ರಾಷ್ಟ್ರೀಯ

“ಪಂದ್ಯದ ಮೇಲೆ ನಮ್ಮ ಚಿತ್ತ, ಶಕೀಬ್ ಅನುಪಸ್ಥಿತಿಯ ಮೇಲಲ್ಲ”

“ಪಂದ್ಯದ ಮೇಲೆ ನಮ್ಮ ಚಿತ್ತ, ಶಕೀಬ್ ಅನುಪಸ್ಥಿತಿಯ ಮೇಲಲ್ಲ”

  ನವದೆಹಲಿ, ನ.2: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಬಾಂಗ್ಲಾದೇಶದ ಸ್ಟಾರ್ ಆಟಗಾರ ಶಕೀಬ್ ಅಲ್ ಹಸನ್ ಅವರ ಮೇಲೆ ನಿಷೇಧ ಹೇರಿದ್ದು, ಅವರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಮಿಂಚುವ ಅವಶ್ಯಕತೆ ಇದೆ ಎಂದು ಬಾಂಗ್ಲಾದೇಶದ ಟಿ-20 ನಾಯಕ ಮಹಮುದುಲ್ಲ ತಿಳಿಸಿದ್ದಾರೆ.

  ಶಕೀಬ್ ಅವರಂತಹ ಆಟಗಾರ ಒಂದೇ ದಿನದಲ್ಲಿ ಹುಟ್ಟಲು ಸಾಧ್ಯವಿಲ್ಲ ಎಂಬುದು ಗೊತ್ತಿದೆ. ಆದರೆ, ಅವರ ಅನುಪಸ್ಥಿತಿಯ ಲಾಭವನ್ನು ಯುವ ಆಟಗಾರರು ಪಡೆಯಬೇಕಿದೆ ಎಂದಿದ್ದಾರೆ.

  ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು ವಾಯು ಮಲಿನವಾಗಿದ್ದು, ಯಾರ ಕೈಯಲ್ಲಿನ ಸೊತ್ತೂ ಅಲ್ಲ ಪಂದ್ಯದ ಬಗ್ಗೆ ನಮ್ಮ ರೂಪರೇಷೆ ಪಕ್ಕಾ ಇದೆ. ಬಾಂಗ್ಲಾ ಪರ ಶಕೀಬ್ ಸ್ಟಾರ್ ಆಟಗಾರ. ಅವರು ತಪ್ಪು ಮಾಡಿದ್ದಾರೆ, ಆದರೆ ಅಪರಾಧ ಎಸೆಗಿಲ್ಲ ಎಂದು ಹೇಳಿದ್ದಾರೆ.

  “ಶಕೀಬ್ ಅವರೊಂದಿಗೆ ಆಡಿದ ಅನುಭವವಿದೆ. ಅವರು ತಂಡವನ್ನು ಮುನ್ನಡೆಸಿದ ರೀತಿ ಮೆಚ್ಚುಗೆ ಪಾತ್ರವಾಗಿದೆ. ನನ್ನಲ್ಲಿನ ಮುಂದಾಳುವನ್ನು ಹೊರ ತೆಗೆಯಲು ಇದು ಉತ್ತಮ ವೇದಿಕೆಯಾಗಿದೆ” ಎಂದಿದ್ದಾರೆ.

  ಭಾರತ ಹಾಗೂ ಬಾಂಗ್ಲಾದೇಶ ನಡುವೆ ಮೊದಲ ಟಿ-20 ಪಂದ್ಯ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದರು. ವಾಯುಮಾಲಿನ್ಯದಿಂದ ಪಂದ್ಯ ದೆಹಲಿಯಲ್ಲಿ ನಡೆಯುತ್ತದೋ ಇಲ್ಲವೋ ಎಂಬ ಗೊಂದಲಕ್ಕೆ ದಾದಾ ತೆರೆ ಎಳೆದಿದ್ದರು. 

ಸುದ್ದಿ ಓದಿ