ನಾಗರಾಳದಲ್ಲಿ ‘ಕ್ಷೀರ ರಕ್ಷೆ’ ರಕ್ಷಾಬಂಧನ ಕಾರ್ಯಕ್ರಮ
ನಾಗರಾಳ 28 : ಬಿ.ಎಲ್.ಡಿ.ಇ., ಕೃಷಿಕಲ್ಪ ಹಾಗೂ ಅಕ್ಷಯಕಲ್ಪ ಸಂಸ್ಥೆಗಳ ವತಿಯಿಂದ ನಾಗರಾಳ ಗ್ರಾಮದಲ್ಲಿ ‘ಕ್ಷೀರ ರಕ್ಷೆ’ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು. ಕ್ಷೀರ ಪೈಲಟ್ ಯೋಜನೆಯಡಿ ಹೈನುಗಾರಿಕೆ ತರಬೇತಿ ಪಡೆದ ಫಲಾನುಭವಿ ರೈತರು ಭಾಗವಹಿಸಿದ್ದರು. ಹೈನುಗಾರಿಕೆಯಲ್ಲಿ ರೈತರಿಗೆ ತರಬೇತಿ ಹಾಗೂ ಮಾರ್ಗದರ್ಶನದ ಮೂಲಕ ರಕ್ಷಣೆ ಮತ್ತು ಬೆಂಬಲ ನೀಡುವ ಸಂದೇಶ ಸಾರಲಾಯಿತು. ಕಾರ್ಯಕ್ರಮದಲ್ಲಿ ಸಾಹೇಬಗೌಡ ಪಾಟೀಲ, ಜಾಯನಗೌಡ ರೇವತಗಾವ, ಶಾನೂದ ಸಾರವಾಡ ಸೇರಿದಂತೆ ಗ್ರಾಮ ಮುಖಂಡರು ಹಾಗೂ ಕೃಷಿಕಲ್ಪ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು. ತರಬೇತಿಯಿಂದ ಕಡಿಮೆ ನಿರ್ವಹಣೆಯಲ್ಲಿ ಉತ್ತಮ ಹಾಲಿನ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂದು ಫಲಾನುಭವಿ ರೈತ ಜಾಯನಗೌಡ ರೇವತಗಾವ ತಿಳಿಸಿದರು.