ವಿಜಯಪುರ

"ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಆಗಲೇಬೇಕು ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ"

"ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಆಗಲೇಬೇಕು ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ"

          ವಿಜಯಪುರ 17 ; 61 ನೇ ದಿನಕ್ಕೆ ಕಾಲಿಟ್ಟ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟವನ್ನು ಉದ್ದೇಶಿಸಿ ಗುರುರಾಜ ಪಡಶೆಟ್ಟಿ ರೈತ ಮುಖಂಡರು ಮಾತನಾಡುತ್ತಾ "ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಆಗಲೇಬೇಕು ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ" ಎಂದು ಹೇಳಿದರು. ಬಡವರ,ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಕಡಿಮೆ ಕರ್ಚಿನಲ್ಲಿ ಓದಲು ಮತ್ತು ಉನ್ನತ ಶಿಕ್ಷಣ ಪಡೆಯಲು ನಮ್ಮ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕೆ ಬೇಕು" ಎಂದು ಹೇಳಿದರು. ಒಂದು ವೇಳೆ ಸರಕಾರ ನಮ್ಮ ಹೋರಾಟಕ್ಕೆ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಕರೆ ನೀಡಿದರು.

       ರೈತ ಹೋರಾಟಗಾರರಾದ ಹೊಣಕೇರ​‍್ಪ ತೆಲಗಿ,ಈರಣ್ಣ ದೇವರಗುಡಿ, ಬಸವರಾಜ ಜಂಗಮಶೆಟ್ಟಿ ಇದ್ದರು. ಹೋರಾಟ ಸಮಿತಿಯ ಸದಸ್ಯರಾದ ಅರವಿಂದ ಕುಲಕರ್ಣಿ, ಭಗವಾನ್ ರೆಡ್ಡಿ, ಲಲಿತಾ ಬಿಜ್ಜರಗಿ, ಅನಿಲ ಹೊಸಮನಿ, ಅಕ್ರಂ ಮಾಷಳಕರ, ಸುರೇಶ್ ಬಿಜಾಪುರ, ಅಪ್ಪಸಾಹೇಬ ಯರನಾಳ, ಜಗದೇವ ಸೂರ್ಯವಂಶಿ, ಭೋಗೇಶ್ ಸೋಲಾಪುರ, ಶ್ರೀನಾಥ್ ಪೂಜಾರಿ, ಭರತಕುಮಾರ ಹೆಚ್ ಟಿ, ಮಲ್ಲಿಕಾರ್ಜುನ ಹೆಚ್ ಟಿ, ಸಿದ್ರಾಮ ಹಿರೇಮಠ, ಎಮ್ ಸ್ ಗುರಿಕಾರ, ಮಲ್ಲಿಕಾರ್ಜುನ ಬಟಗಿ, ಗೀತಾ ಹೆಚ್, ನೀಲಾಂಬಿಕಾ ಬಿರಾದರ್,ಲಕ್ಷ್ಮಣ ಕಂಬಾಗಿ, ಗೀರೀಶ್ ಕಲಘಟಗಿ, ಪ್ರಭುಗೌಡ ಪಾಟೀಲ, ಚಂದ್ರಶೇಖರ್ ಗಂಟೆಪ್ಪಗೋಳ್, ಸುಶೀಲಾ ಮಿನಜಗಿ, ಜ್ಯೋತಿ ಮಿನಜಗಿ ಇನ್ನಿತರರು ಭಾಗವಹಿಸಿದ್ದರು. 


ಸುದ್ದಿ ಓದಿ