ಲೇಖನಗಳು

ಕೃಷಿ ಪೂರಕ ಲಾಭದಾಯಕ ಉದ್ಯೋಗವಾಗಿ 'ಹಸಿರು ಮನೆ ಸಸ್ಯೋದ್ಯಾನ'

ಕೃಷಿ ಪೂರಕ ಲಾಭದಾಯಕ ಉದ್ಯೋಗವಾಗಿ  'ಹಸಿರು ಮನೆ ಸಸ್ಯೋದ್ಯಾನ'


ವೈಜ್ಞಾನಿಕ ಕೃಷಿ ಹಾಗೂ ತೋಟಗಾರಿಕೆಯ ಭಾಗವಾಗಿ ಹಸಿರು ಮನೆ ತಂತ್ರಜ್ಞಾನ ಜನ್ಮ ತಾಳಿದೆ. ವಿದೇಶಿ ಕೃಯಲ್ಲಿ ಬಳಕೆಯಲ್ಲಿದ್ದ ಈ ತಂತ್ರಜ್ಞಾನ ಜಿಲ್ಲೆಯ ಕೃ ಭೂಮಿಯಲ್ಲಿ ಬಳಕೆಗೊಳ್ಳುತಿದೆೆ. ವಿಶೇಷವಾಗಿ ಹೂವು, ತರಕಾರಿ ಕೃಯಲ್ಲಿ ಹಸಿರು ಮನೆಯ ಸಸಿಯ ಬಳಕೆ ಹೆಚ್ಚಾಗುತ್ತಿದೆ.  

ಸಾಂಪ್ರದಾುಕವಾಗಿ ಬೀಜ ಬಿತ್ತನೆ ಹಾಗೂ ಮಡಿ ಮಾಡಿ ಮೆಣಸು, ಬದನೆ, ಟಮೋಟೊದಂತಹ ಹಲವು ತರಕಾರಿ ಬೆಳೆಗೆ ಮುಂದಾಗಿ ನೀರಿಕ್ಷಿತ ಲಾಭ ಗಳಿಸದ ರೈತನಿಗೆ ಹಸಿರು ಮನೆಯ ಸಸಿಗಳು ಕೈ "ಡಿದಿವೆ. ಕೆವಲ ರೈತ ಮಾತ್ರ ಅಲ್ಲದೆ ಕೃ ಪೂರಕ ಉಧ್ಯಮವಾಗಿ ನೆರಳು ಪರದೆ ಸಸಿ ಬೆಳೆಸುವ ಆಸಕ್ತರಿಗೆ ಲಾಭ ತರುವ ಕ್ಷೇತ್ರವಾಗಿದೆ. ಜಿಲ್ಲೆಯ ಹಲವೆಡೆ ಹಸಿರು ಮನೆಗಳು ಬಾಗಿಲು ತೆರೆದು ಚಟುವಟಿಕೆ ಆರಂಭಿಸಿದ್ದು ಕೃ, ತೋಟಗಾರಿಕೆ ಕ್ಷೇತ್ರದ ಹೊಸ ಸಾದ್ಯತೆಗಳಿಗೆ ಅವಕಾಶಗಳು ತೆರೆದುಕೊಂಡಂತಾಗಿವೆ. 

