲ್ಲಿ ನಿಲ್ಲಬೇಕಾಗಬಹುದು.
ಸ್ವಾರ್ಥ, ವಂಚನೆ, ಕೆಸರೆರಚಾಟ, ಹೊಡೆದಾಟ, ಕಾಮ ಇವುಗಳೇ ಕಣ್ಣಿಗೆ ರಾಚುವುದು ಹೆಚ್ಚಾಗಿದೆ. ಒಳ್ಳೆಯತನದತ್ತ ಸಣ್ಣ ಗಮನ ಹರಿಸಿದರೆ ನಮ್ಮೊಳಗೆ ಹುಟ್ಟುವ ಕೆಲವು "ಷಗಳು ತನ್ನಿಂದ ತಾನೇ ತಗ್ಗುತ್ತವೆ. ಇನ್ನೊಬ್ಬರ ಮೇಲೆ ಅಪವಾದ ಹೋರಿಸುವುದಕ್ಕೆ ಕಾರಣ ನಮ್ಮೊಳಗಿನ ಆಲೋಚನೆಗಳು. ಅದನ್ನು ಬದಲಾುಸಿಕೊಳ್ಳಬೇಕು. ಇಲ್ಲಿ ಕೆಡುಕು ಕಾಣುವಂತೆ ಒಳಿತು ಕೂಡ ಇದೆ. ಅದರತ್ತ ಗಮನ ಹರಿಸಬೇಕು. ನಾಳೆ ಏನಾಗಬಹುದು ಎನ್ನುವ ಚಿಂತೆ ಇರಬಾರದು ಎನ್ನುತ್ತಾರೆ. ಕೆಟ್ಟದಾಗಬಹುದೋ ಎನ್ನುವ ಚಿಂತೆ ಮಾಡಬಾರದು ಒಳ್ಳೆದಾಗಲಿ ಎನ್ನುವ ಯೋಚನೆ ಮಾಡಿದರೆ ಸಾಕು. ಚಿಂತೆ ಚಿತೆ ಹತ್ತಿಸುವುದು, ಯೋಚನೆ ಯೋಜನೆಯಾಗಿಸುವುದು. ಹಾಗಾಗಿ ನಮ್ಮ ಯೋಚನೆಗಳು ಸರಳವಾಗಿ ನಮ್ಮನ್ನು ನಮ್ಮ ಸುತ್ತಲಿನವರನ್ನು, ನಮ್ಮ ಸಮಾಜವನ್ನು ಒಳಿತಿನ ಕಡೆಗೆ ಪಯಣಿಸುವಂತೆ ಇದ್ದರೆ ಸಾಕು. ಇಲ್ಲಿ ಹೆಚ್ಚಿನದೇನು ಯಾರೂ ಬಯಸುವುದೇ ಇಲ್ಲ. ತುತ್ತು ಅನ್ನ ಸಿಕ್ಕರೆ ಸಾಕು ಎನ್ನುವವನಿಗೆ ಒಂದಗುಳು ಅನ್ನ ಒಬ್ಬೊಬ್ಬ ಕೊಟ್ಟರೆ ತುತ್ತಾಗುವುದು. ಹನಿಹನಿಕೂಡಿದರೆ ಹಳ್ಳ ಎನ್ನುವ ಮಾತು ನೆನಪಿಟ್ಟು ಒಳ್ಳೆಯದಕ್ಕೆ ಸಣ್ಣ ಕೊಡುಗೆ ನಮ್ಮದಾಗಿರಲಿ. ಆಗ ನಾವು ಬೇರೆಯವರ ಬಗ್ಗೆ ಅಪವಾದದ ಮಾತಾಡಲು ಅವಕಾಶ ಇರುವುದಿಲ್ಲ. ಬೇರೆಯವರು ಏನೆಂದರೂ ನಮಗೆ ತಾಗುವುದೂ ಇಲ್ಲ. ಎಂದೋ ಒಂದು ದಿನ ನಮ್ಮ ದೇಹ ಸುಡುಗಾಡಿಗೆ ಹೋಗುವುದು ನಿಶ್ಚಿತ. ಅಷ್ಟರಲ್ಲಿ ಮ್ಟುಯಷ್ಟಾದರೂ ಒಳ್ಳೆಯದನ್ನು ಬಯಸಿ ಹೋಗುವುದು ಮನುಷ್ಯನ ಸಾರ್ಥಕದ ಜೀವನ.