ಬಳ್ಳಾರಿ

'ಪೈಗಂಬರ, ವಾಲ್ಮೀಕಿ ಜಯಂತಿ ಮೆರವಣಿಗೆ ಅವಕಾಶ ಕಲ್ಪಿಸಿ'

'ಪೈಗಂಬರ, ವಾಲ್ಮೀಕಿ ಜಯಂತಿ ಮೆರವಣಿಗೆ ಅವಕಾಶ ಕಲ್ಪಿಸಿ'

ಲೋಕದರ್ಶನ ವರದಿ 

ಗಂಗಾವತಿ 12: ಅ. 19 ಮತ್ತು 20ರಂದು ನಡೆಯಲಿರುವ ಪ್ರವಾದಿ ಮಹ್ಮದ್ ಪೈಗಂಬರ ಜಯಂತಿ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಬಹಿರಂಗ ಮೆರವಣಿಗೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ವಾಲ್ಮೀಕಿನಾಯಕ ಸಮಾಜದ ಮುಖಂಡ ಮತ್ತು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪನಾಯಕ ಒತ್ತಾಯಿಸಿದರು. 


ತಹಶೀಲ್ದಾರ ಯು.ನಾಗರಾಜ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಾಯಕ ಮಾತನಾಡಿದರು. ನಮ್ಮ ಸಹೋದರ ಸಮಾಜ ಮುಸ್ಲಿಂರಿಗೆ ಪೈಗಂಬರ ಜಯಂತಿ ಮೆರವಣಿಗೆ ಮಾಡಲು ಅವಕಾಶ ಕೊಡಬೇಕು. ಕೋವಿಡ್ ನೆಪದಲ್ಲಿ ನಮ್ಮ ಭಾವನೆಗಳನ್ನು ಹತ್ತಿಕ್ಕುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಕೋವಿಡ್ ನಿಯಮ ಪಾಲಿಸಲು ತಾವು ಸಿದ್ದರಿದ್ದೇವೆ. ನಿಯಮಗಳನ್ನು ಸರಳೀಕರಣಗೊಳಿಸಿರಿ ಎಂದು ಒತ್ತಾಯಿಸಿದರು. 

ಅವಕಾಶ ಇಲ್ಲ ಸಭೆಯಲ್ಲಿ ಮಾತನಾಡಿದ ತಹಶೀಲ್ದಾರರು ಸರಕಾರದ ಆದೇಶವನ್ನು ನಾವು ಪಾಲಿಸಬೇಕು. ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ಜಯಂತಿಯನ್ನು ಆಚರಿಸಬೇಕು. ಮೆರವಣಿಗೆಗೆ ಅವಕಾಶ ನೀಡುವದಿಲ್ಲ ಎಂದು ತಿಳಿಸಿದರು. ವಾಲ್ಮೀಕಿ ಜಯಂತಿ ಅ.20 ರಂದು ಇದೆ ಇನ್ನೂ ಸಮಯಾವಕಾಶ ಇದೆ. ಬಹಿರಂಗ ಮೆರವಣಿಗೆ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಅವರ ಆದೇಶ ಪಾಲಿಸುತ್ತೇನೆ ಎಂದು ಹೇಳಿದರು. ಸಭೆ ಗೈರು ಹಾಜರಿಯಾಗಿರುವ ಅಧಿಕಾರಿಗಳಿಗೆ ಷೋಕಾಷ ನೋಟೀಸ್ ನೀಡಲಾಗುವದು ಎಂದು ತಿಳಿಸಿದರು.  


ಡಿವೈಎಸ್‌ಪಿ ರುದ್ರೇಶ ಉಜ್ಜನಿಕೊಪ್ಪ ಮಾತನಾಡಿ ಸರಳವಾಗಿ ಜಯಂತಿ ಆಚರಿಸಬೇಕು. ಮೆರವಣಿಗೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು. ವಾಲ್ಮೀಕಿನಾಯಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ವಡ್ರಟ್ಟಿ ವೀರಭದ್ರ​‍್ಪನಾಯಕ, ಜೋಗದ ನಾರಾಯಣಪ್ಪನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹೊಸಮಲಿ ಮಲ್ಲೇಶಪ್ಪನಾಯಕ ಮಾತನಾಡಿದರು. 


ಸುದ್ದಿ ಓದಿ