ವಿಜಯಪುರ

“ನಿರಂತರ ಶ್ರಮ, ಕಲಿವಿನಲ್ಲಿ ಆಸಕ್ತಿಯಿಂದ ಫಲಿತಾಂಶ ಹೆಚ್ಚಿಸಲು ಸಾಧ್ಯ”

“ನಿರಂತರ ಶ್ರಮ, ಕಲಿವಿನಲ್ಲಿ ಆಸಕ್ತಿಯಿಂದ ಫಲಿತಾಂಶ ಹೆಚ್ಚಿಸಲು ಸಾಧ್ಯ”

ವಿಜಯಪುರ 27 : ದೇವರು ಹುಟ್ಟಿಸುವಾಗ ಇಂಥ ಕುಲದವರೆಂದು ಹುಟ್ಟಿಸಲಿಲ್ಲ, ಸಮಾಜಮುಖಿಯಾಗಿ ಬೆಳೆಯುವ ಮಗುವನ್ನು ನಾವು ಇಂಥದ ಕುಲದದವರೆಂದು ಯಾಕೆ ಪಟ್ಟ ಹಚ್ಚಿಕೊಳ್ಳಬೇಕು. ಉತ್ತಮ ಪರಿಸರ ನಿಶ್ವಾರ್ಧ ಸೇವೆ, ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿ ನೋಡಿ ಆವಾಗ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಹೆಚ್ಚಿಸಲು ಸಾಧ್ಯಎಂದು ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಬಿ.ಆಯ್‌.ಪಾಟೀಲರವರು ಅಧ್ಯಕ್ಷ ಸ್ಥಾನದಿಂದ ಕನ್ನಡ ಭಾಷಾ ಶಿಕ್ಷಕರಿಗೆ ಅನುಭವದ ಮಾತುಗಳನ್ನು ಹೇಳಿದರು. 

ಪ್ರಾಧ್ಯಾಪಕ ಎ.ಎಸ್‌.ಹಿಪ್ಪರಗಿ ಮಲ್ಲಿಕಾರ್ಜುನ ಪ್ರೌಢಶಾಲೆ ಮತ್ತು ಬ ಬಾಗೇವಾಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ಎಚ್‌.ಆರ್‌.ಕಲಗೇರಿ ದಂಪತಿ ಮತ್ತು ವಿಜಯಪುರದ ಜಿಲ್ಲಾ ಕನ್ನಡ ಬಾಷೆಯ ಪ್ರೌಢಶಾಲಾ ಶಿಕ್ಷಕರ ದತ್ತಕಾರ‌್ಯಕ್ರಮದಲಿ ಮಾತನಾಡುತ್ತಾ ನಾನು ಡಿ.ಎಸ್‌.ಪಿ ವೃತ್ತಿಯಿಂದ ನಿವೃತ್ತರಾದರೂ ಇನ್ನುವರೆಗೂ ಪ್ರಾಮಾಣಿಕತೆಯಿಂದ ದುಡಿದಿರುವ ಫಲವಾಗಿ ಈ ಟ್ರಸ್ಟ್‌ಗೆ ನಾನೂ ಹಣ ನೀಡುತ್ತೇನೆಂದು ತಿಳಿಸಿದರು. 

ಡಾ ವಿ.ವಿ.ಮಳಗಿ ಕಾರ‌್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳು ಭಾಷೆಯ ಪ್ರೌಢಿಮೆಯನ್ನು ಬೆಳೆಸಿಕೊಂಡು ಶಿಕ್ಷಕರಾದ ನೀವು ಅವರಿಗೆ ಬರೆಯಲು ಓದಲು ಹತ್ತಿಉತ್ತಮ ಫಲಿತಾಂಶ ನೀಡಿದಾಗ ಈ ಕಾರ‌್ಯಗಾರ ಸಾರ್ಥಕವಾಗುತ್ತದೆಯಂದರು. ಬ ಬಾಗೇವಾಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀವು ಶಿಕ್ಷಕರಾದವರು ಸರಕಾರ ಕೊಟ್ಟಿರುವ ಪ್ಯಾಕೇಜ್‌ಗಳನ್ನು ಚಾಚು ತಪ್ಪದೆ ಪಾಲಿಸಿ. ಈ ಸಂಸ್ಥೆ ಕನ್ನಡದ ಕಾರಾ​‍್ಯಗಾರವನ್ನು ಏರಿ​‍್ಡಸಿ ಕನ್ನಡ ಭಾಷೆಯ ಪ್ರಭುತ್ವವನ್ನು ಬೆಳೆಸುವಲ್ಲಿ ಈ ಪ್ರತಿಷ್ಠಾನ ಉತ್ತಮ ಕೆಲಸ ಮಾಡುತ್ತಿದೆ ಎಂದರು. ಮಕ್ಕಳಿಗೆ ತಿದ್ದಿತೀಡಿ ಮಾರ್ಗದರ್ಶನ ನೀಡಿ ಎಂದು ಮುಖ್ಯ ಅತಿಥಿ ಸ್ಥಾನದಿಂದ   ವಸಂತ ರಾಠೋಡರವರು ಮಾತನಾಡಿದರು. ವಿಷಯ ಪರೀವಿಕ್ದಕರಾದ   ಶಿವಾನಂದ ಬ್ಯಾಹಟ್ಟಿರವರು ಕನ್ನಡ ಬಾಷೆ ಪಕೋಪದ್ದು ನಾವು ಬರೆದಂತೆ ಓದುತ್ತೇವೆ ಈ ಮಾತೃಭಾಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಮಾರ್ಗದರ್ಶಿ ಪುಸ್ತಕವನ್ನು ಬಳಸಿಕೊಳ್ಳಬೇಕೆಂದರು. 

