ಮುದ್ದೆಬಿಹಾಲ್

ಮೂಲಭೂತ ಸೌಲಭ್ಯ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿ ಮುತ್ತಿಗೆ

ಮೂಲಭೂತ ಸೌಲಭ್ಯ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿ ಮುತ್ತಿಗೆ

ಮುದ್ದೇಬಿಹಾಳ 23: ಪಟ್ಟಣದ ವಾರ್ಡ ನಂ 15ರಲ್ಲಿ ಪುರಸಭೆ ಅಧಿಕಾರಿಗಳು ಕಳೇದ 15ದಿನಗಳಿಂದ ಕುಡಿಯುವ ನೀರು ಪೂರೈಕೆ ಮಾಡಿಲ್ಲ, ಕಸ ಸ್ವಚ್ಚಗೊಳಿಸುತ್ತಿಲ್ಲ, ಬೀದಿ ದೀಪಗಳನ್ನು ಅಳವಡಿಸುತ್ತಿಲ್ಲ ಸೇರಿದಂತೆ ಇತರೇ ಮೂಲಬೂತ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ವಾರ್ಡನ ನಿವಾಸಿಗಳಾದ ಮಹಿಳೆಯರು ಹಾಗೂ ಯುವ ಮುಖಂಡರುಗಳು ಖಾಲಿ ಕೊಡ ಪ್ರದರ್ಶಿಸಿ ಗುರುವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 

