ಲೇಖನಗಳು

"ಮತ್ತೆ ಬೆಂಕಿ ಬಿದ್ದಿದೆ ಮನೆಗೆ" ಆದರೆ ಆರಿಸಬೇಕಾದವರೇನು ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ...!

"ಮತ್ತೆ ಬೆಂಕಿ ಬಿದ್ದಿದೆ ಮನೆಗೆ" ಆದರೆ ಆರಿಸಬೇಕಾದವರೇನು ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ...!


ಇಂದು ಗಡಿನಾಡಿಗೆ ಬಂದ ಸ್ಥಿತಿ ನಾಳೆ ನಡು ನಾಡಿಗೂ ಬರಬಹುದು. ಈ ಘಟನೆ ಎಚ್ಚರದ ಕರೆ ಗಂಟೆಯಾಗಬೇಕಿದೆ 

ಅದು ಕಾಸರಗೋಡು ಕರ್ನಾಟಕದಿಂದ ಕೈ ಜಾರುತ್ತಿದ್ದ ಕಾಲ. ಒಂದೆಡೆ ಕರ್ನಾಟಕ ಏಕೀಕರಣವಾಗಿ ಕನ್ನಡದ ಮನಗಳು ಒಂದಾಗಬೇಕಾದ ಕಾಲಘಟ್ಟದಲ್ಲಿ ಕರ್ನಾಟಕದ ಭಾಗವನ್ನೇ ಹರಿದು ಹಂಚುತ್ತಿದ್ದ ಭಯಂಕರ ಯಾತನೆಯ ಸಮಯ. ದೇಹದಿಂದ ಅಂಗವನ್ನು ಬೇರಿ​‍್ಡಸುವಾಗ ಆಗುತ್ತಿದ್ದ ಯಾತನೆಗೂ "ುಗಿಲಾಗಿ ನಾಡನ್ನು ಒಡೆದು ಕೊಡುವಾಗ ಸಂಕಟವಾಗುತ್ತಿತ್ತು. ಈ ಮಣ್ಣಿನ ಮೇಲೆ ಅದ್ಯಾವ ಪರಿಯ ಪ್ರೀತಿ ನಮ್ಮನ್ನು ಆವರಿಸಿಕೊಂಡು ಬಿಟ್ಟಿರುತ್ತದೆ ಎಂದರೆ ನಮ್ಮ ನಾಡಿನ ಭಾಗ ಬಿಟ್ಟು ಕೊಡುವುದು ನಮ್ಮ ಹೃದಯಕ್ಕೆ ಕತ್ತರಿ ಹಾಕುವುದು ಎರಡು ಒಂದೇ ಎನಿಸುತ್ತಿತ್ತು. ಈ ಘಟನೆಯನ್ನು ಅರಗಿಸಿಕೊಳ್ಳಲಾಗದ ಕಯ್ಯಾರ ಕಿಯಣ್ಣರೈ ಅವರು ಕ"ತೆಯ ಮೂಲಕ ನಾಡನ್ನು ಎಚ್ಚರಿಸುವ ಯತ್ನ ಮಾಡುತ್ತಾರೆ. 1961 ರಲ್ಲಿ ಪ್ರಕಟವಾದ ತಮ್ಮ ಕವನ ಸಂಕಲನ 'ಪುನರ್ನವ'ದಲ್ಲಿ ತಮ್ಮ ಭಾಷಾಭಿಮಾನದ ಸಂಕಟವನ್ನು ಕ"ತೆಯಲ್ಲಿ ವ್ಯಕ್ತಪಡಿಸುತ್ತ 

"ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ 

ಎಲ್ಲರೂ ಎದ್ದೆದ್ದು ಓಡಿ ಬನ್ನಿ 

ಕನ್ನಡದ ಗಡಿ ಕಾಯೆ, ಗುಡಿಕಾಯೆ, ನುಡಿಕಾಯೆ 

ಕಾಯಲಾರೆನೆ ಸಾಯೆ, ಓ ಬನ್ನಿ ಬೆಂಕಿ ಬಿದ್ದಿದೆ ಮನೆಗೆ 

ಹಾರೆಗುದ್ದಲಿ ಕೊಡಲಿ ನೊಗ ನೇಗಿಲೆತ್ತುತಲಿ 

ನೆಲದಿಂದ ಹೊಲದಿಂದ ಹೊರಟು ಬನ್ನಿ 

ಕನ್ನಡದ ನಾಡಿಂದ, ಕಾಡಿಂದ, ಗೂಡಿಂದ 

ಕಡಲಿಂದ, ಸಿಡಿಲಿಂದ ಗುಡುಗಿ ಬನ್ನಿ ಬೆಂಕಿ ಬಿದ್ದಿದೆ ಮನೆಗೆ 

ಅಕ್ಕಂದಿರೆ ಅಣ್ಣಂದಿರೆ, ತಂಗಿಯರೆ ತಮ್ಮಂದಿರೆ 

ಬೆಂಕಿಯನ್ನಾರಿಸಲು ಬೇಗ ಬನ್ನಿ 

ಕನ್ನಡದ ಒಲವೊಂದೆ, ಛಲವೊಂದೆ, ನೆಲವೊಂದೆ 

ನಾಡನುಳಿಸುವೆನೆಂದರೆ ಓಡಿ ಬನ್ನಿ ಬೆಂಕಿ ಬಿದ್ದಿದೆ ಮನೆಗೆ" 

