ಶಿಗ್ಗಾವ್

ಗ್ರಾಮ ಒನ್ ಯೋಜನಾಧಿಕಾರಿ ಭೇಟಿ: ಸಾರ್ವಜನಿಕ ಪ್ರಶಂಸೆಗೆ ಹರ್ಷ

ಗ್ರಾಮ ಒನ್ ಯೋಜನಾಧಿಕಾರಿ ಭೇಟಿ: ಸಾರ್ವಜನಿಕ ಪ್ರಶಂಸೆಗೆ ಹರ್ಷ

ಲೋಕದರ್ಶನ ವರದಿ 

ಶಿಗ್ಗಾವಿ 24:  ತಾಲೂಕಿನ ನಾರಾಯಣಪುರ, ಹಾಗೂ ಬಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಒನ್ ಸೇವಾ ಕೇಂದ್ರಕ್ಕೆ ಗ್ರಾಮ ಒನ್ ಯೋಜನಾಧಿಕಾರಿ ವರ​‍್ರಸಾದರೆಡ್ಡಿ ಬಿ ಎನ್ ಅವರು ಬೇಟಿ ನೀಡಿದರು.  

ಈ ಸಂದರ್ಭದಲ್ಲಿ ಗ್ರಾಮದ ಜನರೊಂದಿಗೆ ಗ್ರಾಮ ಒನ್ ಸೇವೆಯ ಬಗ್ಗೆ ಅಭಿಪ್ರಾಯಗಳನ್ನ ವಿನಿಮಯ ಮಾಡಿದಾಗ ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದಸಿದ್ದನ್ನ ಕಂಡು ಹರ್ಷ ವ್ಯಕ್ತಪಡಿಸಿದರು. ನಂತರ ಬಾಡದ ಅರಮನೆಗೆ ಭೇಟಿ ನೀಡಿ ಕನಕದಾಸರ ಜೀವನದ ಚರಿತ್ರೆಯನ್ನು ಬಿಂಬಿಸುವ ಚಿತ್ರಗಳು, ಜೊತೆಗೆ ಕನಕದಾಸ ಜೀವನ ಚರಿತ್ರೆಯ ಕಿರು ಚಿತ್ರ  3ಡಿ ಸಿನಿಮಾ ವಿಕ್ಷಣೆ ಮಾಡಿ ಖುಷಿ ವ್ಯಕ್ತಪಡಿಸಿದರು. 

ಜಿಲ್ಲೆಯ ಗ್ರಾಮ ಒನ್ ಜಿಲ್ಲಾ ವ್ಯವಸ್ಥಾಪಕ ಅರುಣಕುಮಾರ ಕಾಳಪ್ಪನವರ, ಜಿಲ್ಲಾ ವ್ಯವಸ್ಥಾಪಕ ದಾರಾಪೀರ ಜಮಖಂಡಿ, ಬಂಕಪ್ಪ ಬಾರಿಗಿಡದ, ಸುರೇಶ ಚಿನ್ನಪ್ಪನವರ, ಗುರನಗೌಡ ಪಾಟೀಲ, ನಾಗರಾಜ ವೆಂಕೋಜಿ, ಮುರಗೇಶ ಪುಟ್ಟಪ್ಪನವರ, ಈರ​‍್ಪ ಕ್ಷೌರದ ಹಾಗೂ ತಾಲೂಕಿನ ಎಲ್ಲ ಗ್ರಾಮ ಒನ್ ಆಪರೇಟರ್ ಉಪಸ್ಥಿತರಿದ್ದರು. 


ಸುದ್ದಿ ಓದಿ