ಬಳ್ಳಾರಿ

'ಕನ್ನಡ ರಂಗಭೂಮಿಗೆ ಮೃಡದೇವ ಗವಾಯಿಗಳ ಕೊಡುಗೆ ಅಪಾರ' : ಡಾ.ಮಹೇಶ್ವರ ಮಹಾಸ್ವಾಮಿಗಳು

'ಕನ್ನಡ ರಂಗಭೂಮಿಗೆ ಮೃಡದೇವ ಗವಾಯಿಗಳ ಕೊಡುಗೆ ಅಪಾರ' :  ಡಾ.ಮಹೇಶ್ವರ ಮಹಾಸ್ವಾಮಿಗಳು

ಲೋಕದರ್ಶನ ವರದಿ 

ಕಂಪ್ಲಿ 28: ಮೃಡದೇವ ಗವಾಯಿಗಳು ಪೂರ್ವಕಲಾವಿದರು ಕನ್ನಡ ರಂಗಭೂಮಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ನಂದಿಪುರದ ಡಾ.ಮಹೇಶ್ವರ ಮಹಾಸ್ವಾಮಿಗಳು ಹೇಳಿದರು. 


ಇಲ್ಲಿನ ವೀರಶೈವ ಕಲ್ಯಾಣಮಂಟಪದಲ್ಲಿ ಶುಕ್ರವಾರ ನಂದಿಪುರದ ಗುರುದೊಡ್ಡಬಸವೇಶ್ವರ ಫೌಂಡೇಷನ್ ಟ್ರಸ್ಟ್‌ ಹಮ್ಮಿಕೊಂಡಿದ್ದ, ಮೃಡದೇವ ಗವಾಯಿಗಳ ಜನ್ಮಶತಮಾನೋತ್ಸವ ಸಮಾರಂಭದ ಸಾನ್ನಿಧ್ಯಹಿಸಿ ಮಾತನಾಡಿ, ಮೃಡದೇವಗವಾಯಿಗಳು ಡಾ.ರಾಜ್‌ಕುಮಾರ್ ಜೊತೆಯಲ್ಲಿ ಅಪರೂಪದ ರಂಗಭೂಮಿ ಕಲಾವಿದರು, ಹಾರೋ​‍್ಮನಿಯಂ ವಾದಕರಾಗಿದ್ದರು ಎಂದರು ಗುರುದೊಡ್ಡಬಸವೇಶ್ವರ ಫೌಂಡೇಷನ್ ಟ್ರಸ್ಟ್‌ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಅಧ್ಯಕ್ಷತೆವಹಿಸಿ ಮಾತನಾಡಿ, ಅಳಿವಿನಂಚಿನಲ್ಲಿನ ರಂಗಭೂಮಿ ಚಟುವಟಿಕೆಗಳನ್ನು ಜೀವಂತವಾಗಿಡಲು ಟ್ರಸ್ಟ್‌ ಮೂಲಕ ರಂಗಭೂಮಿ ಪೂರಕ ಚಟುವಟಿಕೆಗಳನ್ನು, ಕಲಾವಿದರಿಗೆ ತರಬೇತಿ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು. ಧೀಮಂತ ಕಲಾವಿದರನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಎಸ್‌.ಜೆ.ಸದಾನಂದಶೇಟ್, ಕೆ.ಎಂ.ರಕ್ಷಾ, ಕೆ.ಎಂ.ದೀಕ್ಷಾ ಇವರಿಂದ ಸಂಗೀತಾ ಕಾರ್ಯಕ್ರಮ ಜರುಗಿತು. ಗಣಿ ಮಾಲಿಕ ಗೊಗ್ಗ ಚನ್ನಬಸವರಾಜ್ ಸಮಾರಂಭಕ್ಕೆ ಚಾಲನೆ ನೀಡಿದರು. ಬೆಣ್ಣೆಹಳ್ಳಿಯ ಪಂಚಾಕ್ಷರ ಶಿವಾಚಾರ್ಯರು, ಪ್ರಮುಖರಾದ ಡಾ.ಮೃತ್ಯುಂಜಯ ರುಮಾಲೆ, ಮುರುಡಯ್ಯಸ್ವಾಮಿ, ಎಸ್‌.ವಿ.ಪಾಟೀಲ್ ಗುಂಡೂರು, ಎಚ್‌.ಎಂ.ಗುರುಬಸವರಾಜ, ಎಸ್‌.ಎಂ.ಸದ್ಯೋಜಾತಯ್ಯಸ್ವಾಮಿ, ಎಸ್‌.ಎಸ್‌.ಎಂ.ಚನ್ನಯ್ಯಸ್ವಾಮಿ, ಎಚ್‌.ಎಂ.ಸಿದ್ಧರಾಮಯ್ಯಸ್ವಾಮಿ, ಗರಡಿ ವೀರಣ್ಣ, ಡಾ.ರಾಧಿಕಾ ಅರಳಿ, ರಾಜೇಶ್ವರಿ ಸುರೇಶ್, ಎ.ಶರಣಪ್ಪ ಅಗಳಕೇರಾ, ಎಂ.ಚನ್ನಯ್ಯಸ್ವಾಮಿ ಇತರರಿದ್ದರು. 


ಸುದ್ದಿ ಓದಿ