ಎಂದು ಹೇಳಿ ನಾಡನ್ನು ಒಂದು ಮಾಡಲು ಹಲುಬಿದರು. ಆದರೆ ಅಂದು ಹತ್ತಿದ ಬೆಂಕಿ ಅಂದಿಗೆ ಮಾತ್ರವಲ್ಲ ಮುಂದೆಯು ನಮ್ಮನ್ನು ದ"ಸಲಿದೆ ಎಂದು ಪಾಪ ಅಂದು ಅವರಿಗೂ ಗೊತ್ತಿರಲಿಲ್ಲ. "ಗಾಗಿ ಅಂದಿನ ಬೆಂಕಿ ಇಂದಿಗೂ ಆರುತ್ತಿಲ್ಲ. ಇದು ನಮಗೆ ಅರಿವಾಗುವುದು ಯಾವಾಗ? ಅಂದು ಕಾಸರಗೋಡಿನ "ಷಯದಲ್ಲಿ ಬಿದ್ದ ಬೆಂಕಿಯ ಕೆನ್ನಾಲಿಗೆಯು ಇಂದು ಮಾರಠಿ ಹೆಸರಿನಲ್ಲಿ ಕರುನಾಡ ಧ್ವಜಕ್ಕೆ ಅಂಟಿಕೊಂಡು ಧ"ಸುತ್ತಿದೆ ಮತ್ತು ಅದನ್ನು ನಮ್ಮ ಕರುನಾಡು ಸ"ಸುತ್ತಿದೆ ಎಂದರೆ ಇದಕ್ಕಿಂತ ಸಂಟಕದ ಕಾಲ ಮತ್ತೊಂದಿಲ್ಲ. ಈ ಬೆಂಕಿ ಆರುವ ಲಕ್ಷಣಗಳು ಕಾಣುತ್ತಿಲ್ಲ. ಕಾರಣ ಹತ್ತಿದ ಬೆಂಕಿಯನ್ನು ನಂದಿಸುವ ಯಾವ ಯತ್ನಗಳು ನ"್ಮುಂದ ನಡೆಯುತ್ತಿಲ್ಲ. ಕೆಲವರು ಆ ಬೆಂಕಿಯಲ್ಲಿ ಚಳಿಕಾುಸಿಕೊಂಡರೆ ಮತ್ತೆ ಕೆಲವರು ಆ ಬೆಂಕಿಯನ್ನೇ ಮನೆಯ ಬೆಳಕಾಗಿಸಿಕೊಳ್ಳುವ ಹುನ್ನಾರ ಮಾಡುತ್ತಿದ್ದಾರೆ. ಆದರೆ ಅವರಿಗೆ ಅರಿ"ಲ್ಲದಂತೆ ಆ ಬೆಂಕಿಯ ಕೆನ್ನಾಲಿಗೆಗೆ ಮುಂದೆ ಅವರೇ ಬಲಿಯಾಗುತ್ತಾರೆ ಎಂಬುದನ್ನು ಮರೆತು ಬಿಟ್ಟಿದ್ದಾರೆ. ಅದಕ್ಕೆ ಈಗ ಮತ್ತೆ ಬೆಂಕಿ ಬಿದ್ದಿದೆ ಬಂದು ಆರಿಸುವವರಾರು ಹೇಳಿ ಎಂದಿದ್ದು. 

