’ತಂಬಾಕು ತ್ಯಜಿಸಿ ಯುವಕರಿಂದಲೇ ತಂಬಾಕು ಮುಕ್ತ ದೇಶವನ್ನಾಗಿ ಕಟ್ಟಿ" ವಿಜಯಲಕ್ಷ್ಮಿ
’ತಂಬಾಕು ತ್ಯಜಿಸಿ ಯುವಕರಿಂದಲೇ ತಂಬಾಕು ಮುಕ್ತ ದೇಶವನ್ನಾಗಿ ಕಟ್ಟಿ" ವಿಜಯಲಕ್ಷ್ಮಿ
ಬಳ್ಳಾರಿ 30: ನಗರದಲ್ಲಿ ವಿಶ್ವ ತಂಬಾಕು ದಿನದ ಅಂಗವಾಗಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಮತ್ತು ವೀರಶೈವ ಕಾಲೇಜ್ ಓಖಖ ಜೊತೆಗೂಡಿ ವೀರಶೈವ ಪದವಿ ಕಾಲೇಜಿನಲ್ಲಿ ವಿಚಾರ ಸಂಕಿರ್ಣ ಅಮ್ಮಿಕೊಂಡಿತ್ತು.ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಶ್ರೀಯುತ ಟಿ ಜಿ ವಿಠ್ಠಲ್ ಅದ್ಯಕ್ಷರು ಈಕಂಋ ತಂಬಾಕು ಜೀವನವನ್ನು ಸುಡುತ್ತದೆ ಅದರ ಪರಿಣಾಮ ನಿಮ್ಮ ಇಡೀ ಜೀವನವನ್ನೇ ಹಾಳು ಮಾಡುತ್ತದೆ ಯಾವದೋ ಜಾಹೀರಾತನ್ನು ನೋಡಿ ಮಾರುಹೋಗಿ ತಂಬಾಕು ಸೇವನೆ ಮಾಡಿ ಜೀವ ಕಳೆದುಕೊಳ್ಳಬೇಡಿ ದಯವಿಟ್ಟು ತಂಬಾಕು ತ್ಯಜಿಸಿ ಉತ್ತಮ ಜೀವನ ನಿಮ್ಮದಾಗಿಸಿಕೊಳ್ಳಿ ಎಂದು ನೆರದಂತ ಯುವಕರಿಗೆ ಹೇಳಿದರು.
ನಂತರದಲ್ಲಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಮಾಣಿಕ್ ರಾವ್ ಕುಲಕರ್ಣಿ ಓಓಅಓ ಅಧ್ಯಕ್ಷರು ಇವರು ಮಾತನಾಡುತ್ತಾ ತಂಬಾಕು ಸೇವನೆ ಇಂದ ಏನೆಲ್ಲಾ ರೋಗಗಳು ಬರುತ್ತವೆ ಅದು ಹೇಗೆ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ತಂಬಾಕು ಸೇವೇನೆ ಬಿಡುವುದಕ್ಕೆ ಏನು ಕ್ರಮಗಳನ್ನು ವಹಿಸಬೇಕು ಎನ್ನುವುದರ ಮಾಹಿತಿಯನ್ನು ವಿವರವಾಗಿ ನೀಡಿದರು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಶ್ರೀಮತಿ ಮಾಲ ಪ್ರಾದ್ಯಾಪಕರು ವೀರಶೈವ ಕಾಲೇಜ್ ಇವರು ಕಾರ್ಯಕ್ರಮದ ಕುರಿತು ಮಾತನಾಡಿ ವಿದ್ಯಾರ್ಥಿಗಳೇ ಇವತ್ತಿನ ಈ ಕಾರ್ಯಕ್ರಮ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಇಲ್ಲಿ ಸಿಕ್ಕಂತಹ ಮಾಹಿತಿಯನ್ನು ಆದಷ್ಟು ಸ್ನೇಹಿತರು ಮತ್ತು ಸಮಾಜದ ಜನರ ಹತ್ತಿರ ಹಂಚಿಕೊಳ್ಳಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಖ .ವಿಜಯಲಕ್ಷ್ಮಿ ವ್ಯವಸ್ಥಾಪಕರು ಈಕಂಋ ವಾಸ್ತವಿಕ ನುಡಿಗಳನ್ನು ನುಡಿಯುತ್ತ ತಂಬಾಕುಮುಕ್ತ ದೇಶನಕಟ್ಟುವುದಕ್ಕೆ ಯುವಕರೇ ಮುಂದಾಳತ್ವವನ್ನು ವಹಿಸಬೇಕು ಆಗಿದ್ದಾಗ ಮಾತ್ರ ತಂಬಾಕುಮುಕ್ತ ದೇಶದ ಕನಸು ನನಸಾಗುತ್ತದೆ ಎಂದು ಹೇಳಿದರು.
ಹಾಗೂ ಬ್ರಮಾರಂಭ ಉಪನ್ಯಾಸಕರು ಹಾಗೂ ಅವರು ಯುವಕರೇ ಜಾಗೃತಿಯಾಗಿರಿ ನಿಮ್ಮ ಹಣದಿಂದ ನಿಮ್ಮ ಆರೋಗ್ಯ ಹಾಳು ಮಾಡುವಂತ ತಂಬಾಕು ಸೇವನೆ ಮಾಡಬೇಡಿ ತಂಬಾಕು ತ್ಯಜಿಸಿ ತಂಬಾಕು ಮುಕ್ತ ಸಮಾಜ ನಿರ್ಮಾಣ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು .ಕಾರ್ಯಕ್ರಮದಲ್ಲಿ ಈಕಂಋ ನ ಕಾರ್ಯಕ್ರಮಾಧಿಕರಿ ಬಸವರಾಜ್ ನಿರೂಪಣೆ ಮಾಡಿದರು ಮತ್ತು ಈಕಂಋ ಹಾಗೂ ವೀರಶೈವ ಕಾಲೇಜಿನ ಸಿಬ್ಬಂದಿ ಜೊತೆಗೆ 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.