'ಬಡ ಜನರ ಹಿತದೃಷ್ಠಿಯಿಂದ ಸರ್ಕಾರ ಸಾಕಷ್ಟು ಯೋಜನೆ ಜನರಿಗೆ ತಲುಪಿಸಲು ಮುಂದಾಗಿ'
ಲೋಕದರ್ಶನ ವರದಿ
ಕಂಪ್ಲಿ 16: ತಾಲೂಕಿನ ನೆಲ್ಲುಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಶಂಕರಸಿಂಗ್ ಕ್ಯಾಂಪಿನಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆಯ ಸಭೆ ಶನಿವಾರ ನಡೆಯಿತು. ಈ ಸಭೆಯಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾಗಿ ಧನಂಜಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆ ಬಲ ಪಡಿಸಲು ಮುಂದಾಗಿ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿ ಬಡ ಜನರಹಿತದೃಷ್ಠಿಯಿಂದ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದ್ದು, ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಿಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಶಂಕರಸಿಂಗ್ ಕ್ಯಾಂಪ್ ಗ್ರಾಮ ಘಟಕ ಅಧ್ಯಕ್ಷರಾಗಿ ಎನ್ ರಾಮಂಜಿನಿ ಗೌರವ ಅಧ್ಯಕ್ಷರಾಗಿ ಸೂರಿ ನಾರಾಯಣ ಹೆಚ್ ತಿಮ್ಮಪ್ಪ ಉಪಾಧ್ಯಕ್ಷರಾಗಿ ನರಸಿಂಹ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ ಶಿವಶಂಕರ ಖಜಾಂಚಿಯಾಗಿ ಓಬಳೇಶ ಸಂಘಟನಾ ಕಾರ್ಯದರ್ಶಿಯಾಗಿ ರಾಮಾಂಜಿನಿ ರವಿ ಹರೀಶ ಸುಧಕರ್ ಹೆಚ್ ವೆಂಕಟೇಶ ಸದಸ್ಯರಾದ ರಾಜಶೇಖರ್ ನವೀನ್ ನಾರಾಯಣಸ್ವಾಮಿ ಗಣೇಶ ಮಲ್ಲಿಕಾರ್ಜುನ ರಮೇಶ ಅಭಿ ಶಿವನಾರಾಯಣ ಭದ್ರ ಸಂತೋಷ ರಮೇಶ ಈಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ನೀಲಪ್ಪ ಪೇಂಟರ್ ಸೇರಿ ಅನೇಕರಿದ್ದರು.