ಬಳ್ಳಾರಿ

ದೇಶದಲ್ಲಿ ಶೇ. 100 ಮತ ಹಾಕುವ ಕಾನೂನು ತರುವಂತೆ ಮನವಿ

ದೇಶದಲ್ಲಿ ಶೇ. 100 ಮತ ಹಾಕುವ ಕಾನೂನು ತರುವಂತೆ ಮನವಿ

ದೇಶದಲ್ಲಿ ಶೇ. 100 ಮತ ಹಾಕುವ ಕಾನೂನು ತರುವಂತೆ ಮನವಿ  

ಬಳ್ಳಾರಿ 02: ಒಂದೇ ದೇಶ ಒಂದೇ ಚುನಾವಣೆ ಬಿಲ್‌ನ್ನು ತಂದು ಜಾಯಿಂಟ್ ಪಾರ್ಲಿಮೆಂಟರಿ (ಜಂಟಿ ಸಂಸದೀಯ ಸಮಿತಿ) ಕಮಿಟಿ ಎಲ್ಲಾ ಪಕ್ಷದ ಲೋಕಸಭಾ ಸದಸ್ಯರ ಕಮಿಟಿಯನ್ನು ಮಾಡಿದ್ದು ಸ್ವಾಗತಾರ್ಹ. ಇದರಿಂದ ಮುಖ್ಯವಾಗಿ ಸಮಯ ಉಳಿತಾಯ, ಹಣ ಉಳಿತಾಯ ಇನ್ನು ಮುಂತಾದ ಉಪಯೋಗಗಳಿವೆ. ಆದರೆ ಇದರ ಜೊತೆಗೆ ಮತದಾರರ ಪಟ್ಟಿಯಲ್ಲಿರುವ ಶೇ.100 ಎಲ್ಲಾ ಮತದಾರರು ಕಡ್ಡಾಯವಾಗಿ ಮತ ಹಾಕುವಂತೆ ಮಸೂದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಯುವಸೇನ ಸೊಶಿಯಲ್ ಆ್ಯಕ್ಷನ್ ಕ್ಲಬ್ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಅರ​‍್ಿಸಿದೆ.  ಈ ವಿಷಯವನ್ನು ತಜ್ಞರ ಬಳಿ ಚರ್ಚಿಸಿ ಮತದಾರರು ಮತಹಾಕದ ಪಕ್ಷದಲ್ಲಿ ಅವರ ಪರಿಧಿಯಲ್ಲಿ ಬರುವ ಚುನಾವಣಾಧಿಕಾರಿಗಳಿಗೆ ಒಂದು ತಿಂಗಳಲ್ಲಿ ವಿವರವಾಗಿ ದಾಖಲು ಸಮೇತ ನೀಡುವಂತಾಗಬೇಕು. ಉದಾಹರಣೆಗೆ  ಆ ದಿನ ಮದುವೆ, ಚಿಕಿತ್ಸೆ, ವಿದೇಶ ಪ್ರಯಾಣ ಇನ್ನು ಮುಂತಾದ ಕಾರಣಗಳಿಂದ ಮತ ಹಾಕಲು ಸೂಕ್ತ ಕಾರಣವನ್ನು ವಿವರವಾಗಿ ದಾಖಲೆ ಸಮೇತ ನೀಡಬೇಕಾಗುತ್ತದೆ.  ನಮ್ಮ ರಾಜ್ಯದಲ್ಲಿ ಖಾಸಗೀ, ಸರಕಾರಿ ಉದ್ಯೋಗ ಮಾಡುವಂತಹ ಮತ್ತು ಹೊರ ರಾಜ್ಯದಲ್ಲಿ ಉದ್ಯೋಗ ಮಾಡುವಂತಹ ಮತ್ತು ಅನೇಕ ಕಾರಣಗಳಿಂದ ಹೊರ ರಾಜ್ಯದಲ್ಲಿಯೇ ಸ್ಥಿರವಾಗಿದ್ದರೆ ಅವರು ಮತ ಕೇಂದ್ರಕ್ಕೆ (ಸ್ಥಳಕ್ಕೆ) ಮತಹಾಕುವುದಕ್ಕೆ ಬರದೇಯಿದ್ದರೆ ಅಂತಹ ಮತದಾರರಿಗೆ ಆನ್‌-ಲೈನ್ ಮೂಲಕ ಮತ ಹಾಕುವ ಅವಕಾಶವನ್ನು ಕಲ್ಪಿಸಬೇಕು.  