ಮನರಂಜನೆ

ಗಣೇಶ ಹಬ್ಬಕ್ಕೆ “ಲಂಕೆ” ರಿಲೀಸ್

ಗಣೇಶ ಹಬ್ಬಕ್ಕೆ “ಲಂಕೆ” ರಿಲೀಸ್

  ಬೆಂಗಳೂರು, ಸೆ. 02 ಗಣೇಶ ಹಬ್ಬದಂದು ಸಿನಿ ಪ್ರೇಕ್ಷಕರು ಲಂಕೆಗೆ ಹೋಗಿ ಬರಬಹುದಾಗಿದೆ. ಅರ್ಥಾತ್ ಆ ದಿನ ಲೂಸ್ ಮಾದ ಯೋಗಿ ಅಭಿನಯದ ಚಿತ್ರ         “ಲಂಕೆ” ಬಿಡುಗಡೆಯಾಗಲಿದೆ.  
         
ಸೆಪ್ಟೆಂಬರ್ 10 ರಂದು ಲಂಕೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸೆಪ್ಟೆಂಬರ್ 3 ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಕೊರೋನಾ ನಡುವೆಯೂ ಚಿತ್ರತಂಡ ಧೈರ್ಯ ಮಾಡಿ ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ.
         
ಗಣೇಶ ಹಬ್ಬದಂದು ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಪ್ರತಿಶತ 100ರಷ್ಟು ಆಸನ ಭರ್ತಿಗೆ ಅವಕಾಶವಿಲ್ಲದ ಕಾರಣ  ಮುಂದೂಡಿಕೆಯಾಗಿದೆ. ಆದರೆ ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಚಿತ್ರ ಸಿಹಿ ಸುದ್ದಿ ನೀಡಿದೆ.

ಸುದ್ದಿ ಓದಿ