ನೋಂದಣಿ ಕಾರ್ಯ, ಖರೀದಿ ಫೆ.28ರವರೆಗೆ ವಿಸ್ತರಣೆ
ಲೋಕದರ್ಶನ ವರದಿ
ಮುಂಡಗೋಡ:2022-23ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಕುಚ್ಚಲಕ್ಕಿ ಭತ್ತ ಖರೀದಿ ಕೇಂದ್ರವನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಮೂಲಕ ಪ್ರಾರಂಭಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಚ್ಚಲಕ್ಕಿ ಭತ್ತವನ್ನು(ಜಯಾ, ಜ್ಯೋತಿ, ಅಭಿಲಾಷಾ, ಎಮ್.ಓ-4) ಪ್ರತಿ ಕ್ವಿಂ.ಗೆ ರೂ.2040 ಹಾಗೂ ಪ್ರೋತ್ಸಾಹಧನ ರೂ.500 ಸೇರಿ ಒಟ್ಟು ರೂ.2540 ಪ್ರತಿ ಕ್ವಿಂಟಾಲ್ಗೆ ಬೆಲೆ ನಿಗದಿಪಡಿಸಲಾಗಿದೆ. ತಾಲೂಕಿನ ಎಪಿಎಮ್ಸಿ ಆವರಣದ ಅಕ್ಷರದಾಸೋಹ ಮಳಿಗೆಯಲ್ಲಿ ಖರೀದಿ ಕೇಂದ್ರ ಇದೆ. ನೋಂದಣಿ ಕಾರ್ಯ ಈ ಹಿಂದೆ ದಿ.21-12-2012ರವರೆಗೆ ಇತ್ತು. ಈಗ ದಿ.28-02-2023ರವರೆಗೆ ವಿಸ್ತರಣೆ ಮಾಡಲಾಗಿದೆ. ನೋಂದಣಿಗಾಗಿ ರೈತರು ಕೃಷಿ ಇಲಾಖೆಯಿಂದ ಹೊಂದಿದ ಈಖಗಋಖ ಋ ಪಡೆಯಬೇಕು. ಭತ್ತವನ್ನು ನೋಂದಾಯಿಸಿಕೊಂಡ ರೈತರಿಂದ ಮಾತ್ರ ಪ್ರತಿ ಎಕರೆಗೆ 16ಕ್ವಿಂಟಾಲ್ನಂತೆ ಗರಿಷ್ಠ 40ಕ್ವಿಂ. ಭತ್ತವನ್ನು ಒಬ್ಬ ರೈತರಿಂದ ಖರೀದಿ ಪಡೆಯಲಾಗುವುದು. ಭತ್ತವು ಕ್ರಿಮಿಕೀಟಗಳಿಂದ ಹಾಗೂ ರೋಗದಿಂದ ಮುಕ್ತವಾಗಿರಬೇಕು. ಗ್ರೇಡರ್ ಮೂಲಕ ಗುಣಮಟ್ಟ ಪರೀಕ್ಷಿಸಲಾಗುವುದು. ಭತ್ತವನ್ನು 28-02-2023ರವರೆಗೆ ಖರೀದಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಕ್ಷರದಾಸೋಹ ನಿರ್ವಾಹಕ ಶಂಕರ ಹುಲಿಯರ(9880481546) ಅವರನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.
ಬಾಕ್ಸ್ ಸುದ್ದಿ
ಬೆಂಬಲ ಬೆಲೆ ಯೋಜನೆಯಡಿ ಭತ್ತವನ್ನು ಖರೀದಿ ಮಾಡಲು ದಿನಾಂಕ ವಿಸ್ತರಣೆ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ ಅವರೊಂದಿಗೆ ಎಮ್.ಎಸ್.ಕುಲಕರ್ಣಿ ಜಂಟಿಯಾಗಿ ಚರ್ಚಿಸಿದರು. 2022-23ನೇ ಸಾಲಿನ ಬೆಂಬಲ ಯೋಜನೆಯಡಿ 2002 ಕ್ವಿಂಟಾಲ್ ಅಭಿಲಾಷಾ ಭತ್ತವನ್ನು 61 ರೈತರು ಮತ್ತು 3476 ಕ್ವಿಂಟಾಲ್ ಸಾಮಾನ್ಯ ಭತ್ತವನ್ನು 96 ರೈತರು ನೋಂದಣಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.