ಹೌದು ಬೆಳಗಾ"ಯಲ್ಲಿರುವ ಮಾರಾಠಿಗರೇಕೆ ಪದೇ ಪದೇ ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ? ಬೆಳಗಾ" ಎಂದಾಕ್ಷಣ ರಾಯಣ್ಣ, ಚೆನ್ನಮ್ಮ, ಕನ್ನಡ, ಕನ್ನಡಿಗ ಎನ್ನುವುದಕ್ಕಿಂತ ಹೆಚ್ಚಾಗಿ ಎಂಇಎಸ್ ಪುಂಡಾಟಿಕೆಯ ಪ್ರಸಂಗಗಳೇ ನೆನಪಿಗೆ ಬರುವಂತೆ ಮಾಡುತ್ತಿರುವ ಇವರ ಕುಚೇಷ್ಟೆಗಳನ್ನು ಕಂಡಾಗಲಂತೂ ಬೆಳಗಾ"ಯಲ್ಲಿ ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ಈ ಗತಿ ಬರುವುದಕ್ಕೆ ಕಾರಣವೇನು? ಎನ್ನುವ ಪ್ರಶ್ನೆ ಮೂಡುತ್ತದೆ. ಮಾತೆತ್ತಿದರೆ ಕನ್ನಡ ಭಾಷಾ ಅಸ್ಮಿತೆಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಭಾಷಣ ಬಿಗಿಯುವ ಡೋಂಗಿಬಾಬಾಗಳು ಬೆಳಗಾ" "ಷಯದಲ್ಲಿ ಅದೇಕೆ ತುಟಿ ಬಿಚ್ಚದೆ ಸುಮ್ಮನಾಗುತ್ತಾರೋ ಗೊತ್ತಾಗುತ್ತಿಲ್ಲ. ಮೆಟ್ರೋದಲ್ಲಿ "ಂದಿ ಭಾಷೆಯನ್ನು ಹೇರುತ್ತಿದ್ದಾರೆ ಎಂದು ಹೇಳಿ ಬೀದಿಗಿಳಿಯುವ ನಾವುಗಳು, ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಿ ಕನ್ನಡವನ್ನು ಕಡ್ಡಾಯ ಮಾಡಿದ್ದರ "ರುದ್ಧ ಕೋರ್ಟಿಗೆ ಹೋದಾಗಲು ತೆಪ್ಪಗಿರುವ ನಾವುಗಳು, ಅನ್ಯ ಭಾಗರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದಾಗಲು ಮಕಾಡೆ ಮಲಗಿಕೊಂಡು ಗೊರೆಕೆ ಹೊಡೆಯುವ ನಾವುಗಳು, ಕರ್ನಾಟಕದ ರಾಜಧಾನಿಯಲ್ಲಿ ಕನ್ನಡವನ್ನು ಬ್ಯಾಟರಿ ಹಾಕಿ ಹುಡುಕಿಕೊಂಡು ತಿರುಗಾಡುವ ನಾವುಗಳು, ಅನ್ಯಭಾಷೆಯ ಚಳಿ ಅಂಟಿಸಿಕೊಂಡು ಗಡಗಡ ನಡುಗುವ ನಾವುಗಳು ನಿಜಕ್ಕೂ ಈ ರಾಜ್ಯವನ್ನು ಹರಿದು ಹಂಚಲು ಸಿದ್ಧವಾಗಿದ್ದೀವಾ ಎನ್ನುವ ಅನುಮಾನಗಳು ಸುಳಿದಾಡುತ್ತಿವೆ. ಮರಾಠಿ ಭಾಷೆಯನ್ನು ಮುಂದು ಮಾಡಿಕೊಂಡು ಕ್ಷಣ ಕ್ಷಣಕ್ಕೂ ಕನ್ನಡಿಗರಿಗೆ ಮಗ್ಗಲು ಮುಳ್ಳಾಗಿ ಕಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸ"ುತಿ ಮಾಡುವ ಎಲ್ಲ ಗೂಂಡಾಗಿರಿಗಳನ್ನು ಸ"ಸಿಕೊಂಡು ಬದುಕುತ್ತೇವೆ ಎಂದರೆ ನಮ್ಮಲ್ಲಿನ ಭಾಷೆಯ ಅಭಿಮಾನ ಅದೆಷ್ಟು ಅಧಃಪತನದ ಹಾದಿ "ಡಿದಿದೆ ಎನ್ನುವುದು ನಮಗೆ ಅರ್ಥವಾಗುತ್ತದೆ. ಇಷ್ಟು ದಿನ ಕೇವಲ ಮಸಿ ಬಳಿಯುವ ಮೂಲಕವೋ, ಇಲ್ಲ ಧಿಕ್ಕಾರ ಕೂಗುವ ಮೂಲಕವೋ, ಕಪ್ಪು ಬಟ್ಟೆ ಪ್ರದರ್ಶಿಸುವ ಮೂಲಕವೋ ಜರುತ್ತಿದ್ದ ಪುಂಡರಾಟಗಳು ಇಂದು ನಮ್ಮ ರಾಜ್ಯದ ಧ್ವಜಕ್ಕೆ ಬೆಂಕಿ ಹಚ್ಚುವ ಮಟ್ಟಕ್ಕೆ ಬಂದು ತಲುಪಿದೆ. ಆದರೂ ಅದು ನಮಗೆ ಅಷ್ಟೋಂದು ನೋವಾಗುತ್ತಿಲ್ಲ. ಅದರ ಕುರಿತು ಧ್ವನಿ ಎತ್ತುವ ಕಾರ್ಯವಾಗುತ್ತಿಲ್ಲ. ಇದನ್ನು ನೆನೆಸಿಕೊಂಡರೆ ನಿಜಕ್ಕೂ ದಿಗ್ಭ್ರಮೆಯಾಗುತ್ತಿದೆ. ಅವರು ಬೆಂಕಿ ಇಟ್ಟಿದ್ದು ಕನ್ನಡದ ಧ್ವಜಕ್ಕಲ್ಲ. ಬದಲಿಗೆ ಕನ್ನಡಿಗರ ಭಾವನೆಗಳಿಗೆ, ಕೆಚ್ಚೆದೆಯ ಕನ್ನಡಿಗನ ಸ್ವಾಭಿಮಾನಕ್ಕೆ ಎನ್ನುವುದೇಕೆ ನಮಗರ್ಥವಾಗುತ್ತಿಲ್ಲ? ಇಂದು ಧ್ವಜಕ್ಕೆ ಬೆಂಕಿ ಇಟ್ಟಿದ್ದನ್ನು ಸ"ಸಿಕೊಂಡರೆ ಮುಂದೆ ಇವರು ನಾಡಿಗೂ ಬೆಂಕಿ ಇಡುತ್ತಾರೆ. ನಾ"ದನ್ಯಾವತ್ತೂ ಮರೆಯಬಾರದು. ಆದರೆ ಏನು ಮಾಡುವುದು ಅನ್ಯ ಭಾಷೆಗಳಿಗೆ ಮಾರಿಕೊಂಡ ನಾವುಗಳು ಅನ್ನ ಹಾಕುವ ಭಾಷೆಯನ್ನಾಗಿ ಆಂಗ್ಲವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮತನವನ್ನು ಗಾಳಿಗೆ ತೂರಿಕೊಂಡು ಅಕ್ಷರಶಃ ಮತ್ತೊಂದು ಭಾಷೆಯ ಹಂಗಿನಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದೇವೆ. "ಗಿರುವಾಗ ಎಲ್ಲಿ ಏನಾದರೆ ನನಗೇನು ಎನ್ನುವ ಭಾವನೆಯನ್ನು ಬಿಟ್ಟು ಬೇರೆನು ಕಾಣಲು ಸಾಧ್ಯ"ದೆ ನೀವೆ ಹೇಳಿ?  

