ನೂಲು ಹುಣ್ಣಿಮೆ: ಪದ್ಮಶಾಲಿ ಸಮಾಜದಿಂದ ಜನಿವಾರ ಧಾರಣೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 22: ಕರೋನಾ-19ರ ಹಾವಳಿಯಿಂದ ಇಡೀ ವಿಶ್ವವೇ ತ್ತರಿಸಿಹೋಗಿದೆ. ಇನ್ನಾದರೂ ಭಗವಂತ ಇಡೀ ಮನುಕುಲಕ್ಕೆ ಕರುಣೆ ತೋರಲಿ ಎಂದು ಪದ್ಮಶಾಲಿ ಸಮಾಜದ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ್ ಜಾಣಾ ಹೇಳಿದರು.
ಪಟ್ಟಣದ ಪದ್ಮಶಾಲಿ ಬಹುತ್ತಮ ಸಮಾಜದ ನಿವೇಶನದಲ್ಲಿ ಅವರು ಮಾತನಾಡಿ ಪ್ರತೀ ವರ್ಷ ನೂಲು ಹುಣ್ಣಿಮೆಯ ಅಂಗವಾಗಿ ನಮ್ಮ ಪದ್ಮಶಾಲಿ ಬಹುತ್ತಮ ಸಮಾಜದ ವತಿಯಿಂದ ಜನಿವಾರ ಧಾರಣೆ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದೇವೆ. ಆದರೆ ಈ ಬಾರಿ ಕೋವಿಡ್ ಕಾರಣದಿಂದಾಗಿ ಸರ್ಕಾರದಿಂದ ಯಾವುದೇ ಸಭೆ, ಸಮಾರಂಭ, ಹಬ್ಬ ಹರಿದಿನಗಳಿಗೆ ನಿಬಂಧನೆಗಳಿರುವುದರಿಂದ ಕೋವಿಡ್ ನಿಯಮಾವಳಿ ಪ್ರಕಾರ ಸರಳವಾಗಿ ನೂಲು ಹುಣ್ಣಿಮೆ ಸಂಭ್ರಮವನ್ನು ಆಚರಿಸಲಾಗಿದೆ, ನಮ್ಮ ಕುಲದೇವರಾದ ಮಾರ್ಕಂಡೇಶ್ವರ ಭಾವಚಿತ್ರಕ್ಕೆ ಮಾಲಾರೆ್ಣ ಮಾಡಿ ಪೂಜೆಯನ್ನು ಸಲ್ಲಿಸುವ ಮೂಲಕ ಸರಳ ಆಚರಣೆ ನಡೆಯಿತು. ಸಮಾಜದ ಬಾಂಧವರೆಲ್ಲ ತಮ್ಮ ತಮ್ಮ ಮನೆಯಲ್ಲಿಯೇ ಜನಿವಾರ ಧಾರಣೆ ಮಾಡಿಕೊಳ್ಳಲು ತಿಳಿಸಲಾಗಿದೆ ಎಂದರು.
ಪದ್ಮಶಾಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜಾಣಾ, ಪೂಜಾರ್ ಸುರೇಶ್, ಗೋರಂಟ್ಲಿ ವಿರುಪಾಕ್ಷಪ್ಪ, ಪಿ.ಹನುಮೇಶ, ಹಳೇಪೇಟೆ ಲಕ್ಷ್ಮಣ, ಜಾಣಾ ಹನುಮಂತಪ್ಪ, ಕೃಷ್ಣಪ್ಪ, ಪಿ.ನಾಗರಾಜ, ವೀರೇಶ್, ಸುಂಕಪ್ಪ, ಸಣ್ಣ ಕರಿಯಪ್ಪ, ದೇವರೆಡ್ಡಿ ಚಂದ್ರಶೇಖರ, ಪಿ.ಅನಂತ ಮತ್ತಿತರರು ಇದ್ದರು.