ಬಳ್ಳಾರಿ

“ಪಯಣ” ಬಿಸಿಎ ಮತ್ತು ಬಿಎಸ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

“ಪಯಣ” ಬಿಸಿಎ ಮತ್ತು ಬಿಎಸ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಬಳ್ಳಾರಿ 06: ವಿಜ್ಞಾನ ವಿಭಾಗಕ್ಕೆ ಸಂಶೋಧನೆ ಮತ್ತು ಅನ್ವೇಷಣೆಗಳಂತಹ ಸಾಕಷ್ಟು ಅವಕಾಶಗಳು ಇವೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಲು ನಮ್ಮ ಸತತ ಪ್ರಯತ್ನ ಇರಬೇಕಾದದ್ದು ಅತ್ಯವಶ್ಯಕ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ವಿಜಯಕುಮಾರ್ ಮಾಲಶೆಟ್ಟಿ, ಡೀನ್ ವಿಜ್ಞಾನ ವಿಭಾಗ, ಜೂವಾಲಜಿ ವಿಭಾಗದ ಚೇರ್‌ಮೆನ್ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇವರು ಎಸ್‌.ಜಿ.ಟಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಬಿಸಿಎ ಮತ್ತು ಬಿಎಸ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸುತ್ತಾ ತಿಳಿಸಿದರು. 

ಇದೇ ಕಾರ್ಯಕ್ರಮಕ್ಕೆ ಮತ್ತೊಬ್ಬ ಮುಖ್ಯ ಅತಿಥಿಗಳಾಗಿ ಬಂದಂತ ಡಾ.ಸಂತೋಷ್ ಪಾಟೋಲ್, ಕಂಪ್ಯೂಟರ್ ಸೈನ್ಸ್‌ ವಿಭಾಗ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇವರು ಮಾತನಾಡಿ ಹೈಸ್ಕೂಲ್ ಹಂತದಿಂದಲೇ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಗುರಿ ಇಟ್ಟುಕೊಂಡು ಆ ನಿಟ್ಟಿನಲ್ಲಿ ಸತತ ಪ್ರಯತ್ನಗಳನ್ನು ಮಡಬೇಕಾಗುತ್ತದೆ ಆಗ ಮಾತ್ರ ಅವುಗಳಲ್ಲಿ ಯಶಸ್ಸನ್ನು ಕಾಣಲಿಕ್ಕೆ ಸಾದ್ಯವಾಗುತ್ತದೆ ಎಂದರು. 

ಎಸ್‌.ಜಿ.ಟಿ ಸಂಸ್ಥೆಯ ಅದ್ಯಕ್ಷರಾದ ಎಸ್‌.ಎನ್‌.ರುದ್ರ​‍್ಪನವರು ಅದ್ಯಕ್ಷೀಯ ನುಡಿಗಳನ್ನಾಡಿ ವಿದ್ಯಾರ್ಥಿ ಜೀವನ ಮುಗಿದು ಈಗ ತಾನೆ ನಿಜವಾದ ಪಯಣಕ್ಕೆ ಕಾಲು ಇಡುತ್ತಿದ್ದೀರಿ. ಮುಂದಿನ ಪರೀಕ್ಷೆಗಳಿಗೆ ಹಾಗು ನಿಮ್ಮ ಮುಂದಿನ ಸಾಧನೆಗಳಿಗೆ ಒಳ್ಳೆಯದಾಗಲಿ ಎಮದು ತಿಳಿಸಿದರು. 

ಎಸ್‌.ಜಿ.ಟಿ ಪದವಿ ಕಾಲೇಜಿನ ವ್ಯವಹಾರ ಅದ್ಯಯನ ವಿಭಾಗದ ಮುಖ್ಯಸ್ಥರಾದ ರೀನಾರೆಡ್ಡಿಯವರು ಮಾತನಾಡಿ ತಂತ್ರಜ್ಞಾನ ಮನುಷ್ಯರಿಗೆ ಉಪಯುಕ್ತವಾಗಿದೆಯಾದರು ವರ್ತಮಾನ ಕಾಲದಲ್ಲಿ ಬದುಕಲಾರದಂತೆ ಮತ್ತು ಒಬ್ಬರಿಂದ ಒಬ್ಬರನ್ನು ದೂರವಾಗುವಂತೆ ಮಾಡುವುದರ ಬಗ್ಗೆ ಎಚ್ಚರವಹಿಸಿ ಎಂದರು. 

ಕಾರ್ಯಕ್ರಮದಲ್ಲಿ ಎಸ್‌.ಜಿ.ಟಿ ಸಂಸ್ಥೆಯ ಕಾರ್ಯದರ್ಶಿಗಳಾದ ಜಿ.ನಾಗರಾಜ್, ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರಕಾಶ್ ಓ ಸಾರಂಗಮಠ, ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಜಿ.ತಿಪ್ಪೇರುದ್ರರವರು ಎಸ್‌.ಜಿ.ಟಿ ಶಾಲೆಯ ನಿರ್ದೇಶಕರಾದ ಜಿ.ಮಂಜುಳ.  ಎಸ್‌.ಜಿ.ಟಿ ಕಾಲೇಜಿನ ಹಲವು ವಿಭಾಗಗಳ ಮುಖ್ಯಸ್ಥರುಗಳಾದ .ರೂಪ ಆರ್,  ಶ್ರೀದೇವಿ, ಇಷಾದ್ ಅಲಿ, ಉಪನ್ಯಾಸಕರುಗಳಾದ ಹಯಾತ್ ಅಲಿ, ಶೀಮತಿ ಸಾವಿತ್ರಿ ಮಸ್ಕಿ, ಪವನ್ ಕುಮಾರ್, ಉಮಾಪತಿ ಮುಂತಾದವರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆ ಪಡೆದವು. 


ಸುದ್ದಿ ಓದಿ