ವೀರೇಶ ಬ. ಕುರಿ ಸೋಂಪುರ ಅವರ ಮಕ್ಕಳ ಕವನ ಸಂಕಲನ ‘ಮಿಠಾಯಿ ಮಾಮ’
ಮಕ್ಕಳ ಸಾಹಿತ್ಯಕ್ಕೆ ತನ್ನದೇ ಆದ ವಿಶಿಷ್ಟತೆ ಇದೆ. ಅದು ಎಲ್ಲ ಸಾಹಿತ್ಯದಂಥಲ್ಲ. ಮಕ್ಕಳೊಂದಿಗಿನ ಒಡನಾಟ, ನಾವೂ ಮಕ್ಕಳೇ ಆಗುವ ಗುಣ, ಅವರೊಡನೆ ಅವರದೇ ಭಾಷೆ ಭಾವದಲ್ಲಿ ಸಂವಹನವಾಗುವಂತೆ ಬರೆಯುವ ಗುಣ ಇವು ಮಕ್ಕಳ ಸಾಹಿತಿಯಾದವನಿಗೆ ಇರಬೇಕಾದ ಆದ್ಯ ಅರ್ಹತೆಗಳು.
ಒಂದು ಕುತೂಹಲದ ಆದರೆ ಅಷ್ಟೇ ಸತ್ಯವೆನ್ನುವ ಮಾತೆಂದರೆ ನಮ್ಮ ಬಹುತೇಕ ಮಕ್ಕಳ ಸಾಹಿತಿಗಳು ಶಿಕ್ಷಕರಾಗಿರುವದು. ಅದಕ್ಕೆ ಕಾರಣ ಅವರು ಮಕ್ಕಳೊಂದಿಗೆ ಅತಿ ಹೆಚ್ಚು ಸಮಯವನ್ನು ಕಳೆಯುವದು ಕಾರಣವೆನಿಸುತ್ತದೆ. ಉಳವರು ಬರೆಒ-ಲ ಎಂದು ಇದರ ಅರ್ಥವಒ-ಲ, ಆದರೆ ಮಕ್ಕಳ ಸಾಹಿತ್ಯವನ್ನು ಬರೆಯುವವರು ಮಗು ಮನಸ್ಸಿನವರಾಗಿರಬೇಕಾದುದು ಅಗತ್ಯ ಎನ್ನುವದು ಮಾತ್ರ ಸತ್ಯ.
ವೀರೇಶ ಬ. ಕುರಿಯವರು ಮೂಲತ: ಕೊಪ್ಪಳ ಜಿಲ್ಲಾ ಕುಕನೂರು ತಾಲೂಕಿನ ಸೋಂಪುರ ದವರು. ಈಗ ಸದ್ಯಕ್ಕೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚುಟುಕು, ಕವಿತೆ, ತತ್ವಪದಗಳು, ಆಧುನಿಕ ವಚನಗಳನ್ನು ಬರೆದಿದ್ದಾರೆ. ಈಚೆಗೆ ಅವರು 500 ರಷ್ಟಿರುವ ತನಗ ಸಂಕಲನವೂ ಮುದ್ರಣಗೊಳ್ಳುತ್ತಿದೆ. ಶ್ರೀಯುತರ ಪ್ರಕಟಿಸಿದ ‘ಮಿಠಾಯಿ ಮಾಮ’ ಗಾನವಿ ಪ್ರಕಾಶನದಿಂದ ಪ್ರಕಟವಾಗಿದೆ. ಇದು ಹೆಸರೇ ಹೇಳುವಂತೆ ಮಿಠಾಯಿಯಂತೆ ಮಕ್ಕಳು ಚಪ್ಪರಿಸಬಹುದಾದ ಕವನ ಸಂಕಲನ .
ಇಲ್ಲಿ ಪ್ರಧಾನವಾಗಿ ಎರಡು ಬಗೆಯ ಕವಿತೆಗಳಿವೆ.
