'ಕೇಂದ್ರ ಸರಕಾರದ ಮಹತ್ತರ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರ ಮೇಲಿದೆ'
ಲೋಕದರ್ಶನ ವರದಿ
ಇಂಡಿ 18: ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ ಎಂದು ಇಂಡಿ ಲೋಕ ಸಭಾ ಚುನಾವಣಾ ಸಂಘಟನಾ ಉಸ್ತುವಾರಿ ಬಿ.ಜೆ.ಪಿ. ಮುಖಂಡ ಸಂಗರಾಜ ದೇಸಾಯಿ ಹೇಳಿದರು.
ಅವರು ಬುಧವಾರ ಪಟ್ಟಣದ ಮಲ್ಲಿಕಾಜರ್ುನ ದೇವಸ್ಥಾನದ ಸಭಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಕೇಂದ್ರ ಸರಕಾರಗಳ ಯೋಜನೆಗಳನ್ನು ಪ್ರತಿಯೊಂದು ಮನೆ ಮನೆಗೆ ತಲುಪಿಸುವ ಮಹತ್ತರ ಜವಾಬ್ದಾರಿ ಬಿಜೆಪಿಯ ಪ್ರಮುಖರು ಹಾಗೂ ಕಾರ್ಯಕರ್ತರ ಮೇಲಿದೆ. ಅಂತರಾಷ್ಟ್ರ ಮಟ್ಟದಲ್ಲಿ ಭಾರತದ ಜಿಡಿಪಿ ಪ್ರತಿಶತ 31 ಇದ್ದರೆ, ಅಮೇರಿಕದ ಜಿಡಿಪಿ ಶೇ. 03 ರಷ್ಟಿದ್ದರೆ, ಪ್ರಾನ್ಸ್ ಹಿಂದಿಕ್ಕಿ ಭಾರತ 6ನೇ ಸ್ಥಾನಕ್ಕೇರಿದೆ.
ಇಂಡಿ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಸೋಲಿಗೆ ಕಾರಣಗಳೇನು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಮುಂಬರುವ ಎಲ್ಲ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅಣಿಯಾಗಲು ಕಾರ್ಯಕರ್ತರಿಗೆ ಸನ್ನದ್ದಗೊಳಿಸಲಾಗುವುದು ಎಂದು ಅವರು ಹೇಳಿದರು.
ಜಾತಿಗಿಂತ ಪಕ್ಷವೇ ಪ್ರಮುಖವಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಚುನಾವಣಾ ಪ್ರಚಾರಗಳಲ್ಲಿ ತೊಡಗಿಸಿಕೊಂಡು ಕಳೆದ ಚುನಾವಣೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯಥರ್ಿಗಳನ್ನು ಆಯ್ಕೆಗೊಳಿಸಲು ಮುಂದಾಗಬೇಕಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಆರ್.ಎಸ್.ಕುಚಬಾಳ, ವಿವೇಕ ಡಬ್ಬಿ, ಜಿಲ್ಲಾ ಕಾರ್ಯದಶರ್ಿ ರವಿಕಾಂತ ಬಗಲಿ, ಇಂಡಿ ಮಂಡಲ ಅದ್ಯಕ್ಷ ಕಾಸುಗೌಡ ಬಿರಾದಾರ ಜಿಲ್ಲಾ ಬಿ.ಜೆ.ಪಿ. ಉಪಾದ್ಯಕ್ಷ ದಯಾಸಾಗರ ಪಾಟೀಲ, ಮಲ್ಲಯ್ಯ ಪತ್ರಿಮಠ, ಬಿ.ಜೆ.ಪಿ. ಹಿರಿಯ ಮುಖಂಡ ಸಿದ್ದಲಿಂಗ ಹಂಜಗಿ, ಬಿ.ಜೆ.ಪಿ. ಹಿಂದುಳಿದವರ್ಗಗಳ ಜಿಲ್ಲಾ ಉಪಾದ್ಯಕ್ಷ ಶೀಲವಂತ ಉಮರಾಣಿ, ಬಿ.ಜೆ.ಪಿ. ಜಿಲ್ಲಾ ರೈತಮೋಚರ್ಾ ಅದ್ಯಕ್ಷ ಅನೀಲ ಜಮಾದಾರ, ಮಲ್ಲಿಕಾಜರ್ು ಕಿವುಡೆ, ಹಣಮಂತ್ರಾಯಗೌಡ ಪಾಟೀಲ, ಪುಟ್ಟುಗೌಡ ಪಾಟೀಲ, ಸುನೀಲ ರಬಶೆಟ್ಟಿ, ಡಾ. ಸುಹಾಸಿನಿ ವಸ್ತ್ರದ, ದೇವೇಂದ್ರ ಕುಂಬಾರ, ಶಿವಾನಂದ ಕುಂಬಾರ ಸೇರಿದಂತೆ ಅನೇಕರು ಇದ್ದರು