ಹಸಿರು ಮನೆ ಕೃ, ತೋಟಗಾರಿಕೆ 'ಸಸಿಗಳ ಬೆಳೆಸಲು' ಮಾಡಿಕೊಂಡ ವ್ಯವಸ್ಥೆಯಾಗಿದೆ. ಬಿತ್ತನೆ ಬೆಳೆ ಪದ್ಧತಿಗಿಂತ ನಾಟಿ ಪದ್ಧತಿ ಹೆಚ್ಚು ಇಳುವರಿ ನೀಡುವ ಕೃ ಪದ್ಧತಿಯಾಗಿದೆ. ಈ ಭಾಗವಾಗಿ ಸಾಂಪ್ರದಾಯಕವಾಗಿ ನಮ್ಮಲ್ಲಿ ಮಡಿಮಾಡಿ ಬೀಜ ಚೆಲ್ಲಿ ಸಸಿ ಬೆಳಸಿ ನಂತರ ಹೊಲದಲ್ಲಿ ನಾಟಿ ಮಾಡುವ ಪದ್ಧತಿ ರೂಢಿಗತ ಇದಕ್ಕೆ ಆಧುನಿಕ ಸ್ಪರ್ಶದಿಂದ ಹಸಿರು ಮನೆ ಪದ್ಧತಿ ಜಾರಿಯಲ್ಲಿದೆ. ಅತ್ಯಂತ ವೈಜ್ಞಾನಿಕವಾಗಿ ರೋಗರ"ತ ಸಮೃದ್ಧವಾದ ಸಸಿಗಳನ್ನು ಬೆಳೆಸುವ ಈ ಪದ್ಧತಿಯೂ ಹೆಚ್ಚು ಜನಪ್ರಿಯವಾಗುತ್ತಿದೆ.  

ಸಿಮೆಂಟ್ ಅಥವಾ ಮರದ ಕಂಬಗಳನ್ನು ಬಳಸಿ ನೈಲಾನ್ ಹೊದಿಕೆಯಲ್ಲಿ ಮನೆಯ ಆಕೃತಿಯಲ್ಲಿ ಟೆಂಟ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ನೆರಳಿನ ಮನೆಯೊಳಗೆ ಪ್ಲಾಸ್ಟಿಕ್ ಟ್ರೈ ಹಾಗೂ ಗುಣಮಟ್ಟದ ಮಣ್ಣು, ತೆಂಗಿನ ನಾರನ್ನು ಹದಗೊಳಿಸಿ ತೆಗೆಯಲಾದ ಗೊಬ್ಬರ(ಕೋಕೋ ಪಿಟ್) ಹಾಕಿ ನಂತರ ಗುಣಮಟ್ಟದ ಬೀಜಗಳನ್ನು ಹಾಕಲಾಗುತ್ತದೆ. ಹದವಾಗಿ ಸ್ಪಿಂಕ್ಲರ್‌ನಿಂದ ನೀರು ಹಾುಸಿ ಇಪ್ಪತ್ತರಿಂದ ಇಪ್ಪತ್ತೇಂಟು ದಿನಗಳ ಕಾಲ ಸಸಿಗಳನ್ನು ಬೆಳಸಲಾಗುತ್ತಿದೆ. ಹೆಚ್ಚಾಗಿ ವಿವಿಧ ಜಾತಿಯ ಹೂವು, ತರಕಾರಿಗಳ ಸಸಿಗಳನ್ನು ಕಾಲಮಾನ ಹಾಗೂ ಋತುಮಾನಕ್ಕೆ ಅನುಸಾರವಾಗಿ ರೈತರ ಬೇಡಿಕೆಗೆ ಅನುಸಾರವಾಗಿ ಬೆಳಸಲಾಗುತ್ತದೆ. ಕೆಲವೊಮ್ಮೆ ರೈತರೇ ತಮಗೆ ಬೇಕಾದ ಬೀಜ ನೀಡಿ ಬಾಡಿಗೆ ಆಧಾರದ ಮೇಲೆ ಸಸಿ ಬೆಳಿಸಿಕೊಳ್ಳುವ ಪದ್ಧತಿಯೂ ಇದೆ.  