ಕಪ್ಪೆ ಅರಭಟ್ಟನ ಶಾಸನದಲ್ಲಿ ಕನ್ನಡದ ರಾಜನನ್ನು ಹಾಡಿ ಹೊಗಳುವ ಕ"ಯು ಆ ಮೂಲಕ ಕನ್ನಡಿಗರಲ್ಲಿ ಅದೆಂತ ಕೆಚ್ಚಿದೆ ನಾಡಿನ "ಷಯಕ್ಕೆ ಬಂದರೆ ಯಾವದನ್ನು ಕೂಡ ಲೆಕ್ಕಿಸದ ಹುಚ್ಚಿದೆ ಎನ್ನುವುದನ್ನು ತೋರಿಸುತ್ತಾನೆ. 

"ಸಾಧುಂಗೆ ಸಾಧು 

ಮಾಧುರ್ಯಂಗೆ ಮಾಧುರ್ಯನ್ 

ಬಾಧಿಪ್ಪ ಕಲಿಗೆ ಕಲಿಯುಗ "ಪರೀತನ್ 

ಮಾಧವನೀತನ್ ಪೆರನಲ್‌..." 

ಅಂದರೆ ಈತನು ಸಾಧುಗೆ ಸಾಧುವೂ, ಮಧುರವಾಗಿ ವ್ಯವಹರಿಸುವವರಿಗೆ ಮಧುರವಾಗಿ ವ್ಯವಹರಿಸುವವನು, ತೊಂದರೆ ಕೊಡುವವನಿಗೆ ಕಲಿಯುಗದ ಯಮನೂ ಆಗಿರುವನು ಮತ್ತು ಈತ ಮಾಧವನಲ್ಲದೆ ಬೇರಾರು ಅಲ್ಲ. ಎಂದು ಕಪ್ಪೆ ಅರಭಟ್ಟನು "ವರಿಸುತ್ತಾನೆ. ಆರನೇ ಶತಮಾನದಲ್ಲಿ ಕನ್ನಡ ರಾಜನ ಕುರಿತಾಗಿ ಕ" ವರ್ಣಿಸುತ್ತಾನೆ. ಪಾಠ ಮಾಡುವಾಗ ನಾವುಗಳು ಸಹ ಅದನ್ನೇ ಉಲ್ಲೇಖ ಮಾಡುತ್ತೇವೆ. ಆದರೆ ಆ ರಾಜನಿಗಿದ್ದ ಬುದ್ದಿ ನಮ್ಮಲ್ಲೇಕೆ ನಿರ್ಮಾಣವಾಗಲಿಲ್ಲ ಎನ್ನುವುದೇ ನನಗೆ ತಿಳಿಯುತ್ತಿಲ್ಲ. ತೊಂದರೆ ಕೊಡುವವನಿಗೆ ಕಲಿಯುಗದ ಯಮನಾಗುವ ಕನ್ನಡಿಗನಿಗೆ ಇಂದು ಏನಾಗಿದೆ? ಕನ್ನಡಿಗರ ಬಾವುಟಕ್ಕೆ ಬೆಂಕಿ ಇಟ್ಟರು ನೋವಾಗುತ್ತಿಲ್ಲ, ಕನ್ನಡ ಭೂ"ುಯನ್ನು ಕಬಳಿಸಲು ಮುಂದಾದರೂ ಸಂಕಟವಾಗುತ್ತಿಲ್ಲ, ಕನ್ನಡಿಗರ ಸ್ವಾಭಿಮಾನವನ್ನು ಪ್ರಶ್ನೆ ಮಾಡಿದರು ಬೇಸರವಾಗುತ್ತಿಲ್ಲ. ಅಲ್ಲಿ ಹೇಳಿದ "ರತ್ವ, ಶೌರ್ಯತ್ವ, ಸಾಹಸ, ಹೋರಾಟ ಎಲ್ಲ ಎಲ್ಲಿ ಹೋದವು. ಅಂದಮೇಲೆ ಈ ಶಾಸನದ ಸಾಲುಗಳನ್ನು ನಮ್ಮ ಮಕ್ಕಳಿಗೆ ತಿಳಿಸುವುದರಲ್ಲೇನು ಫಲ"ದೆ ಹೇಳಿ? ಅಷ್ಟಕ್ಕೂ ಈ ರೀತಿಯ ಅಸಡ್ಡೆ ನಮ್ಮಲ್ಲಿ ಮನೆ ಮಾಡಲು ಕಾರಣವಾಗಿದ್ದಾದರೂ ಏನು? ನಡುನಾಡು, ಗಡಿನಾಡು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ ಎಂದು ಹರಿದು ಹಂಚಿಕೊಂಡಿದ್ದರ ಫಲವೇ? ಇಲ್ಲ ಬೆಳಗಾ"ಯಲ್ಲಿ ಏನಾದರೆ ಬೆಂಗಳೂರಿನವರಿಗೇನು ಎಂದು ಸುಮ್ಮನಾಗುತ್ತಿರುವ ಪ್ರಮಾದದ ಕಾರಣವೇ? ಇಂದು ಗಡಿ ನಾಡಿಗೆ ಬಂದಿರುವ ಕಷ್ಟ ನಾಳೆ ನಡು ನಾಡಿಗೂ ಬರಬಹುದು. ಅಂದು ಕಾಸರಗೋಡು ಕೈ ತಪ್ಪಿದ ರೀತಿಯಲ್ಲಿ ಕರ್ನಾಟಕದ ಇತರ ಭಾಗಗಳೂ ಕತ್ತರಿ ಬೀಳಬಹುದು. ಇದನ್ನು ಅರ್ಥ ಮಾಡಿಕೊಳ್ಳುವುದು ಯಾವತ್ತು?  