1) ಮಗುವೆ ತನ್ನ ಭಾವನೆ ತಾನೇ ಹೇಳಿಕೊಂಡಂತಿರುವ ಕವಿತೆಗಳು. ಈ ಬಗೆಯ ಕವಿತೆಗಳಲ್ಲಿ ಮಗು ತಾನು ನೋಡಿದ, ತನಗೆ ಚಂದವೆನಿಸದ ಆಕರ್ಷಕವೆನಿಸಿದ ಸಂಗತಿಗಳನ್ನು ತನ್ನ ಭಾಷೆಯಲ್ಲಿ ಬಣ್ಣಿಸುವ ಇಂತಹ ರಚನೆಗಳು ಮಕ್ಕಳ ಮನದ ಅಭಿವ್ಯಕ್ತಿಯಾಗಿರುತ್ತವೆ. ಮೊದಲ ಪ್ರಕಾರದ ಕವಿತೆಗಳಲ್ಲಿ ಮೀಠಾಯಿ ಮಾಮ, ನಾನೂ ಗಾಂಧೀ ಆಗುವೆ, ದಸರಾ ರಜೆ, ಚುಕು ಬುಕು ರೈಲು, ಬಾರೋ ಗೆಳೆಯ ಮೊದಲಾದವನ್ನು ಹೆಸರಿಸಬಹುದು. ಈ ಬಗೆಯ ಕವಿತೆಗಳೇ ಸಂಕಲನದಲ್ಲಿ ಅಧಿಕವಾಗಿರುವ ಸಹಜವಾಗಿಯೇ ಇದೆ.
2) ಮಗುವಿಗೆ ತಿಳಿ ಹೇಳುವ ಮಗುವಿನ ಮನಸ್ಸಿಗೆ ಮುಟ್ಟುವ ಕವಿತೆಗಳು-ಇಲಿ ಮಗುವಿಗೆ ಒಂದು ವಿಧದ ಸಂಗತಿಯನ್ನು ತಿಳಿಸಿ ಹೇಳುವ ಹಿರಿಯರ ಮತಿನಂತೆ ಈ ಕವಿತೆ ಇರುತ್ತವೆ. ಈ ಉಗೆಯ ಕವಿತೆಗಳಿಗೆ ರ್ಲೆ ತಿಮ್ಮ, ಶ್ಯಾಲೆ ಕಲಿತು ಶ್ಯಾಣ್ಯಾ ಆಗು, ಕನ್ನಡದ ಕವಿಗಳ ಹಾಡು ಮೊದಲಾದವನ್ನು ನೋಡಬಹುದು.
ಮಕ್ಕಳ ಕಾವ್ಯದ ವಸ್ತು ತುಂಬ ಸರಳವಾದುದು ಮತ್ತು ಸಹಜವಾದುದು ಆಗಿರುತ್ತದೆ. ಮಕ್ಕಳು ತಮ್ಮ ಮನಸ್ಸು ಆಕರ್ಷಿಸಿಸಿದ ಸಂಗತಿಯನ್ನು ಕವಿತೆಯಾಗಿಸುತ್ತಾರೆ. ಮೊದಲ ಕವಿತೆ ಮಿಠಾಯಿ ಮಾಮ ಕವಿತೆಯಲ್ಲಿಯೆ ತನಗೆ ಸಿಹಿ ಹಂಚುವ ಮಿಠಾಯಿ ಮಾಮನನ್ನು ಮಗು ಕೇವಲ ಬರ್ಣಣಿಸುವುದೇ ಅಲ್ಲದೇ ಅವನಿಗೆ ಒಳಿತನ್ನೂ ಹಾರೈಸುತ್ತದೆ.
