ಬಳ್ಳಾರಿ

“ಯುವಜನರಿಗೆ ಉದ್ಯೋಗದ ಗ್ಯಾರೆಂಟಿ ನೀಡದ ಯುವಜನ ವಿರೋಧಿ ಬಜೆಟ್‌”

“ಯುವಜನರಿಗೆ ಉದ್ಯೋಗದ ಗ್ಯಾರೆಂಟಿ ನೀಡದ ಯುವಜನ ವಿರೋಧಿ ಬಜೆಟ್‌”

“ಯುವಜನರಿಗೆ ಉದ್ಯೋಗದ ಗ್ಯಾರೆಂಟಿ ನೀಡದ ಯುವಜನ ವಿರೋಧಿ ಬಜೆಟ್‌” 

ಬಳ್ಳಾರಿ 07 ; ರಾಜ್ಯದ 44 ಇಲಾಖೆಗಳಲ್ಲಿ ಖಾಲಿ ಇರುವ 2.72 ಲಕ್ಷಕ್ಕೂ ಹೆಚ್ಚು ಹುದ್ದೆಗಳ ಬರ್ತಿಮಾಡಿಕೊಳ್ಳುವ ಕುರಿತು ರಾಜ್ಯ ಬಜೆಟ್ ನಲ್ಲಿ ಯಾವುದೇ ಕ್ರಮಗಳಿಲ್ಲ. ಉನ್ನತ ಶಿಕ್ಷಣದಲ್ಲಿ ಕೇವಲ 2000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬರ್ತಿಯ ಕುರಿತು ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ನಸಿಂರ್ಗ್ ಕಲಿತ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯಲ್ಲಿ ಉದ್ಯೋಗ ನೀಡುವ ಬದಲು ಬಜೆಟ್‌ನಲ್ಲಿ ನಸಿಂರ್ಗ್ ವಿದ್ಯಾರ್ಥಿಗಳಿಗೆ ವಿದೇಶಿ ಭಾಷೆಗಳನ್ನು ಕಲಿಸಿ ವಿದೇಶದಲ್ಲಿ ಉದ್ಯೋಗ ಮಾಡಲು ಕಳಿಸಿ ಸರ್ಕಾರವೇ ಪ್ರತಿಭಾ ಪಲಾಯನಕ್ಕೆ ಎಡೆ ಮಾಡಿಕೊಡುತ್ತಿರುವುದು ಖಂಡನೀಯವಾದದ್ದು. 

ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 3 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ಉದ್ಯೋಗ ಭದ್ರತೆ ಒದಗಿಸುವ ಬದಲು, ನಗದುರಹಿತ ಚಿಕಿತ್ಸಾ ಸೌಲಭ್ಯದ ಹೆಸರಿನಲ್ಲಿ ಅವರಿಂದಲೇ ವಂತಿಕೆ ಸಂಗ್ರಹ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಕುರಿತು ಸೂಕ್ತಕ್ರಮಗಳು ಈ ಬಜೆಟ್‌ನಲ್ಲಿಯೂ ಇಲ್ಲ.ವ್ಯಾಪಕವಾಗಿ ಬೆಳೆಯುತ್ತಿರುವ ಗಿಗ್ ಆರ್ಥಿಕತೆಗೆ, ಗಿಗ್ ಕಾರ್ಮಿಕರ ಹಿತ ಕಾಪಾಡಲು ಕಾನೂನು ರೂಪಿಸುವುದಾಗಿ ಹೇಳಿದ್ದ ಸರ್ಕಾರ ಅದರ ಕುರಿತು ಈ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವನ್ನು ಮಾಡದಿರುವುದು ಖಂಡನೀಯ.ಇತ್ತೀಚಿಗೆ ನಡೆದ ಇನ್ವೆಸ್ಟ್‌ ಕರ್ನಾಟಕ -2025 ಮೂಲಕ ಬಂಡವಾಳಗಾರರು ಲಕ್ಷಾಂತರ ಕೋಟಿ ಬಂಡವಾಳವನ್ನು ರಾಜ್ಯದಲ್ಲಿ ಹೂಡಿಕೆ ಮಾಡುತ್ತಿದ್ದು ಈ ಮೂಲಕ ಮುಂದಿನ 5 ವರ್ಷಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಹಾಗೂ ಹೊಸ ಕೈಗಾರಿಕಾ ನೀತಿಯಿಂದ ಮುಂದಿನ 5 ವರ್ಷಗಳಲ್ಲಿ 20 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ಹೇಳುತ್ತ, ಆ ಮೂಲಕ ಬಂಡವಾಳಗಾರರಿಗೆ ವಿವಿಧ ಉತ್ತೇಜಕಗಳನ್ನು ನೀಡಲು ಹೊರಟಿರುವುದು ಸರ್ಕಾರ ನಿಜವಾಗಿಯೂ ಯಾರ ಪರವಾಗಿದೆ ಎನ್ನುವುದನ್ನು ತೋರಿಸುತ್ತದೆ. ಬಂಡವಾಳಶಾಹಿಗಳ ಉದ್ದೇಶ ಅತ್ಯಧಿಕ ಲಾಭವೇ ಹೊರತು ಉದ್ಯೋಗ ಸೃಷ್ಟಿ ಅವರ ಆದ್ಯತೆಯಲ್ಲ ಎನ್ನುವುದು ಜಗಜ್ಜಾಹಿರವಾದ ಸಂಗತಿ.ಈಗಾಗಲೇ ಮದ್ಯದ ಕುಡಿತದಿಂದಾಗಿ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ. ಬಹುದೊಡ್ಡ ಸಂಖ್ಯೆಯ ನಿರುದ್ಯೋಗಿ ಯುವಜನರೂ ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಮದ್ಯ ಮಾರಾಟವನ್ನು ನಿಯಂತ್ರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಬದಲು ಬಜೆಟ್‌ನಲ್ಲಿ ಇದರಿಂದಲೇ ಅಬಕಾರಿ ಇಲಾಖೆಗೆ ಹೆಚ್ಚಿನ ಆದಾಯ ನೀರೀಕ್ಷಿಸುತ್ತಿರುವುದು ಖಂಡನೀಯ.  

ಒಟ್ಟಾರೆ ರಾಜ್ಯ ಬಜೆಟ್ ಯುವಜನ ವಿರೋಧಿಯಾಗಿದ್ದು, ತಮ್ಮ ಹಕ್ಕಿಗಾಗಿ ಪ್ರಬಲ ಆಂದೋಲನವನ್ನು ರೂಪಿಸಲು ಮುಂದಾಗಬೇಕು ಎಂದು ಎಐಡಿವೈಓ ರಾಜ್ಯದ ಯುವಜನರಿಗೆ ಕರೆ ನೀಡುತ್ತದೆ. 


ಸುದ್ದಿ ಓದಿ