ಈ ವೇಳೆ ಮುಖಂಡ ಯಾಶಿನ ಅತ್ತಾರ ಅವರು ಮಾತನಾಡಿ ವಾರ್ಡನಂ 15ರಲ್ಲಿನ ಜನರಿಗೆ ವಾಟರ್ ಮ್ಯಾನ್ ಸಮರ​‍್ಕವಾಗಿ ಕುಡಿಯಲು ನೀರು ಸರಬರಾಜ ಮಾಡುತ್ತಿಲ್ಲ ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಮತ್ತು ವಾರ್ಡಿನ ಸದಸ್ಯರಿಗೆ ಸಾಕಷ್ಟು ಬಾರಿಗೆ ದೂರು ಸಲ್ಲಿಸಲಾಗಿದೆ ಆದರೇ ಪುರಸಭೆ ಅಧಿಕಾರಿಗಳಿಂದಾಗಲಿ ಅಥವಾ ಸದಸ್ಯರಿಂದಾಗಲಿ ಸ್ಪಂದನೆ ದೊರೆತಿಲ್ಲ, ವಾಟರ್ ಮನಗೇ ದೂರವಾಣಿ ಮೂಲಕ ಕರೆ ಮಾಡಿದರೇ ಯಾವಾಗಲೂ ಮೋಬೈಲ್ ಸ್ವೀಚ್ ಆಪ್ ಎಂದು ಹೇಳುತ್ತದೆ ಇದರಿಂದ ಯಾರಿಗೆ ಸಂಪರ್ಕಿಸಬೇಕು ಎಂಬುದು ತಿಳಿಯುತ್ತಿಲ್ಲ ಇದು ಕೇವಲ ಒಂದು ನೀರಿನ ಸಮಸ್ಯೆ ಮಾತ್ರವಲ್ಲ  ವಾರ್ಡನಲ್ಲಿನ ಎಲ್ಲ ಮುಖ್ಯ ರಸ್ತೆಗಳಲ್ಲಿ ವಿದ್ಯುತ್ ದ್ವೀಪಗಳ ಇಲ್ಲ, ರಸ್ತೆಗಳು ಹದಗೆಟ್ಟು ಹೋಗಿವೆ, ಚರಂಡಿ ಸ್ವಚ್ಚತೆಯಿಲ್ಲದೇ ವಾರ್ಡನ ತುಂಬೇಲ್ಲ ಗಬ್ಬುವಾಸನೆ ಧೂರ್ನಾತದಿಂದ ಜನರು ಬೇಸತ್ತು ಹೊಗಿದ್ದಾರೆ, ಮಾತ್ರವಲ್ಲದೇ ಡೇಂಘಿ, ಕಾಲರಾದಂತ ರೋಗಳಗಳು ಉಲ್ಘಣಗೊಳ್ಳುವಂತಾಗಿದೆ, ಜತೆಗೆ  ನಿತ್ಯ ಮಹಿಳೆಯರು ಬಹಿರ್ಧೇಶೆಗೆ ಹೊಗಲು ಮಹಿಳೆಯರಿಗೆ ಪ್ರತ್ಯೇಕ ಶೌಚಗ್ರಹಗಳು ಇಲ್ಲ ಹೀಗೆ ಹತ್ತು ಹಲವಾರು ಸಮಸ್ಯೆಗಳು ಎದುರಾಗುತ್ತಲೇ ಇವೇ ಆದರೇ ಇದೇಲ್ಲವನ್ನೂ ಸಾರ್ವಜನಿಕರ ಹಿತ ಕಾಪಾಡಬೇಕಾದ ಪುರಸಭೆ ಅಧಿಕಾರಿಗಳು ನಮ್ಮ ವಾರ್ಡೀನ ಕಡೆ ಒಂದು ದಿನವೂ ತಿರುಗಿ ನೋಡಿಲ್ಲ ಸಮಸ್ಯೆ ಆಲಿಸಿಲ್ಲ, ಹಾಗಾಗಿ ಸಧ್ಯ ಅನಿವಾರ್ಯವಾಗಿ ಎಲ್ಲ ಮಹಿಳೆಯರು ಯುವಕರು ಈ ಹೋರಾಟ ಬನಡೆಸಬೇಕಾಗಿದೆ. ನಮಗೆ ಸಮರ​‍್ಕ ನೀರು ಹಾಗೂ ವಾರ್ಡಿನ ಮೂಲಬೂತ ಸೌಲಭ್ಯಗಳನ್ನು ಒದಗಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸಡರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಮಾಹಿತಿ ತಿಳಿದ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಅವರು ಧರಣಿ ನಿರತರತ್ತ ದಾವಿಸಿ ಕಳೇದ ಒಂದುವಾರದಿಂದ ಪಟ್ಟಣದಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯಥ್ಯೆಯ ಉಂಟಾಗಿದ್ದ ಕಾರಣ ಪಟ್ಟಣದ ಬಹುತೇಕ ಎಲ್ಲ ವಾರ್ಡಗಳಲ್ಲಿ ನೀರು ಪೂರೈಕೆಯಲ್ಲಿ ತೊಂದರೆಯಾಗಿದೆ. ಸಧ್ಯ ನಿಮ್ಮ ವಾರ್ಡನಲ್ಲಿ ಇಂದು ಸಂಜೇ ಒಳಗಾಗಿ ನೀರು ಪೂರೇ​‍್ಯಕೆ ಮಾಡಲಾಗುವುದು, ಜೊತೆಗೆ ನಿಮ್ಮ ವಾರ್ಡಿಗೆ ಬೇಟಿ ಕೊಟ್ಟು ನಿಮ್ಮ ಯಾವೂದೇ ಮೂಲ ಬೂತ ಸಮಸ್ಯೆಗಳಿದ್ದರೂ ಸ್ಪಂದಿಸಿ ಬಗೆಹರಿಸುತ್ತೇನೆ ಅದಕ್ಕೆ ಪ್ರತಿಭಟನೆ ಕೈಬಿಡಿ ಎಂದು ಮನೋಲಿಸಿದ ಪರಿಣಾಮ ಪ್ರತಿಭಟನಾಕಾರರು ಅಧಿಕಾರಿಗಳ ಮಾತಿಗೆ ಮನ್ನಣೆ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿದರು. 

ಈ ವೇಳೆ ಸೋಹೇಲ್ ಚೌಧರಿ, ಯಾಶಿನ ಅತ್ತಾರ, ಯೂನಿಸ್ ಹುಣಚ್ಯಾಳ, ಮಾಹಾಂತೇಶ ಕಡಿಬಾಗಲು, ಪವಾಡೇಪ್ಪ ಸಜ್ಜನ, ಖಾಜೆಸಾಬ ಮಳಗಿ, ಅಬ್ಬಾಸ ಹುಣಶ್ಯಾಳ,ಸೋಹೇಲ್ ಬಾಗವಾನ,ರಫೀಕ ಬೀಳಗಿ,ಫಜೈಲ ಮ್ಯಾಗೇರಿ, ಮಹಾಂತೇಶ ಹೂಗಾರ, ಬಿಬಿಮರಿಯಮ್ ಚೌಧರಿ,ಹೀನಾ ಮಳಗಿ ಸೇರಿದಂತೆ ಅನೇಕರು ಇದ್ದರು. 



ಸುದ್ದಿ ಓದಿ