ಬೆಳಗಾ"ಯಲ್ಲಿ ಅಧಿವೇಶನ ನಡೆಯುತ್ತದೆ ಎಂದಕ್ಷಣ ಮಹಾ ಮೇಳಾವ್ ಮಾಡಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಎಂಇಎಸ್‌ನ ಪುಂಡರು ಮುಂದಾಗುತ್ತಾರೆ. ಪ್ರಶ್ನಿಸಿದರೆ ಕನ್ನಡಿಗರನ್ನೇ ಹೆದರಿಸಲು ಯತ್ನಿಸುತ್ತಾರೆ. "ರೋಧ ಮಾಡಿದರೆ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚುತ್ತಾರೆ. ಇದು ಇವರ ಉದ್ಧಟತನ ಅದೆಷ್ಟು ಮೇರೆ "ುರಿದೆ ಎನ್ನುವುದನ್ನು ಸಾಕ್ಷ್ಯ ಒದಗಿಸುತ್ತದೆ. ಆದರೂ ಇದರ ಕುರಿತು ಕೆಲವೇ ಕೆಲವು ಜನ ಕನ್ನಡಿಗರು ಹೋರಾಟ ಮಾಡುತ್ತಿದ್ದಾರೆ. "ುಕ್ಕವರು ಇದಕ್ಕೂ ನನಗೂ ಏನು ಸಂಬಂಧವೇ ಇಲ್ಲ ಎಂದುಕೊಂಡು ಸುಮ್ಮನಾಗಿದ್ದಾರೆ. ಇನ್ನು ಕೆಲವರಂತೂ ಗಡಿನಾಡಿನಲ್ಲಾದ ಗಲಾಟೆಗೆ ನಡುನಾಡಿನಲ್ಲಿರುವ ನಾವುಗಳು ಏನು ಮಾಡಬೇಕು ಎಂದು ತೆಪ್ಪಗೆ ಕುಳಿತುಕೊಂಡಿದ್ದಾರೆ. ಕನ್ನಡಿಗರ ಮೌನವನ್ನು ಕಂಡೇ ಆ ದಿನ ಜಯದೇ"ತಾು ಲಿಗಾಡೆ ಅವರು ಕಣ್ಣಿರಿಟ್ಟರು. ನಮ್ಮ ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣಕ್ಕಾಗಿ ನಾವು ಅದೆಂತ ಕಷ್ಟವನ್ನು ಎದುರಿಸಬೇಕಾಗುತ್ತದೆ ಎನ್ನುವ ಸೂಕ್ಷ್ಮವನ್ನು ವೇದಿಕೆಯ ಮೇಲೆ ಅನಾವರಣ ಮಾಡಿದರು. ಕನ್ನಡಿಗರಿಗೆ ಸೆರಗೊಡ್ಡಿ ಬೇಡಿಕೊಂಡ ಆ ಮಹಾತಾು, 

"ಗಡಿ ನಾಡ ಕನ್ನಡತಿ ನಾನು, ನಡು ನಾಡ ಕನ್ನಡಿಗರು ನೀವು 

ಅಖಂಡ ಕರ್ನಾಟಕಕ್ಕಾಗಿ ಹೋರಾಡೋಣ ಬನ್ನಿ ಎಂದು ಕರೆಯುತ್ತಿದ್ದರೆ 

ಭಾರತ ಪಾಕಿಸ್ತಾನ ಒಂದಾಗುತ್ತಿವೆ ಎನ್ನುವಂತೆ ವರ್ತಿಸುತ್ತಿದ್ದೀರಿ 

ಇಂದು ಗಡಿ ನಾಡಿಗೆ ಬಂದಿರುವ ಸ್ಥಿತಿ 

ನಾಳೆ ನಡು ನಾಡಿಗೂ ಬರಬಹುದು 

ಕನ್ನಡಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧಳಾಗಿದ್ದೇನೆ 

ನೀವೂ ಬರು"ರಾ?" 

