ಲೇಖನಗಳು

"ಅಸಾಮಾನ್ಯ ಚೇತನ ನರೇಂದ್ರ ಮೋದಿ"

"ಅಸಾಮಾನ್ಯ ಚೇತನ ನರೇಂದ್ರ ಮೋದಿ"

ಭಾರತ ಮಾತೆಯ ಮಡಿಲು ಬಹು ಪವಿತ್ರವಾಗಿದೆ. ಗಟ್ಟಿ ಫಲಗಳು ಆಗಾಗ ಹುಟ್ಟಿ ಬರುತ್ತಿವೆ ಎಂಬುದಕ್ಕೆ ಮುಂದೆ ತಿರುಗಿ ನೋಡಿದಾಗ ಈ ದೇಶದಮೇಲೆ ಗ್ರೀಕರು, ಹೂಣರು, ಮಂಗೋಲಿಯನ್‌ರು, ಅರಬ್ಬರು, ಬ್ರಿಟಿಷರು ಹೀಗೆ ಹಲವಾರು ವೀದೇಶಿ ಆಕ್ರಮಣಕಾರರು ದಾಳಿ ಮಾಡಿ ಭವ್ಯ ಭಾರತದ ಸಂಪತ್ತನ್ನು ಲೂಟಿ ಮಾಡಿದರು. ತರುಣಿಯರ ಮಾನಭಂಗ ಮಾಡಿದರು. ಸಾಮಾಜಿಕ ನೆಮ್ಮದಿಯನ್ನು ಹಾಳು ಮಾಡಿದರು. ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಧಾಮಿರ್ಕವಾಗಿ ಕೆಲವು ಕಾಲ ಕುಗ್ಗಿದರೂ ಕೂಡಾ ಭಾರತ ಮಾತೆಯ ಮಕ್ಕಳು ತಮ್ಮ ಅಂತಃಸತ್ವವನ್ನು, ಅಸ್ಮಿತೆಯನ್ನು ಉಳಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಬೃಹತ್‌ವಾದ ದೇಶದ ಸೇನಾನಿ ನರೇಂದ್ರ ಮೋದಿಯೇ ಉದಾಹರಣೆ ಎನ್ನಬಹುದು. 