ಮಿಠಾಯಿ ಮಾಮ ಬಲುಒಳೆಯವನು
ಪ್ರೇಮದಿ ಮಿಠಾಯಿ ನೀಡುವರು
ಹರಸಲಿ ಅವರಿಗೆ ಅಭಿನವ ದೇವರು
ಎನ್ನುತ ಎಲ್ಲರೂ ಹಾಡುವರು
ತನಗೆ ಮಿಠಾಯಿ ಕೊಡುವ ಮಾಮನನ್ನು ಬಣ್ಣಿಸುವ ಮಗು ತಃನ್ನನ್ನು ‘ಶಾಲೆ ಬಿಡಿಸಬೇಡಿ’ ಎಂದು ತಾಯಿ ತಂದೆಯರನ್ನು ಕೇಳುವಾಗ ಕರುಳು ಚುರ್ ಎನ್ನುತ್ತದೆ.
ಗಾಂಧಿ ತಾತನನ್ನು ಮಕ್ಕಳಿಗೆ ತುಂಬ ಖುಷಿ. ಬಹುಶ: ಮಕ್ಕಳ ಕಾವ್ಯದಲ್ಲಿ ಗಾಂಧೀಜಿಯವರ ಮೇಲೆ ನೂರಾರು ಕವಿತೆಗಳು ಬಂದಿವೆ. ಇಲ್ಲಿ ಒಂದು ಕವಿತೆಯಲ್ಲಿ ಗಾಂಧಿಯವರ ಡ್ರೆಸ್ಸು, ಚಾಳಿಸು ಮೊದಲಾದವುಗಳನ್ನು ನೋಡಿದ ಮಗು
ತಾತನು ಹಾಕಿದ ಆ ಚಾಳೀಸು
ಚೆಲುವನು ಸೂಸಿ ನಕ್ಕೈತಿ
ಅಜ್ಜನು ಧರಿಸಿದ ಖಾದಿ ದಿರಿಸು
ನನ್ನಯ ಮನವನು ಹೊಕ್ಕೈತಿ
ಎಂದು ಮಾತ್ರ ಹಾಡದ ಮಗು ಢತಾನು ಗಾಂಧಿ ಪಟದಲ್ಲಿ ನೋಡಿದ, ಮೆಚ್ಚಿಕೆಯಾದ ಗುಣಗಳನ್ನು ಬಣ್ಣಿಸುತ್ತದೆ. ಮೊದಲಿನ ಮಕ್ಕಳ ಕಾವ್ಯ ಬಂಡಿ, ರಥ ಇಂಥವುಗಳ ಯಾಣವನ್ನು ಬಣ್ಣಿಸಿದ್ದರೆ ಈ ಆಧುನಿಕ ಕಾಲದ ಮಗು ರೈಲು ಮೊದಲಾದವುಗಳ ಯಾಣವನ್ನು ಬಣ್ಣಿಸುವ ಜೊತೆಗೆ ದಂಟಿನ ಬಂಡಿಯ ಕುರಿತು ಬರೆದುದು ನಿಜಕ್ಕೂ ಕವಿ ತನ್ನ ಬಾಲ್ಯವನ್ನು ಮರೆತಿರದಿರುವದಕ್ಕೆ ಸಾಕ್ಷಿಯಾಗಿದೆ. ಬೇಸರಗೊಂಡ ಆಕಳ ಕರುವನ್ನು ಮಗುವೊಂದು ತನ್ನದೇ ರೀತಿಯಲ್ಲಿ ಸಂತೈಸುತ್ತದೆ. ಜೊತೆಗೆ ಆಧುನಿಕ ಕಾಲದ ಯಂತ್ರಗಳ ಕುರಿತೂ ಇಲ್ಲಿ ಮಗು ಮಾತನಾಢಡುತ್ತದೆ. ತನಗೆ ಖುಷಿ ಕೊಡುವ ‘ದಸರಾ ರಜೆ’ ಮೊದಲಾದವುಗಳ ಹಾಡು ಹಾಡುತ್ತದೆ. ಮಗುವಿಗೆ ಊರಲ್ಲಿ ಅಲ್ಲಲ್ಲಿ ತಿರುಗುವುದೆಂದರೆ ತುಂಬ ಖುಷಿಯ ಸಂಗತಿ. ‘ಬಾರೋ ಗೆಳೆಯ’ ಎಂಬ ಕವಿತೆಯಲ್ಲಿ ಮಗು ತನ್ನ ಇನ್ನೊಬ್ಬ ಗೆಳೆಯನಿಗೆ