ಎಂದು ಪ್ರಶ್ನೆ ಮಾಡಿದರೆ ಆ ಕ್ಷಣಕ್ಕೆ ಜೈ ಕರ್ನಾಟಕ ಎಂದು ಹೇಳಿ, ನಂತರ ಕರ್ನಾಟಕದ ಮುಂದಿರುವ 'ಕ' ತೆಗೆದು ಬರೀ ನಾಟಕವನ್ನು ಮಾಡಿಕೊಂಡೆ ಬದುಕುತ್ತಿದ್ದೇವೆ. ಅದನ್ನೇ ಮುಂದುವರಿಸಿಕೊಂಡು ಹೊರಟಿದ್ದೇವೆ. ಈಗಲೂ ನಮಗೆ ಭಾಷೆಯ ಮೇಲೆ ಅಭಿಮಾನ"ಲ್ಲ. ಸ್ವ ಪ್ರತಿಷ್ಠೆಗಾಗಿ ಆಂಗ್ಲ ಭಾಷೆಯನ್ನು ಮಾತನಾಡುತ್ತ ನಾಲಿಗೆ ಚಪಲ ತೀರಿಸಿಕೊಳ್ಳುತ್ತಿರುವ ಪ್ರಮಾದದ ಫಲವೇ ಇಂದು ನಮ್ಮ ನಾಡಧ್ವಜ ಬೆಂಕಿಯಲ್ಲಿ ಬೇಯುವಂತಾಗಿದೆ. ಇದನ್ನು ಪ್ರತಿಭಟಿಸಿ ನಮ್ಮ ನಾಡನ್ನು ನಾವು ರಕ್ಷಿಸಿಕೊಳ್ಳದೇ ಹೋದರೆ ಈ ಬೆಂಕಿ ನಾಳೆ ನಮ್ಮ ನಾಡನ್ನೇ ಆವರಿಸಬಹುದು. ಆದರೂ ನಾವೇಕೆ ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದೇ ನನಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಅಷ್ಟಕ್ಕೂ ಈ ರೀತಿಯ ಘಟನೆಗಳು ಜರುಗಿದಾಗ ಅದನ್ನು "ರೋಧಿಸುವುದನ್ನು ಕೇವಲ ಕನ್ನಡಪರ ಹೋರಾಟಗಾರರಿಗೆ ಮಾತ್ರ ಬರೆದುಕೊಡಲಾಗಿದೆಯೇ? ನಮ್ಮ ಕೆಲಸ ಅದನ್ನು ನೋಡಿಕೊಂಡು ಸುಮ್ಮನಿರುವುದೇ ಹೇಳಿ? ಇಂದು ಉತ್ತರ ಕೊಡದೇ ಹೋದಲ್ಲಿ ಮುಂದೆ ಉತ್ತರ ನೀಡುವುದಕ್ಕೆ ಅವಕಾಶ ಸಿಗದೇ ಹೋಗಬಹುದು. ಮೊದಲೇ ರಾಜಕೀಯ ದೊಂಬರಾಟಕ್ಕೆ ಬಲಿಯಾದ ನಾವುಗಳು ಇಂದು ಅದಾಗಲೇ ಕನ್ನಡ ನಾಡಿನಲ್ಲಿಯೇ ಮನೆಗಳನ್ನು ಮನಗಳನ್ನು ಒಡೆದುಕೊಂಡು ಬದುಕುತ್ತಿದ್ದೇವೆ. ಹೇಗೆ ನಮ್ಮ ದೌರ್ಭಲ್ಯವನ್ನು ಅಸ್ತ್ರವಾಗಿಸಿಕೊಂಡ ಬ್ರಿಟೀಷರು ನಮ್ಮನ್ನು ಒಡೆದು ಆಳಿದರೋ ಹಾಗೆ ನಡುನಾಡು ಗಡಿನಾಡು ಎಂದು ಒಡೆದು ಹೋದ ಮನಸ್ಸುಗಳನ್ನೆ ದಾಳ ಮಾಡಿಕೊಂಡು ಮಹಾರಾಷ್ಟ್ರ ತನ್ನ ಕಾರ್ಯ ಸಾಧಿಸಿಕೊಳ್ಳುವುದಕ್ಕೆ ಸನ್ನದ್ಧವಾಗಿದೆ. ಇದು ನಮಗೆ ಅರ್ಥವಾಗುತ್ತಿಲ್ಲ. ಇದಕ್ಕೆ ಅವರ ಈ ಉದ್ಧಟತನದ ನಿಲುವೇ ಸಾಕ್ಷಿಯಾಗಿದೆ. 

