ಉಮ್ಮರಗಿ ಹಾಗೂ ಕುಂಬಾರ ಗೆ "ಕನ್ನಡ ಕವಿ ರತ್ನ" ಪ್ರಶಸ್ತಿ
ದೇವರ ಹಿಪ್ಪರಗಿ 02: ತಾಲೂಕಿನ ಕಡಕೋಳ ಗ್ರಾಮದ ರಾಘವೇಂದ್ರ ಅಮರ್ಪ. ಉಮ್ಮರಗಿ(ನಾಟಕ) ಹಾಗೂ ಯಾಳವಾರ ಗ್ರಾಮದ ಗುಂಡಪ್ಪ ರಾ.ಕುಂಬಾರ(ಕಲೆ)ಇವರ ರಂಗಭೂಮಿ ಹಾಗೂ ಕಲೆ ಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ರಂಗಮಿತ್ರ ನಾಟ್ಯ ಸಂಘ ಕಲಬುರ್ಗಿ ಹಾಗೂ ಕರ್ನಾಟಕ ಕರ್ನಾಟಕ ಬರಹಗಾರರ (ಕವಿಗಳ) ಸಂಘ ಬೆಂಗಳೂರು ಅವರು ದಿ.04.01.26ರ ರವಿವಾರ ದಂದು ಕಲಬುರ್ಗಿ ನಗರದ ಡಾ. ಎಸ್.ಎಮ್.ಪಂಡಿತ ರಂಗ ಮಂದಿರದಲ್ಲಿ ನಡೆಯಲಿರುವ ಕವಿಸಂಗಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ರಾಜ್ಯಾಧ್ಯಕ್ಷರಾದ ಶಂಕರ ಜಿ ಹೂವಿನ ಹಿಪ್ಪರಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲೂಕಿನ ಕಡಕೋಳ ಗ್ರಾಮದ ರಂಗಭೂಮಿ ಯುವ ಕಲಾವಿದ ರಾಘವೇಂದ್ರ ಉಮ್ಮರಗಿ ಅವರು ಸಾಮಾಜಿಕ ನಾಟಕಗಳನ್ನು ಬರೆಯುವ ಮೂಲಕ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದಾರೆ.
ಇವರು ಬರೆದ ಅನೇಕ ಕರ್ನಾಟಕಗಳು ರಂಗ ಪ್ರದರ್ಶನ ಮಾಡಿ ಹಾಗೂ ವಿಜಯಪುರ ಜಿಲ್ಲಾ ಪ್ರಥಮ ಸಮ್ಮೇಳನದಲ್ಲಿ ಮಾಂಗಲ್ಯ ಇದ್ದರೂ ನೀ ಮಡದಿಯಲ್ಲ ಎಂಬ ನಾಟಕ ಕಂದಗಲ್ ಹಣಮಂತ್ರಾಯ ಗಂಗಮಂದಿರದಲ್ಲಿ ಪ್ರದರ್ಶನ ಗೊಂಡಿತ್ತು. ಸುಮಾರು 17 ನಾಟಕ ಕೃತಿಗಳನ್ನು ರಚಿಸಿದ್ದಾರೆ ಇವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ತಾಲೂಕಿನ ಯಾಳವಾರ ಗ್ರಾಮದ ಗುಂಡಪ್ಪ ಕುಂಬಾರ ಅವರ ಕಲೆ, ಸಾಹಿತ್ಯ ಹಾಗೂ ನಾಟಕ ಅಭಿನಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಮನೆ ಮಾತಾಗಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ರಂಗ ಮಿತ್ರ ಮಂಡಳಿ ಹಾಗೂ ಕರ್ನಾಟಕ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘ ಬೆಂಗಳೂರು ಇವರು 04-01-2026 ರಂದು ನಡೆಯುವ ಕಲಬುರ್ಗಿ ಕವಿ ಸಂಗಮ ವಿನೂತನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವದು ಎಂದು ರಾಜ್ಯ ಅಧ್ಯಕ್ಷರಾದ ಶ್ರೀ ಶಂಕರ ಜಿ ಹೂವಿನ ಹಿಪ್ಪರಗಿ ಅವರು ತಿಳಿಸಿದ್ದಾರೆ.