ರತ್ನಾಕರ ರಾಯ್ಕರಗೆ ‘ಉತ್ತಮ ಅಂಚೆ ಅಣ್ಣ’ ಪ್ರಶಸ್ತಿ
ಲೋಕದರ್ಶನ ವರದಿ
ಮುಂಡಗೋಡ:ವಿಶ್ವ ಅಂಚೆ ಸಪ್ತಾಹದ ಅಂಗವಾಗಿ ಶಿರಸಿ ಉತ್ತರ ವಿಭಾಗದ ಉತ್ತಮ ಅಂಚೆ ಅಣ್ಣ ಎಂದು ಪಟ್ಟಣದ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ರತ್ನಾಕರ ರಾಯ್ಕರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಅಂಚೆ ಅಧೀಕ್ಷಕ ಹೂವಪ್ಪ ಜಿ., ಉಪ ಅಂಚೆ ಅಧೀಕ್ಷಕ ವೆಂಕಟೇಶ ಬಾದಾಮಿ, ಪೋಸ್ಟ್ ಮಾಸ್ಟರ್ ಎಸ್.ಎಸ್.ಭಟ್ಟ, ಪೋಸ್ಟ್ ಮ್ಯಾನ್ ರಮೇಶ ಲಮಾಣಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.