ಮೊದಲ ಗೋಷ್ಢಿಯಲ್ಲಿ ಪ್ರೋ. ಎಸ್‌.ಜಿ.ದೊಡ್ಡಮನಿಯವರು ಸಾಮಾನ್ಯ ದೋಷಗಳು ಅವುಗಳ ನಿವಾರಣೆ, ಎರಡನೇ ಗೋಷ್ಟಿಯಲ್ಲಿ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಮಹಾಂತೇಶ ಅಂಗಡಿ ಮಾತನಾಡಿ ನನಗೆ ಏನೂ ಬರದ ಎಂಟನೇಯ ತರಗತಿ ವಿದ್ಯಾರ್ಥಿ ಕೊಡಿ ಅವರಿಗೆ ಅಕ್ಷರ ಕಲಿಸಿ ಓದು ಬರೆಯುವಂತೆ ಮಾಡಿದರೆ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಸುಲಭ ಎಂದು ಹೇಳಿತಮ್ಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಬಂದು ತಾವು ಮೂಲತಃ ಏನು ಬರುತ್ತಿಲಿಲ್ಲ ನಮಗೆ ಬೆನ್ನು ಚಪ್ಪರಿಸಿ ಪ್ರೋತ್ಸಾಹಿಸಿದ್ದರಿಂದ ನನಗೆ 90ಅ ಮಾಡಲು ಸಾಧ್ಯವಾಗುತ್ತದೆಯಂದು ಹೇಳಿದರು, ಮೂರನೇ ಗೊಷ್ಟಿಯಲ್ಲಿ ಡಾ ವನಜಾಕ್ಚಿ ಬಡಿಗೇರ ಪ್ರೌಢಶಾಲೆಯ ಶಿಕ್ಷಕಿ ಅರ್ಜುಣಗಿಯವರು ನೀಲನಕ್ಕೆ ಬಗ್ಗೆ ತಿಳಿಸಿದರು ನಾಲ್ಕನೇ ಗೋಷ್ಠಿಯಲ್ಲಿ ತಳೇವಾಡ ಪ್ರೌಏಶಾಲೆಯ ಮುಖ್ಯೋದ್ಯಾಪಕರು ಎಸ್‌.ಎಸ್‌.ಪೂಜಾರಿಯವರು ಮಾತನಾಡುತ್ತಾ ನಿಮ್ಮ ಶಾಲೆಯಲ್ಲಿ ನೀವು ಉತ್ತಮವಾಗಿ ಕಲಿಸಿ ಆವಾಗ ಉತ್ತಮ ಫಲಿತಾಂಶ ಬರುತ್ತದೆಯೆಂದು ತಮ್ಮ ಶಾಲೆಯನ್ನು ಮಾದರಿಯಾಗಿಟ್ಟುಕೊಂಡು ಹೇಳಿದರು. ಕಾರಾ​‍್ಯಗಾರದಲಿ 50 ಜನ ಶಿಕ್ಷಕರು ಭಾಗವಹಿಸಿದ್ದರು. 

ಸಮಾರೋಪ ಸಮಾರಂಭದಲ್ಲಿ ಇಬ್ಬರು ಶಿಕ್ಷಕರು ಮಾತನಾಡಿ ಈ ಸಂಸ್ಥೆ ನಿಜವಾಗಲು ಗುಣಮಟ್ಟದ ತರಬೇತಿಯನ್ನು ನೀಡಿ ಕನ್ನಡದ ಅಸ್ಮೀತೆಯನ್ನು ಕಾಯ್ದುಕೊಂಡಿದೆ. ಇಲ್ಲಿಯವರ ಆದರಾತಿಥ್ಯ ಕೂಡಾ ನಮ್ಮನ್ನು ಹೆಚ್ಚಿಗೆ ಕಲಿಯುವಂತೆ ಕಲಿಸುವಂತೆ ಮಾಡಿದೆ ಎಂದು ತಿಳಿಸಿದರು. ವಿ.ಆರ್‌.ಐಹೊಳ್ಳಿಯವರು ಕಾರ‌್ಯಕ್ರಮದ ನಿರೂಪಣೆ ಮಾಡಿದರು. ಡಾಽಽ ವ್ಹಿ.ಡಿ.ಐಹೊಳ್ಳಿಯವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಮುಖ್ಯೋದ್ಯಾಪಕರಾದ ಎನ್‌.ಎಚ್‌.ದಳವಾಯಿ ವಂದಿಸಿದರು. ಎಸ್‌.ಎಸ್‌.ಶಿವಣಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಎಸ್‌.ಜಿ.ನಾಡಗೌಡ, ಎಸ್‌.ಆರ್‌.ಪಾಟೀಲ, ಎ.ಎಸ್‌.ಐಹೊಳ್ಳಿ, ಜಿ.ಕೆ.ಗೊಟ್ಯಾಳ, ಡಾ ಸುಭಾಷ್ ಕನ್ನೂರ ಅಶೋಕ ಹಿಪ್ಪರಗಿ, ಎಸ್‌.ಎಚ್‌.ಹೂಗಾರ ಪಾಲ್ಗೊಡಿದ್ದರು. ಮಲ್ಲಿಕಾರ್ಜುನ ಶಾಲೆಯ ಶಿಕ್ಷಕರಾದ ಜಿ.ಬಿ.ಸಜ್ಜನ, ಜೆ.ಆಯ್‌.ಇಂಗಳೇಶ್ವರ, ಡಿ.ಎಸ್‌.ಖಿಲಾರಿ, ಸರಸ್ವತಿ ಪರಗೊಂಡ ಮತ್ತು ಎಲ್ಲಿ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