ನರ್ಸರಿಯಲ್ಲಿ ಟೊಮೋಟೊ, ಮೆಣಸಿನಕಾು, ಬದನೆಕಾು, ಕ್ಯಾಬೆಜ್ ಸಸಿಗಳನ್ನು ಬೆಳಸಲಾಗುತ್ತಿದೆ. ಅತ್ಯಂತ ಜನಪ್ರಿಯ ಹೆಚ್ಚು ಇಳುವರಿ, ಬಾಳಿಕೆ ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ರೋಗ ರ"ತ ತರಕಾರಿ ತಳಿಗಳ ಸಸಿಗಳಿಗೆ ಆದ್ಯತೆ ನೀಡಲಾಗುತ್ತದೆ. ಬೀಜ ಉತ್ಪಾದನಾ ಕಂಪನಿಗಳು ರೈತರ ಬೇಡಿಕೆಗೆ ಅನುಸಾರವಾಗಿ ಸಸಿ ಮಾಡಲು ಆಯ್ಕೆ ಮಾಡಿ ಖರೀದಿಸಲಾಗುತ್ತದೆ. ಈ ಸಸಿಗಳನ್ನು ಹಸಿರು ಮನೆಯಲ್ಲಿ ಬೆಳಸಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ರೈತರಿಗೆ ಒಂದು ಟ್ರೆಗೆ 45 ರಿಂದ 70 ರೂಪಾುಗೆ ಕೊಡುತ್ತಾರೆ. ಮೆಣಸಿನಕಾು ಒಂದು ಟ್ರೆಗೆ ರೂ 70, ಟೊಮೋಟೊ ರೂ 50, ಕ್ಯಾಬಿಜ್ ರೂ 45 ಗೆ ಮಾರಾಟ ಮಾಡಲಾಗುತ್ತದೆ. ಒಂದು ಟ್ರೈನಲ್ಲಿ 90 ಸಸಿಗಳು ಇರುತ್ತವೆ.  

ಮೆಣಸಿನಕಾು ಬೆಳೆಯಲು ಒಂದು ಎಕರೆಗೆ ಸುಮಾರು 10 ಪ್ಯಾಕೆಟ್ ಬೀಜ ಬೇಕಾಗುತ್ತದೆ. 4 ರಿಂದ 5  ಸಾವಿರ ರೂಪಾು ಬೀಜ ಬೇಕಾಗುತ್ತದೆ. ಮೆಣಸಿನಕಾು ಬೀಜವನ್ನು  ನಾಟಿ ಮಾಡಿ 55 ದಿನಗಳ ನಂತರ ಮೊದಲ ಕಟಾವು ಮಾಡಲಾಗುತ್ತದೆ.  ಹೆಚ್ಚು ಇಳುವರಿ, ಹೆಚ್ಚು ದಿನಗಳ ಕಾಲ ಹಸಿರಾಗಿರುತ್ತದೆ. "ಗಾಗಿ ರು​‍್ತ ಮಾಡಲು ಸಹಕಾರಿಯಾಗುತ್ತದೆ.  

ಟೊಮೋಟೊ ಒಂದು ಎಕರೆ ಕೃ ಮಾಡಲು 5 ಪ್ಯಾಕೆಟ್ ಬೀಜ ಬೇಕಾಗುತ್ತದೆ. ಒಂದು ಟ್ರ್ರೆಗೇ 50 ರೂಪಾು ಬೆಲೆಯನ್ನು ಹೊಂದಿದ್ದು ಸಸಿಗಳನ್ನು ಬೆಳೆಸಿ  ರೈತರಿಗೆ ವಿತರಿಸಲಾಗುವುದು. ನಾಲ್ಕು ದಿನಗಳ ಕಾಲ ಮೊಳಕೆ ಆಗುವುದಕ್ಕೆ ಟ್ರೆಗಳನ್ನು ಒಂದರ ಮೇಲೊಂದು ಇಟ್ಟು ಮುಚ್ಚಲಾಗುತ್ತದೆ. ನಂತರ 25 ದಿನಗಳ ಕಾಲ ಅದಕ್ಕೆ ಸೇವರ್ ನಿಂದ ನೀರು ಸಿಂಪರಣೆ ಮಾಡಲಾಗುತ್ತದೆ. 26ನೆಯ ದಿನಕ್ಕೆ ಸಸಿಗಳನ್ನು ನೆರವಾಗಿ ಸಸಿ ನಾಟಿ ಮಾಡಬಹುದು. 