ಈ ರೀತಿಯ ಘಟನೆಗಳಿಗೆ ಈ ನಾಡು ಸಾಕ್ಷಿಯಾದಾಗ ನಾವುಗಳು ಸ"ಸಿಕೊಳ್ಳುವ ಕಾರಣಕ್ಕಾಗಿಯೇ ಇದೆಲ್ಲ ನಡೆಯುತ್ತಿದೆಯೇ ಎನ್ನುವ ಅನುಮಾನ ಬಲವಾಗಿ ನನ್ನನ್ನು ಕಾಡುತ್ತದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಬೆಳಗಾ"ಯನ್ನು ಪಡೆದೇ ತೀರುತ್ತೇವೆ ಎನ್ನುತ್ತಾರೆ. ಇನ್ನು ಬೆಳಗಾ"ಯಲ್ಲಿರುವ ಅವನ ಶನಿ ಸಂತಾನದ ಪ್ರತಿರೂಪಗಳಾದ ಎಂಇಎಸ್ ಬೆಳಗಾ"ಯ ಜೊತೆಗೆ ನಿಪ್ಪಾಣಿ, ಬೀದರ್, ಬಾಲ್ಕಿಯನ್ನು ಸೇರಿಸಿಕೊಂಡು ಅಖಂಡ ಮಹಾರಾಷ್ಟ್ರ ನಿರ್ಮಾಣ ಮಾಡುತ್ತೇವೆ ಎಂದು ಬೊಬ್ಬೆ ಹೊಡೆಯುತ್ತಾರೆ. ಇದರ ಮಧ್ಯದಲ್ಲಿ ಗಡಿ "ವಾದವನ್ನು ಬಗೆ ಹರಿಸುವುದಕ್ಕೆ ನಿರ್ಮಾಣ ಮಾಡಲಾಗಿದ್ದ ಮಹಾಜನ್ ವರದಿಯನ್ನು ಗಾಳಿಗೆ ತೋರಿ ಬಿಡುತ್ತಾರೆ. ಇದೆಲ್ಲವೂ ರಾಜಕೀಯ ಪ್ರೇರಿತ ಎನ್ನುವುದು ಸ್ಪಷ್ಟ. ಆದರೆ ರಾಜಕೀಯ ಪ್ರೇರಿತವಾಗಿ ಮಾಡುವ ಈ ಪುಂಡಾಟಿಕೆಯಲ್ಲಿ ಕನ್ನಡ ಹಾಗೂ ಕನ್ನಡಿಗನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಅದಕ್ಕೆ ಉತ್ತರ ಕೊಡಬೇಕಾದವರು ಯಾರು? ಕನ್ನಡಿಗರೇ ಅಲ್ಲವೇ? ಅದೂ ಕೂಡ ಕನ್ನಡಿಗರೇ ನಿರ್ದಿಷ್ಟ ಪಡಿಸಿಕೊಂಡು ಹರಿದು ಹಂಚಿಕೊಂಡ ನಿರ್ದಿಷ್ಟ ಭಾಗಗಳಲ್ಲ. ಬದಲಿಗೆ ಪ್ರತಿಯೊಬ್ಬ ಕನ್ನಡಿಗನು ಉತ್ತರಿಸಬೇಕು. ಕಾವೇರಿ "ವಾದಕ್ಕೂ ನಮಗೂ ಸಂಬಂಧ"ಲ್ಲ ಎಂದು ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಕನ್ನಡಿಗರು ಕೈ ಕಟ್ಟಿ ಕೂತರೆ ಅತ್ತ ತ"ುಳರು ನಮ್ಮ ನೀರನ್ನು ಕೂಡಿದು ಕುಣಿಯುತ್ತಾರೆ. ಇತ್ತ ಬೆಳಗಾ"ಯ ಗಡಿ "ವಾದಕ್ಕೂ ನಮಗೂ ಸಂಬಂಧ"ಲ್ಲವೆಂದು ಮೈಸೂರು ಹಾಗೂ ಮಂಗಳೂರು ಕನ್ನಡಿಗರು ಸುಮ್ಮನೆ ಕುಳಿತರೆ ಬೆಳಗಾ"ಯನ್ನು ಮರಾಠಿಗರು ನುಂಗಿ ನೀರು ಕುಡಿಯುತ್ತಾರೆ. ಮೊದಲು ಇದನ್ನು ಸರಿ ಮಾಡಬೇಕಿದೆ. ನಮ್ಮ ನಮ್ಮ ಮಧ್ಯದ ಭಿನ್ನಾಭಿಪ್ರಾಯಗಳೇನೇ ಇದ್ದರೂ ನಾಡು ನುಡಿ "ಷಯದಲ್ಲಿ ಬೇರೊಬ್ಬರು ಮೂಗು ತೂರಿಸಿದರೆ ಒಂದಾಗಿ ಪಾಠ ಕಲಿಸಬೇಕು. ಇಲ್ಲದೇ ಹೋದಲ್ಲಿ ಕಾಸರಗೋಡು ಕಳೆದುಕೊಂಡಂತೆ ಇಡೀ ಕರುನಾಡನ್ನು ಹರಿದು ಹಂಚಿ, ಅನ್ಯರ ಹಂಗಿನಲ್ಲಿ ಅನ್ನ ಬೇಡಿಕೊಂಡು ಬದುಕಬೇಕಾಗುತ್ತದೆ. ಇದನ್ನು ಮೊದಲು ತಿಳಿದುಕೊಳ್ಳಬೇಕು. 