2014 ರಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಅಭಿವೃದ್ಧಿಯ ಹರಿಕಾರನಾದ, "ಸಬ್ ಕಾ ಸಾತ್ ಸಬ್ ಕಾ ವಿಕಾಸ" ಎಂಬ ತತ್ವವನ್ನು ಅಳವಡಿಸಿಕೊಂಡು "ಜೈ ಜವಾನ ಜೈ ಕಿಸಾನ್" ಜೊತೆಗೆ "ಜೈ ವಿಜ್ಞಾನ" ಎಂದು ಘೋಸುವುದರೊಂದಿಗೆ ಈ ದೇಶದ ರಕ್ಷಣೆ ಮಾಡುವ ಜವಾನರನ್ನು ಈ ದೇಶದ ಜನರ ಹೊಟ್ಟೆಗೆ ಅನ್ನ ನೀಡುವ ರೈತರನ್ನು ಹಾಗೂ ಈ ದೇಶದ ರಕ್ಷಣೆಗಾಗಿ ಹೊಸ ಹೊಸ ಜೈವಿಕ ಅಸ್ತ್ರಗಳನ್ನು ತಯಾರಿಸುವ, ಹೊಸ ತಂತ್ರಜ್ಞಾನಗಳ ಮೂಲಕ ಅಭಿವೃದ್ಧಿಗೊಳಿಸುವ ಇಸ್ರೋ ವಿಜ್ಞಾನಿಗಳ ಶ್ರಮದಿಂದ ನೂರಾರು ಉಪಗ್ರಹಗಳನ್ನು ಉಡಾಯಿಸಬಲ್ಲ ಸಾಮರ್ಥ್ಯ ಪಡೆದಂತಹ ಹಾಗೂ ಹತ್ತಾರು ಯೋಜನೆಗಳನ್ನು ಚಲಾವಣೆಗೆ ತರುವ ವಿಜ್ಞಾನಿಗಳನ್ನು ಗೌರವಿಸುವ ಮೂಲಕ ಘೋಷಣೆ ಮಾಡಿದ ಧೀಮಂತ ರಾಷ್ಟ್ರ ಪ್ರೇಮಿ  ನಮ್ಮ ಮೋದಿ. 70 ವರ್ಷಗಳಿಂದ ದೇಶದ ಸಂಪತ್ತನ್ನು ಲೂಟಿಗೊಳಿಸುತ್ತ ನಕಲಿ ನೋಟಗಳನ್ನು ಚಲಾವಣೆಗೆ ತಂದು ರೂಪಾು ಮೌಲ್ಯವನ್ನು ಕುಸಿಯುವಂತೆ ಮಾಡುವ ದೇಶದ್ರೋಹಿಗಳಿಗೆ ಭ್ರಷ್ಟ ರಾಜಕಾರಣಿಗಳಿಗೆ ಚಳ್ಳೆಹಣ್ಣು ತಿನ್ನಿಸಲು ನೋಟು ಅಮಾನ್ಯಿಕರಣ ಮಾಡಿದ್ದು ಕಪ್ಪು ಹಣದ ವಿರುದ್ಧ ಕ್ರಮ ಕೈಕೊಂಡದ್ದು ಸಾಧಾರಣ ಕೆಲಸವಲ್ಲ. ಸುಮಾರು 5 ಶತಮಾನಗಳಕಾಲ ನೆನಗುದಿಗೆ ಬಿದ್ದಂತ ರಾಮಜನ್ಮ ಭೂಮಿಯ ವಿಷಯವನ್ನು ಅತ್ಯಂತ ಚಾಣಾಕ್ಷತೆುಂದ ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿದ್ದು, ವಿವಾದಿತ ಜಾಗವನ್ನು ಹೊರತುಪಡಿಸಿ ಉಳಿದ 67 ಎಕರೆ ಭೂಮಿಯನ್ನು ರಾಮಮಂದಿರ ನ್ಯಾಸ ಟ್ರಸ್ಟ್‌ಗೆ ಹಸ್ತಾಂತರಿಸಿದ್ದು, ರಾಮಮಂದಿರವನ್ನು ಇಡೀ ವಿಶ್ವದಲ್ಲಿಯೇ ದೊಡ್ಡದಾದ ಹಾಗೂ ವಿಶಿಷ್ಟ ವಿನ್ಯಾಸಗಳಿಂದ ಕೂಡಿದ ಭವ್ಯ ದೇಗುಲಕ್ಕೆ ನಾಂದಿ ಹಾಡಿದ್ದು ಸಾಮಾನ್ಯವೇ? ಕಲುತಗೊಂಡು ಹರಿಯುತ್ತಿದ್ದ ಪವಿತ್ರ ಗಂಗಾ ನದಿಯ ಸ್ವಚ್ಛತೆಗಾಗಿ 9.934 ಕೋಟಿ ಮೀಸಲಾಗಿಟ್ಟದ್ದು ನದಿಯ ದಂಡೆಯಲ್ಲಿರುವ ಊರುಗಳಿಂದ ಕೊಳಚೆ ನೀರು ಸೇರದಂತೆ ಸ್ಥಗಿತಗೊಳಿಸಿದ್ದು, ವಿಶ್ವಮಟ್ಟದಲ್ಲಿ ನೀಡುವ ಸಿಯೋಲ್ ಶಾಂತಿ ಪ್ರಶಸ್ತಿ ನರೇಂದ್ರ ಮೋದಿಗೆ ದೊರಕಿದಾಗ 2,00,000 ಡಾಲರ್ ಮೊತ್ತವನ್ನು ತನಗಾಗಿ ಉಪಯೋಗಿಸದೇ ಗಂಗಾ ಶುದ್ಧಿಕರಣ ಯೋಜನೆಗೆ ನೀಡಿದ್ದು ಒಂದಾದರೆ 2015 ರಿಂದ ಇಲ್ಲಿಯವರೆಗೂ ತನಗೆ ಬಂದ ಉಡುಗೊರೆಗಳನ್ನು ಹರಾಜಮಾಡಿ ನಮಾಮಿ  ಗಂಗೆ ಯೋಜನೆಗೆ ಅರ್ಪಸುತ್ತಿರುವ ಅಪ್ಪಟ ದೇಶಪ್ರೇಮಿ ಈ ಮೋದಿ. 

