'ಲವ್ ಮಾಕ್ಟೇಲ್ 2' ಸಂಚಿತ್ ಹೆಗ್ಡೆ ಗಾಯನ
ಬೆಂಗಳೂರು, ಸೆ 04 ಡಾರ್ಲಿಂಗ್ ಕೃಷ್ಣ ಅಭಿನಯ ಹಾಗೂ ನಿರ್ದೇಶನವಿರುವ ಲವ್ ಮಾಕ್ಟೇಲ್ 2 ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಿದೆ.
ಲಾಕ್ ಡೌನ್ ಮುಗಿದ ಬಳಿಕ ಕ್ಲೈಮ್ಯಾಕ್ಸ್ ಶೂಟಿಂಗ್ ನೊಂದಿಗೆ ಚಿತ್ರೀಕರಣ ಮುಗಿಸಿದ್ದು, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರುವುದಾಗಿ ಡಾರ್ಲಿಂಗ್ ಕೃಷ್ಣ ಹೆಳಿದ್ದಾರೆ.
ಇದೀಗ ಮೂರನೇ ಹಾಡಿನ ಸಂಯೋಜನೆ ನಡೆದಿದ್ದು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು. ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ ಈ ಹಾಡನ್ನು ಸಂಚಿತ್ ಹೆಗ್ಡೆ ಹಾಡಿರುವುದಾಗಿ ಮಾಹಿತಿ ನೀಡಿದ್ದಾರೆ.