ದೂರದರ್ಶನದ ಸಂಗವನು ತೊರೆದು
ಜಂಗಮವಾಣಿಯ ಹಂಗನು ಹರಿದು
ಊರಿನ ಬೀದಿಗಳನು ಸುತ್ತೋಣ ಬಾ
ಗಿಡಮರಗಳನು ನಾವು ಹತ್ತೋಣ ಬಾ
ಎಂದು ಕರೆನೀಡುತ್ತದೆ. ಮೊಬ್ಯಲ್, ಟಿವಿ ಇವು ಮಕ್ಕಳನ್ನು ಕೋಣೆಯಲ್ಲಿ ಕೊಳೆಸುತ್ತವೆ. ಇವನ್ನು ಬಿಟ್ಟು ಮಗು ಸಹಜವಾಗಿ ಆಟ ಆಡಿಕೊಂಡಿರಲಿ ಎಂಬುದು ಕವಿತೆಯ ಆಶಯವಾಗಿದೆ. ಆದರೆ ಕೇಳು ಕಂದ ಎಂಬಂತಹ ಕವಿತೆಗಳು ತಮ್ಮ ತಿಳಿ ಹೇಳುವ ಗುಣದಿಂದ ಒಮ್ಮೊಮ್ಮೆ ಮಗುವಿಗೆ ಬದುಕಿನ ಸಾರವನ್ನು ಬೋದಿಸುತ್ತವೆ. ಎಲ್ಲೋ ಒಮ್ಮೆ ಮಕ್ಕಳ ಮಾನಸಿಕ ಹಂತಕ್ಕೆ ಕೆಲವು ಸಂಗತಿಗಳು ಭಾರವೇನೋ ಎಂಬ ಸಂಶಯ ಬಂದರೂ ಇಂದಿನ ಕಾಲದ ಮಕ್ಕಳು ಎಲ್ಲವನ್ನು ಅರ್ಥಮಾಡಿಕೊಳ್ಳುವ ಬುದ್ದಿ ಮತ್ತೆಯವರಾಗಿರುವದು ನೆನಪಾಗಿ ಇರಲಿ ಬಿಡು ಎನಿಸುತ್ತದೆ. ಚಿನ್ನರ ಬಿನ್ನಹ ಕವಿತೆಯಲ್ಲಿ ಮಗುವಿನ ವಿನಂತಿ ಕೇಳಿದ ಚಂದ್ರ ‘ಕನ್ನಡ ನಾಡು ಬಿಟ್ಟು ನಾ ಹೋಗಲಾರೆ’ ಎಂದು ಮಾತು ಕೊಡುವದಂತೂ ತೀರಾ ವಿಶೇಷವಾಗಿದೆ. ಬಾನಿನೂರಿನ ಚಂದಿರನಿಗೆ ಮಗು
ಮೈಸೂರು ಅರಮನೆಯಲಿ ಕೂರಿಸಿ
ಶ್ರೀಗಂಧ ಘಮವನು ನಿನಗೆ ಪೂಸಿ
ಅಣ್ಣಾವ್ರ ಸಿನೆಮಾ ತೋರಿಸಿ ನಿನಗೆ
ಕರೆದೊಯ್ಯುವೆನು ಕನ್ನಂಬಾಡಿಗೆ
ಎಂದಾಗ ಚಂದ್ರ ಅವನ ಮಾತಿಗೆ ಮನ ಸೋತು ಬಂದೇ ಬಿಡುತ್ತಾನೆ. ಮಾತ್ರವಲ್ಲ,
ಬಂದೆನು ಬಂದೆನು, ಓ ಮುದ್ದು ಕಂದ
ಸವಿಯಲು ನಾನು ನಿನ್ನನುಬಂದ
ಕನ್ನಡ ನಾಡಲಿ ಉಳಿವೆನು ಇನ್ನು
ಈ ನಾಡಿಗೆ ಎಂದಿಗೂ ಮಾಡೆನು ಬೆನ್ನು
ಎಂದು ಮಾತೂ ಕೊಡುತ್ತಾನೆ.