ಇಷ್ಟಾದ ಮೇಲೂ ನಾವು ನಮ್ಮನ್ನು ತಿದ್ದಿಕೊಳ್ಳದೇ ಹೋದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈ ಸಂದರ್ಭದಲ್ಲಿ ನನಗೆ ಹೈದರಾಬಾದ್ ಸಾ"ತ್ಯ ಸಮ್ಮೇಳನದ ಅಧ್ಯಕ್ಷತೆ ವ"ಸಿ ಮಾತನಾಡಿದ ಎ.ಆರ್‌.ಕೃಷ್ಣಶಾಸ್ತ್ರಿಗಳ ಮಾತುಗಳು ನೆನಪಾಗುತ್ತಿವೆ "ಏನಾದರೂ ಒಂದು ದುರದೃಷ್ಟದಿಂದ - ಅಂಥ ದುರದೃಷ್ಟ ಬರದಿರಲಿ - ನಮ್ಮ ದೇಶದಲ್ಲಿ ಬೌದ್ಧಧರ್ಮ ಖಿಲವಾಗಿ ನಷ್ಟವಾಗಿ ಹೋದಂತೆ ಸಂಸ್ಕೃತವೂ ಆಗಿ ಹೋಗುವುದಾದರೆ, ಅದು ಹೊರದೇಶಗಳಲ್ಲಿ ಬದುಕಿರುತ್ತದೆ, ಬಾಳುತ್ತಿರುತ್ತದೆ. ಆದರೆ ಕನ್ನಡ? ಕನ್ನಡಿಗರೇ, ನಿಮ್ಮ ಕನ್ನಡವನ್ನು ಇಂಡಿಯಾ ದೇಶದ ದಕ್ಷಿಣ ಭಾಗದಲ್ಲಿ ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲಿಯೂ ನೋಡಲಾರಿರಿ. ನೀವು ಅದನ್ನು ಅಲಕ್ಷ್ಯ ಮಾಡಿದರೆ "ುಕ್ಕ ಯಾವ ದೇಶದ ಯಾವ ಜನರು ಅದನ್ನು ಎತ್ತಿ "ಡಿಯಲಾರರು. ಅದು ಹೋದರೆ ಹೋಗಲಿ ಎನ್ನುವ ಹಾಗಿದ್ದರೆ ಈ ಕಡೆ ಬಂಗಾಳಕೊಲ್ಲಿ ಇದೆ. ಆ ಕಡೆ ಅರಬ್ಬಿ ಸಮುದ್ರ ಇದೆ. ಗುಡಿಸಿ ಹಾಕಿಬಿಡಿ. ಇತರ ಭಾಷೆಗಳು ಒತ್ತಿಕೊಂಡು ಬರಲಿ. ಆಕ್ರ"ುಸಿಕೊಳ್ಳಲಿ" ಆ ಸಂದರ್ಭದಲ್ಲಿ ಕೃಷ್ಣಶಾಸ್ತ್ರಿಗಳು ಸಂಸ್ಕೃತವನ್ನು ಮಾತ್ರ ಬೆರಳು ಮಾಡಿ ತೋರಿಸಿದರು. ಆದರೆ ಇಂದು ನಮ್ಮ ಭಾಷಾ ಅಸ್ಮಿತೆಗೆ ಒಂದಲ್ಲ ಸಾ"ರ ಸಂಕಟಗಳು ಎದುರಾಗುತ್ತಿವೆ. ಈ ಕಾಲಘಟ್ಟದಲ್ಲಿ ನಾವೇನು ಮಾಡಬೇಕಿದೆ ಎನ್ನುವುದನ್ನು ಅರಿತುಕೊಳ್ಳುವುದು ಅತೀ ಮುಖ್ಯ. "ಗೇ ನಮ್ಮ ನಮ್ಮಲ್ಲೇ ಕಚ್ಚಾಡುತ್ತ ಕುಳಿತರೆ ಅನ್ಯರಿಗೆ ಅವಕಾಶ ಸಿಗುತ್ತದೆ. ಅದನ್ನು ಬಿಟ್ಟು ನಮ್ಮತನವನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡಿದರೆ ಅಖಂಡ ಕರ್ನಾಟಕದ ಕನಸು ನನಸಾಗುತ್ತದೆ. ಇದಕ್ಕೆ ಪ್ರತಿಯೊಬ್ಬ ಕನ್ನಡಿಗನು ಕೇವಲ ನವೆಂಬರ್ ಕನ್ನಡಿಗರಾಗದೆ ನಿಜವಾದ ಕನ್ನಡಿಗರಾಗಿ ನಮ್ಮ ನಾಡಿನ ಅಸ್ಮಿತೆಗಾಗಿ ಶ್ರ"ುಸಬೇಕಿದೆ. ಅನ್ಯ ಭಾಷೆಯ ಚಳಿ ಬಡಿದವರಿಗೆ ಕನ್ನಡ ಕಂಬಳಿ ಹೊದ್ದಿಸಬೇಕಿದೆ. ಅವರು ಸುಟ್ಟಿದ್ದು ನಮ್ಮ ಧ್ವಜವನ್ನಲ್ಲ ಬದಲಿಗೆ ಅವರ ಬಗ್ಗೆ ಉಳಿದಿದ್ದ ಅಲ್ಪ ಸ್ವಲ್ಪ ಕರುಣೆ ಕನಿಕರವನ್ನು. ಈ ಸತ್ಯವನ್ನವರಿಗೆ ಅರ್ಥ ಮಾಡಿಸಬೇಕಿದೆ. ನಿನ್ನೆ ನಡೆದ ಘಟನೆ ಮುಂದೆ ಯಾವತ್ತೂ ಮರುಕಳಿಸದಂತೆ ಒಗ್ಗಟ್ಟಿನಿಂದ ತಡೆಯಬೇಕಿದೆ. ಆಗ ಮಾತ್ರ ನಮ್ಮ ನಾಡಿಗೆ ಭ"ಷ್ಯ"ದೆ. ಇಲ್ಲದೆ ಹೋದಲ್ಲಿ ಇಬ್ಬರ ಜಗಳ ಮೂರನೆಯವನಿಗೆ ಲಾಭ.  


ಮಂಜುನಾಥ ಮ. ಜುನಗೊಂಡ 

"ಜಯಪುರ 



ಸುದ್ದಿ ಓದಿ