"ವಿಜಯಪುರ ಕಿತ್ತೂರು ಚನ್ನಮ್ಮ ಮೂರ್ತಿ ಅನಾವರಣಕ್ಕೆ ಗಡವು"
ವಿಜಯಪುರ 14: ವಿಜಯಪುರ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಕಳೆದ ಮೂರು ವರ್ಷಗಳಿಂದ ರಾಷ್ಟ್ರಮಾತೆ. ಭಾರತದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಕಿತ್ತೂರು ಚನ್ನಮ್ಮನವರ ಮೂರ್ತಿಯನ್ನು ಅನಾವರಣಗೊಳಿಸದೆ. ಮುಸುಕುಧಾರಿಯಾಗಿ ನಿಲ್ಲಿಸಿರಿರುವುದು. ದಿಟ್ಟ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ಚನ್ನಮ್ಮನವರಿಗೆ ಮಾಡುತ್ತಿರುವ ಘೋರ ಅಪಮಾನ ಎಂದು ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ವೇದಿಕೆ ರಾಜ್ಯ ಸಂಚಾಲಕ ಹಾಗೂ ನ್ಯಾಯವಾದಿ ದಾನೇಶ ಅವಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿದ ಅವರು, ಚನ್ನಮ್ಮನ ಮೂರ್ತಿ ಪ್ರತಿಷ್ಟಾಪನೆಗೆ ಕೆಲವರು ಮೀನ-ಮೇಷ ಎಣಿಸುತ್ತಿರುವುದು ಖಂಡನೀಯ. ತಮ್ಮ ರಾಜಕೀಯ ಸ್ವ ಪ್ರತಿಷ್ಠೆಗಾಗಿ ಮೂರ್ತಿ ಅನಾವರಣಕ್ಕೆ ಅಡ್ಡಗಾಲು ಹಾಕುತ್ತಿರುವುದು. ದಿನಕ್ಕೊಂದು ಹೊಸ ನೆಪಗಳನ್ನು ಹೇಳಿ ಮುಂದೂಡುತ್ತಿರುವುದು ವಿಷಾದನೀಯ. ಇದು ವೀರ ರಾಣಿ ಕನ್ನಡತಿ ಕಿತ್ತೂರು ಚನ್ನಮ್ಮನವರ ಅಭಿಮಾನಿಗಳಿಗೆ ಅಪಾರ ನೋವು ತಂದಿದೆ. ಜನರ ಸಹನೆಗೂ ಒಂದು ಮಿತಿಯಿದೆ. ಅದನ್ನು ಹೆಚ್ಚು ಪರೀಕ್ಷಿಸಬಾರದು. ಕಾರಣ ಡಿಸೆಂಬರ್ 31,2025 ರ ಒಳಗಾಗಿ ಚನ್ನಮ್ಮವರ ಮೂರ್ತಿ ಪ್ರತಿಷ್ಠಾಪನೆಯ ಹೊಣೆ ಹೊತ್ತ ಗಣ್ಯ-ಮಾನ್ಯರು.
ಚನ್ನಮ್ಮನವರ ಮೂರ್ತಿ ಅನಾವರಣಗೊಳಿಸದಿದ್ದರೆ ಚನ್ನಮ್ಮನವರ ಅಭಿಮಾನಿಗರು, ಜಿಲ್ಲೆಯ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಒಮ್ಮತದ ನಿರ್ಣಯ ಕೈಗೊಂಡು ಜನೆವರಿ 01-01-2026 ರಂದು ಸಾರ್ವಜನಿಕರೇ ಮುಂದಾಗಿ ಮೂರ್ತಿ ಆನಾವರಣಗೊಳಿಸುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದ ಕಾರಣ ಚನ್ನಮ್ಮನ ಮೂರ್ತಿ ಹೊಣೆ ಹೊತ್ತವರು ಈ ಕೂಡಲೇ ಮೂರ್ತಿ ಅನಾವರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.