ತಾಯಿ ಮಗುವಿಗೆ ಆಟ ಆಡಿಸುತ್ತಲೇ ಕಾಲಗಳ ಬಗೆಗ ಹೇಳುವ ವಿಶಿಷ್ಟ ಕವಿತೆ ‘ಕಾಲಗಳ ಕಥೆ’ ಕವಿ ಕೊನೆಯಲ್ಲಿ ತರುವ ಸಂದೇಶ ಗಮನಾರ್ಹ. ತಾಯಿ ಕವಿತೆಯ ಕೊನೆಗೆ
ಓ ಮಗು ಕಾಲುಗಳಿಹವು ಮೂರು
ನೋವು ನಲಿವುಗಳಿಹವು ನೂರು
ಅಂಜದೇ ಅಳುಕದೆ ಹೊಂದಿಕೊಂಡು
ಬಾಳಬೇಕು ನೀ ಸಹನೆ ತಂದುಕೊಂಡು
ಎಂದು ತಿಳಿ ಹೇಳುತ್ತಾಳೆ. ಹೀಗೆ ಆಟ ಆಡಿಸುತ್ತಲೇ ಮಗುವಿಗೊಂದು ತಿಳಿವು ನೀಡುವ ಮಕ್ಕಳ ಕಾವ್ಯದ ಪ್ರಧಾನ ಗುಣವೂ ಆಗಿರುವದನ್ನು ಈ ಕವಿ ಯಶಸ್ವಿಯಾಗಿ ಅರಿತಿದ್ದಾರೆ. ‘ದೋಣಿಯ ಆಟ’ ಕವಿತೆ ಅಣ್ಣ ತಂಗಿಯರ ಆಟದ ಸಂತಸ ಹಂಚಿದೆ.
ಸಂಕಲನದ ಪ್ರತಿ ಕವಿತೆಗೂ ಕವಿ ಬರೆಸಿರುವ ಚಿತ್ರಗಳು ಬಹಳ ಸೌಂದರ್ಯ ವನ್ನು ಸಂಕಲನಕ್ಕೆ ನೀಡಿವೆ. ಆಕರ್ಷಕ ಮುದ್ರಣವೂ ಈ ಸಂಕಲನದ ವೈಶಿಷ್ಟ್ಯವೇ. ಹಿರಿಯ ಮಕ್ಕಳ ಸಾಹಿತಿ ಶ್ರೀಮತಿ ಅರುಣಾ ನರೇಂದ್ರ ಅವರು ಹೇಳುವಂತೆ “ಮಕ್ಕಳಿಗೆ ಮುದ ನೀಡುವ ಹತ್ತು ಹಲವು ವಿಷಯ ವಸ್ತುಗಳನ್ನು ಇಟ್ಟುಕೊಂಡು ಸರಳವಾದ ಮತ್ತು ಪ್ರಾಸಬದ್ಧವಾದ ಕವಿತೆಗಳ ಗುಚ್ಛವನ್ನು ಮಕ್ಕಳ ಕೈಗಿತ್ತಿದ್ದಾರೆ.”
- ಡಾ.ವೈ.ಎಂ.ಯಾಕೊಳ್ಳಿ, ಸವದತ್ತಿ
ಮೊ. 9731970857
- * * * -