ವಿಜಯಪುರ

‘ಯಶಸ್ಸು ಎನ್ನುವುದು ಸತತ ಪ್ರಯತ್ನ ಶ್ರದ್ಧೆ, ಏಕಾಗ್ರತೆಯ ಫಲ’

‘ಯಶಸ್ಸು ಎನ್ನುವುದು ಸತತ ಪ್ರಯತ್ನ ಶ್ರದ್ಧೆ, ಏಕಾಗ್ರತೆಯ ಫಲ’

ದೇವರಹಿಪ್ಪರಗಿ 08: ಯಶಸ್ಸು ಎನ್ನುವುದು ಒಂದೇ ರಾತ್ರಿಯಲ್ಲಿ ದಕ್ಕುವುದಲ್ಲ ಸತತ ಪ್ರಯತ್ನ, ಧನಾತ್ಮಕ ಚಿಂತನೆ, ಶ್ರದ್ಧೆ, ಏಕಾಗ್ರತೆ ಇದ್ದಲ್ಲಿ ನಾವು ಯಶಸ್ವಿಯಾಗಲು ಸಾಧ್ಯ ಎಂದು ಚಡಚಣ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಂತೋಷ ಪಾಟೀಲ ಹೇಳಿದರು.  

ಪಟ್ಟಣದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿ ಪೂರ್ವ ಮಹಾವಿಧ್ಯಾಲಯ ಶನಿವಾರ ಹಮ್ಮಿಕೊಂಡ ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳ ಶುಭ ಹಾರೈಕೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಹಕ್ಕಿಯಂತೆ ಹಾರೊದನ್ನ ಕಲ್ತಿದ್ದೆವೆ, ಮೀನಿನಂತೆ ಇಸೊದನ್ನ ಕಲ್ತಿದ್ದೇವೆ ಆದರೆ ಮಾನವ ಮಾನವೀಯ ಮೌಲ್ಯಗಳನ್ನೇ ಗಾಳಿಗೆ ತೂರಿ ನಮ್ಮ ಸಂಸ್ಕೃತಿಯನ್ನು ಮರೆತ್ತಿದ್ದೆವೆ, ಕುವೆಂಪು ಅವರು ಹೇಳಿದಂತೆ ನೀ ಏನಾದರು ಆಗೂ ಮೋದಲು ಮಾನವನಾಗು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಸ್ಥಳೀಯ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷರಾದ ಜಿ.ಬಿ.ಸಾಲಕ್ಕಿ ಅವರು ಮಾತನಾಡಿ,ಮಕ್ಕಳ ಶಿಕ್ಷಣ ಮತ್ತು ವ್ಯಕ್ತಿತ್ವ ರೂಪಿಸುವಲ್ಲಿ ತಾಯಿಯು ಮೊದಲ ಗುರುವಾಗಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾಳೆ. ಸಂಸ್ಥೆಯ ಬೆಳವಣಿಗೆಯಲ್ಲಿ ನಿವೃತ್ತ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಕಳೆದ ಬಾರಿ ಪರೀಕ್ಷೆಯಲ್ಲಿ ಜಿಲ್ಲೆಯ ಕಳಪೆ ಸಾಧನೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.ಸಾನಿಧ್ಯವನ್ನು ಸ್ಥಳೀಯ ಗದ್ದುಗೆಮಠದ ಮಹಾಂತಮಹಾಸ್ವಾಮಿಗಳು ವಹಿಸಿ ಮಾತನಾಡಿದ ಅವರು ,ವಿಧ್ಯಾರ್ಥಿಗಳಿಗೆ ಜನ್ಮ ನೀಡಿದ ತಂದೆ ತಾಯಿ, ವಿದ್ಯೆ ಕಲಿಸಿದ ಶಿಕ್ಷಕ, ಅನ್ನ ನೀಡಿದ ರೈತ ಹಾಗೂ ದೇಶ ಕಾಯೂವ ಸೈನಿಕ  ಆದರ್ಶ ನಾಯಕನಾಗಬೇಕು. ಬದುಕು ಹೆತ್ತವರು ಹೆಮ್ಮೆ ಪಡುವಂತೆ, ಶತ್ರುಗಳು ಶಹಬ್ಬಾಸ ಎನ್ನುವಂತೆ ಇರಬೇಕು ಎಂದು  ಹೇಳಿದರು. 

ಪ್ರಾಚಾರ್ಯ ವ್ಹಿ.ಜಿ. ಹೂನಳ್ಳಿ,  ಮುಳಸಾವಳಗಿ ಪ್ರೌಢಶಾಲೆಯ ಆಯ್‌.ಎಸ್‌.ನರೂಣಿ ಮಾತನಾಡಿದರು. ದ್ವೀತಿಯ ಪಿಯುಸಿ ವಿಧ್ಯಾರ್ಥಿಗಳು ತಮ್ಮ ಅನಸಿಕೆ ಹಂಚಿಕೊಂಡರು.  

ಇದೇ ಸಂಧರ್ಭದಲ್ಲಿ ಸಲಹಾ ಸಮಿತಿ ಸದಸ್ಯ ಕಾಶಿನಾಥ ಸಾಲಕ್ಕಿ, ಅಭಿಜಿತ ತಡಪಟ್ಟಿ, ಸಾಯಿಬಣ್ಣ ಬಿರಾದಾರ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು, ಗಣ್ಯ ವ್ಯಾಪರಸ್ಥರಾದ ಶರಣಪ್ಪ ಸಾಲಕ್ಕಿ ಬೋದಕ ಸಿಬ್ಬಂದಿಗಳಾದ ವ್ಹಿ.ಆರ್ ಹಿರೇಮಠ, ವ್ಹಿ.ಆರ್‌.ಪಾಟೀಲ, ಕೆ.ವ್ಹಿ.ಒಡೆಯರ, ಕಿರಣ ಮೆಟಗಾರ, ಕೆ.ವ್ಹಿ.ಸಾಲಿಮಠ, ಬೋಧಕೇತರ ಸಿಬ್ಬಂಧಿ ಎಮ್‌.ಬಿ.ತಹಸಿಲ್ದಾರ, ಬಿ.ಎಮ್‌.ಬುಜರಿ, ಡಿ.ಡಿ. ಜನಗೊಂಡ ವಿಧ್ಯಾರ್ಥಿ ಪ್ರತಿನಿಧಿ ಪ್ರಜ್ವಲ ನಾಲತವಾಡ ಹಾಗೂ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಇದ್ದರು. 


ಸುದ್ದಿ ಓದಿ