ಶೇ.100 ಮತ ಪದ್ಧತಿಯಲ್ಲಿ ಬಹಳಷ್ಟು ಉಪಯೋಗಗಳು ಇವೆ. ಇತ್ತೀಚೆಗೆ ಸ್ವಲ್ಪ ಮತದಾರರು ಒಂದು ಪಕ್ಷ ಅಥವಾ ವ್ಯಕ್ತಿ ಹಣ ನೀಡಿದರೆಂದು ಮತ್ತೊಂದು ಪಕ್ಷ ಅಥವಾ ವ್ಯಕ್ತಿ ಹಣ ನೀಡಿಲ್ಲ ಎಂದು, ಇನ್ನು ಸ್ವಲ್ಪ ಪ್ರದೇಶಗಳಲ್ಲಿ ರಸ್ತೆ ಹಾಕಿಲ್ಲ ಎಂದು, ಇನ್ನಿತರೆ  ಮೂಲಭೂತ ಸೌಕರ್ಯಗಳು ಒದಗಿಸಿಲ್ಲವೆನ್ನುವ ನೆಪವನ್ನೊಡ್ಡಿ ಚುನಾವಣೆ ಬಹಿಷ್ಕರಿಸಿರುತ್ತೇವೆ ಎಂದು ಹೇಳುತ್ತಾ ಈ ರೀತಿಯ ಗುಂಪಿನ ಮತದಾರರು ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಾರೆ.   ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಮತದಾರ ಕಡ್ಡಾಯವಾಗಿ ಮತ ಹಾಕುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಇದರಿಂದ ಉತ್ತಮವಾದ ರಾಜಕೀಯ ನಾಯಕರು ಆಯ್ಕೆಯಾಗುವ ಸಾಧ್ಯತೆ ಇರುತ್ತದೆ.  ಆದ್ದರಿಂದ ತಾವುಗಳು ಭಾರತ ದೇಶದಲ್ಲಿ ಶೇ.100 ಮತದಾನ ಆಗುವಂತೆ ಅಂದರೆ ಪ್ರತಿಯೊಬ್ಬ ಮತದಾರ ಕಡ್ಡಾಯವಾಗಿ ಮತದಾನ ಮಾಡುವಂತೆ ಬಿಲ್ ತರುವಂತೆ ಮನವಿ ಮೂಲಕ ಪ್ರಧಾನಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಯುವಸೇನ ಸೊಶಿಯಲ್ ಆ್ಯಕ್ಷನ್ ಕ್ಲಬ್ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಎಸ್‌.ಕೃಷ್ಣ, ಜಿ.ಎಂ. ಭಾಷ,ಪಿ.ಶ್ರೀನಿವಾಸರೆಡ್ಡಿ, ಉಪ್ಪಾರ ಮಲ್ಲಪ್ಪ, ಶ್ರೀನಿವಾಸರೆಡ್ಡಿ ಎಂ, ಎಂ.ಕೆ.ಜಗನ್ನಾಥ, ಪಿ.ನಾರಾಯಣ, ಸಾಮಾಜಿಕ ಕಾರ್ಯಕರ್ತರು ಮತ್ತು  ಕೆ.ವೆಂಕಟೇಶ, ಎಂ. ಅಭಿಷೇಕ್ ಮತ್ತು ಇತರರು  ಇದ್ದರು. 

  


ಸುದ್ದಿ ಓದಿ