ಸೌಂದತ್ತಿ

‘ಸನಾತನ ಭವ್ಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕಿದೆ’

‘ಸನಾತನ ಭವ್ಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕಿದೆ’

ಉಗರಗೋಳ 09: ಮಠ-ಮಂದಿರಗಳಲ್ಲಿ ಸಾಧು-ಸಂತರು, ಶರಣರು ಅಂತರಾಳದ ಅನುಭವಗಳನ್ನು ಭಕ್ತ ವೃಂದಕ್ಕೆ ಧಾರೆಯರೆದಾಗ ಮಾತ್ರ ಭಕ್ತರು ದೀಪದ ಬೆಳಕಿನಂತೆ ಪ್ರಜ್ವಲಿಸಿ ನಾಡಿನ ಕತ್ತಲೆಯನ್ನು ಹೊರದೂಡಲು ಸಾಧ್ಯ ಎಂದು ಸವದತ್ತಿಯ ಯುವ ಧುರೀಣ ಅಶ್ವಥ ವೈದ್ಯ ಹೇಳಿದರು. 

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬಸವ ಶರಣ ಚರಿತ್ರೆ ಹಾಗೂ ದ್ವಾರಬಾಗಿಲು ಹಾಗೂ ದ್ವಾರಬಾಗಿಲ ಮೇಲಿನ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ರಥೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಮನುಷ್ಯ ಶರಣರು ಉಪದೇಶಿಸಿದ ಜ್ಞಾನ ಭಂಡಾರದ ಕಣಿಜವನ್ನು ಮಸ್ತಕದಲ್ಲಿ ತುಂಬಿಕೊಂಡು, ಸನಾತನ ಭವ್ಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು. 

“ಬಸವ ಶರಣ ಚರಿತ್ರೆ” ಪ್ರವಚನವನ್ನು ಪುಟ್ಟರಾಜ ಗವಾಯಿಗಳ ಶಿಷ್ಯರಾದ ಮುದಕಯ್ಯ ಶಾಸ್ತ್ರಿಗಳು ಹಿರೇಮಠ ಇವರಿಂದ ಜರುಗಿತು. 

ಉಗರಗೋಳ ನಿರ್ವಾಣೇಶ್ವರಮಠದ ಗುರು ಮಹಾಂತ ಶ್ರೀಗಳು, ಉಗರಗೋಳ ರಾಮಾರೂಢಮಠದ ಬ್ರಹ್ಮಾರೂಢ ಶ್ರೀಗಳು, ಶಿಂದೋಗಿ-ಮುನವಳ್ಳಿ ನಿತ್ಯಾನಂದ ಆಶ್ರಮದ ಮುಕ್ತಾನಂದ ಶ್ರೀಗಳು, ಗ್ರಾಪಂ ಮಾಜಿ ಪ್ರಧಾನ ಎಸ್ ಪಿ ಮೇದಗೋಪ್ಪ, ನಿಂಗನಗೌಡ ಹರಳಕಟ್ಟಿ, ಗಜಾನಂದ ಕಿರದಂಟನವರ, ಅನ್ವರಸಾಬ ಹೂಲಿ, ನಿಂಗಪ್ಪ ಗೊವಪ್ಪನವರ, ಬಸವರಾಜ ರೋಗಿ, ರಾಜನಗೌಡ ಟೋಪಣ್ಣವರ, ಮಲ್ಲಿಕಾರ್ಜುನ ಗೋವಪ್ಪನವರ, ಪಿ ಜಿ ತಿಪರಾಶಿ, ಲಕ್ಷೇಪ್ಪ ಪೂಜೆರ, ಶಿದ್ದನಗೌಡ ಶೇಟ್ಟಿನಗೌಡ್ರ, ಪಿ ವಾಯ್ ಗಡಾದಗೌಡ್ರ, ಬಸನಗೌಡ ಸಂಧಿಮನಿ, ಬಸನಗೌಡ ಟೋಪಣ್ಣವರ,ವಿಶ್ವನಾಥಗೌಡ ಲಿಂಗಋಷಿ, ಎಮ್ ಎ ಮಠಪತಿ, ಈರ​‍್ಪ ಗುಳೇದ, ನಿಂಗಯ್ಯ ಪೂಜೇರ, ವಿಶ್ವನಾಥಗೌಡ ಪೊಲೇಶಿ, ಶಿವರುದ್ರ​‍್ಪ ತಕ್ಕಡಿ ಹಾಗೂ ಗ್ರಾಮದ ಭಕ್ತರು ಇದ್ದರು. 


ಸುದ್ದಿ ಓದಿ