‘ಪಾರಂಪರಿಕ ವಸ್ತುಗಳನ್ನು ನೀಡುತ್ತಿರುವುದು ಸಂತೋಷವಾಗಿದೆ’
ಶಿಗ್ಗಾವಿ 22: ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಶಿಕ್ಷಣದ ಜೊತೆಗೆ ಪಾರಂಪರಿಕ ಜ್ಞಾನವನ್ನು ನೀಡುವ ಮತ್ತು ನಮ್ಮ ಪರಂಪರೆ ಉಳಿಸುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಮ್. ಭಾಸ್ಕರ್ ಅವರು ಹೇಳಿದರು ಬುಧವಾರ ವಿಶ್ವವಿದ್ಯಾಲಕ್ಕೆ ಸ್ಥಳೀಯ ಪ್ರಗತಿಪರ ರೈತರಾದ ಈಶ್ವರಗೌಡ ಕರೀಗೌಡ್ರ ಅವರು ಪಾರಂಪರಿಕ ಕೃಷಿ ಸಾಮಗ್ರಿಗಳನ್ನು ವಿಶ್ವವಿದ್ಯಾಲಯದ ವಸ್ತು ಸಂಗ್ರಹಾಲಯಕ್ಕೆ ನೀಡಿದ್ದನ್ನು ಸ್ವೀಕರಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಇರುವ ಎಲ್ಲ ವಿಶ್ವವಿದ್ಯಾಲಯಗಳಿಗಿಂತ ಕರ್ನಾಟಕ ಜಾನಪದ ವಿವಿಯು ಭಿನ್ಯವಾಗಿದ್ದು ಇದರ ಕಾರ್ಯವ್ಯಾಪ್ತಿ ವಿಶ್ವಮಟ್ಟದ್ದಾಗಿದೆ ನಮ್ಮ ವಿಶ್ವವಿದ್ಯಾಲಯದಲ್ಲಿ ಗ್ರಾಮ ಕರ್ನಾಟಕ ವಸ್ತು ಸಂಗ್ರಹಾಲಯವಿದ್ದು ಅಲ್ಲಿ ಕರ್ನಾಟಕದಲ್ಲಿ ಸಂಗ್ರಹಿಸಿದ ವಿವಿಧ ಪಾರಂಪರಿಕ ವಸ್ತುಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ ಈ ವಸ್ತುಗಳೆಲ್ಲ ಮುಂದಿನ ಪೀಳಿಗೆಗೆ ಪಳೆಯುಳಿಕೆಗಳಾಗಿವೆ ಎಂದರು.
ಪ್ರಗತಿಪರ ರೈತರಾದ ಈಶ್ವರಗೌಡ ಕರೀಗೌಡ್ರ ಪಾರಂಪರಿಕಕ್ರಷಿ ಸಾಮಗ್ರಿಗಳನ್ನು ನೀಡಿದ ಅವರು ಮಾತನಾಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ನಮ್ಮ ತಾಲೂಕಿನಲ್ಲಿ ಇರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಕುಲಪತಿಗಳಾದ ಪ್ರೊ.ಟಿ.ಎಮ್ ಭಾಸ್ಕರ್ ಅವರು ಬಂದ ನಂತರ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ವಿವಿಧ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ ಹಾಗಾಗಿ ಅವರಎಲ್ಲ ಕೆಲಸಗಳಿಗೆ ಸ್ಥಳೀಯರ ಸಹಕಾರ ಅಗತ್ಯವಾಗಿ ಇರುತ್ತದೆ ಮತ್ತು ನಮ್ಮ ಮನೆಯಲ್ಲಿ ಇದ್ದಂತಹ ಪಾರಂಪರಿಕ ಕೃಷಿ ಸಾಮಗ್ರಿಗಳನ್ನು ವಿಶ್ವವಿದ್ಯಾಲಯದ ವಸ್ತು ಸಂಗ್ರಹಾಲಯಕ್ಕೆ ನೀಡಿರುವುದು ಸಂತೋಷವಿದೆ ಹಾಗೆಯೇ ಸ್ಥಳೀಯರೆಲ್ಲರು ತಮ್ಮ ಮನೆಯಲ್ಲಿರುವ ಪಾರಂಪರಿಕ ಸಾಮಗ್ರಿಗಳನ್ನು ವಿಶ್ವವಿದ್ಯಾಲಯಕ್ಕೆ ನೀಡಬೇಕೆಂದು ವಿನಂತಿಸಿಕೊಂಡರು.