ಕ್ಯಾಬೀಜ್ ಸಸಿ ಮಾಡಲು 24 ದಿನಗಳ ಕಾಲ ಬೇಕಾಗುತ್ತದೆ. ಒಂದು ಎಕರೆ ಕೃ ಮಾಡಲು 7 ಪ್ಯಾಕೆಟ್ ಬೀಜ ಬೇಕಾಗುತ್ತದೆ. ಮೂರು ದಿನಗಳಲ್ಲಿ ಮೊಳಕೆ ಬರಿಸಿದ ಬೀಜವನ್ನು ಟ್ರೆಗಳಲ್ಲಿ ಹಾಕಿ ದಿನ ನಿತ್ಯ ನೀರು ಸಿಂಪರಣೆ ಮಾಡಿ ಪೋ?ಣೆ ಮಾಡಲಾಗುತ್ತದೆ. 24 ರಿಂದ 28 ದಿನಗಳಲ್ಲಿ ಸಸಿ ನೆಡಬೇಕು ಇಲ್ಲದಿದ್ದರೆ ಸಸಿಗಳು ಹಾಳಾಗುತ್ತದೆ. ಸಮಯಕ್ಕೆ ಸರಿಯಾಗಿ ಉಪಯೋಗಿಸಿಕೊಂಡು ತರಕಾರಿಯನ್ನು ಬೆಳೆಸಬಹುದು ಎಂದು ನರ್ಸರಿ ಮಾಲೀಕ ಪ್ರಕಾಶ ಸಲಹೆ ನೀಡಿದರು. 

ನರ್ಸರಿಗೆ ಬೇಕಾಗುವ ಬಂಡವಾಳ. 

ನಿರುದ್ಯೋಗಿ ಯುವಕರಿಗೆ ಹಸಿರು ಮನೆ ಉದ್ಯೋಗ ಉತ್ತಮ ಲಾಭ ತರುವ ಕ್ಷೇತ್ರವಾಗಿದೆ. ಸದಾ ಬೇಡಿಕೆ ಹಾಗೂ ಉದ್ಯೋಗ ನೀಡುವ ಕೃ ಪೂರಕವಾದ ಹಸಿರು ಮನೆ ಸಸ್ಯೋದ್ಯಾನ ಕೇವಲ ಕೃಷಿ ತೋಟಗಾರಿಕೆ ಬೆಳೆಗಳ ಸಸಿಗಳಲ್ಲದೇ ಅಲಂಕಾರಿಕ ಹೂವು, ಗಿಡಗಳ ಸಸ್ಯ ಬೆಳೆಸಿ ನಿರಂತರ ಲಾಭ ದಾಯಕ ಉದ್ಯೋಗವಾಗಿಸಿಕೊಳ್ಳಬಹುದು.  

ಆಲದಕಟ್ಟಿ ಗ್ರಾಮದ ಹಾನಗಲ್ ರಸ್ತೆ ಮಾರ್ಗದಲ್ಲಿ ನಿರ್ಮಾಣ ಮಾಡಿರುವ ಹಸಿರು ಮನೆ ಮಾಲೀಕ ಪ್ರಕಾಶ ಮುತಗಾಲ ಹೇಳುವಂತೆ ಹಸಿರು ಮನೆ ಲಾಭ ದಾಯಕ ಉದ್ಯೋಗ ಶ್ರಮ ಹಾಕಿದರೆ ಸುಸ್ಥಿರ ಬದುಕು ಕಟ್ಟಿಕೊಳ್ಲಲು ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ. ಹಸಿರು ಮನೆ ಸ್ಥಾಪನೆಗೆ ನನ್ನ ಚಿಕ್ಕಪ್ಪ ವೆಂಕಟೇಶ ಎನ್ನುವವರು ಸ್ಫೂರ್ತಿಯಾಗಿದ್ದಾರೆ. ಆಂಧ್ರ​‍್ರದೇಶದಲ್ಲಿ ಹಸಿರು ಮನೆ ಪದ್ಧತಿ ಜನಪ್ರಿಯವಾಗಿತ್ತು. ಈ ಮಾದರಿ ಹುಬ್ಬಳ್ಳಿಯಲ್ಲಿ ಜನಪ್ರಿಯಗೊಂಡಾಗ ಇದನ್ನು ನೋಡಿದ ಚಿಕ್ಕಪ್ಪ ನನಗೆ ಮಾರ್ಗದರ್ಶನ ಮಾಡಿದ ಫಲವಾಗಿ ಹಸಿರು ಮನೆ ಆರಂಭಿಸಿ ಉತ್ತಮ ನೆಲೆ ಕಂಡುಕೊಂಡಿದ್ದೇನೆ ಎನ್ನುತ್ತಾರೆ.  

ಹಸಿರು ಮನೆ ನಿರ್ಮಾಣ ಹಾಗೂ ಸಸಿ ಬೆಳೆಸಲು ಅಂದಾಜು 4 ರಿಂದ 5 ಲಕ್ಷ ರೂ ಬಂಡವಾಳವನ್ನು ಹೊಡಿಕೆ ಮಾಡಿದರೆ ರ್ವಾಕ ಆದಾಯ 2ರಿಂದ 3 ಲಕ್ಷ ರೂಪಾು ಲಾಭವನ್ನು ಪಡೆಯಬಹುದು. 6 ತಿಂಗಳಗಳ ಕಾಲ ನರ್ಸರಿ ಕೆಲಸ ಇದ್ದು  ಕುಟುಂಬದ ಒಟ್ಟು 6 ಜನ ಸದಸ್ಯರು ನರ್ಸರಿ ಕೆಸದಲ್ಲಿ ತೊಡಗಿಸಿಕೊಂಡಿದ್ದೇವೆ. ಅಂದಾಜು 21 ಸಾ"ರ ಚದರ ಅಡಿ ಹಸಿರು ಮನೆ ನಿರ್ಮಾಣ ಮಾಡಿದ್ದು, 40 ರಿಂದ 50 ಸಾ"ರ ಸಸಿ ಬೆಳೆಸುವ ಸಾಮರ್ಥ್ಯ ಹೊಂದಲಾಗಿದೆ. 

ಹಸಿರು ಮನೆ ಯಶಸ್ವಿಗೆ ರೈತರ ವಿಶ್ವಾಸ ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಬೀಜ ಮತ್ತು ತಳಿಯ  ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಲದೇ ಉತ್ತಮ ಸಸಿಗಳನ್ನು ಬೆಳಸಿ ನೀಡಬೇಕು. ಅವರ ಹೊಲದಲ್ಲಿ ಉತ್ತಮ ಬೆಳೆ ಬಂದರೆ ರೈತರ ಬೆಳವಣಿಗೆಯಲ್ಲಿ ನಮ್ಮ ಯಶಸ್ಸು ಅಡಗಿದೆ ಎನ್ನುತ್ತಾರೆ.  ಹಸಿರು ಮನೆ ಸಸ್ಯೋದ್ಯ"ುಗಳಲೊಬ್ಬರಾದ ಪ್ರಕಾಶ ಮುತಗಾಲ. "ಹಸಿರು ಮನೆ ಸಸ್ಯೋದ್ಯಾನ" ವೈಜ್ಞಾನಿಕ ಕೃ ಪದ್ಧತಿ ಜೊತೆಗೆ ಲಾಭದಾಯಕವಾಗಿದೆ. ವಿಶೇಷವಾಗಿ ಕೃ ಪೂರಕ ಉದ್ಯೋಗ ಆಕಾಂಕ್ಷಿಗಳಿಗೆ ವರದಾನವಾಗಿದೆ. 

 

ಪವನಕುಮಾರ ಎಸ್ ಲಮಾಣಿ 

ಅಪ್ರೆಂಟಿಸ್ ಅಭ್ಯರ್ಥಿ  

ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾವೇರಿ  


ಸುದ್ದಿ ಓದಿ