1962ರಲ್ಲಿ ಜವಾಹರಲಾಲ ನೆಹರೂ ಅವರ ಮುಖಂಡತ್ವದಲ್ಲಿ ಹಿನಾಯವಾಗಿ ಚೀನಾದ ಎದುರು ಸೋತ ಸೈನಕರ ಸ್ಥಿತಿಗತಿ ಏನಿತ್ತು? ಅವರು ಯಾಕೆ ಸೋತರು? ಎಂಬುದನ್ನು ಅಧ್ಯಯನ ಮಾಡಿದ ರಾಷ್ಟ್ರಭಕ್ತ ನರೇಂದ್ರ ಮೋದಿಯವರು ಸೈನಿಕರಿಗೆ ಧೈರ್ಯ ಸ್ಥೈರ್ಯ ತುಂಬಲು ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಬರವಸೆ ಮೂಡಿಸಲು ದೀಪಾವಳಿ ಹಬ್ಬವನ್ನು ಅವರೊಂದಿಗೆ ಆಚರಿಸುತ್ತಾ ಇರುವುದು. ಅಲ್ಲದೇ ಬಲಿಷ್ಠ ಸೈನ್ಯ ಪಡೆಯನ್ನು ಕಟ್ಟುವಲ್ಲಿ ಖಾಲಿ ಇರುವ 57 ಸಾವಿರ ಹುದ್ದೆಗಳನ್ನು ತುಂಬಿಕೊಂಡು 'ನಾನು ಕೂಡಾ ದೇಶ ಕಾಯುವ ಚೌಕಿದಾರ' ಎಂದು ಹೆಮ್ಮೆುಂದ ಹೇಳಿದ ಭೂಪ. ಅಧುನಿಕ ಶಸ್ತ್ರಾಸ್ತ್ರಗಳನ್ನು ನಮ್ಮ ದೇಶದಲ್ಲಿಯೇ ಉತ್ಪಾದಿಸುವ ಕಾರ್ಯ ಕೈಕೊಂಡನು. ಸೈನಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸಿದ್ದು, ಸೈನಿಕರ ಮಕ್ಕಳಿಗೆ ವಸತಿ ಮತ್ತು "ದ್ಯಾಭ್ಯಾಸದಲ್ಲಿ "ುಸಲಾತಿ, ಸೈನಿಕರ ಮುಖ್ಯಸ್ಥರಿಗೆ ಪೂರ್ಣ ಸ್ವಾತಂತ್ರ್ಯ ನೀಡಿ ತುರ್ತು ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಮೂರು ವರ್ಷದಲ್ಲೇ ಬಾಕಿ ಇದ್ದ ಸೈನ್ಯದ ಅತ್ಯಗತ್ಯ ವಸ್ತುಗಳ ಪೂರೈಸಲು ನಾಲ್ಕು ಲಕ್ಷಕೋಟಿ ಹಣ ಖರ್ಚುಮಾಡಿ ಸೈನ್ಯ ಸಜ್ಜುಗೊಳಿಸಿದ ಧೀಮಂತ ನಾಯಕ ಈ ಮೋದಿಯನ್ನಬಹುದು. ಮೂರು ವಿಭಾಗಗಳ ಸೈನ್ಯಕ್ಕೆ ಹೊಸ ರೈಫಲ್ (ಮಾರಕ) ಹಾಗೂ ಸೇನೆಗೆ ಆಧುನಿಕ 5,719 ಹೊಸ ಸ್ನೈಫರ್ ರೈಫಲ್ ಅಲ್ಲದೆ 9,100 ಕೋಟಿ ಹಣದಿಂದ ಆಧುನಿಕ ಆಕಾಶ ಕ್ಷಿಪಣಿ ಖರೀದಿಸಿ ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾ ಗಡಿಂದ ನುಸುಳಕೊರರನ್ನು ನಿಯಂತ್ರಿಸಿದ್ದು AH -64 ಎ ಅಪಾಚೆ ಮಾರಕ ಸಾಮರ್ಥ್ಯದ 22 ಹೆಲಿಕ್ಯಾಪ್ಟರ ಮತ್ತು 8.7 ಬಿಲಿಯನ್ ಮೊತ್ತದ 36 ಯುದ್ಧಕ್ಕೆ ಸಜ್ಜಾದ ವಿಮಾನಗಳ ಖರೀದಿ ಒಪ್ಪಂದ, 2 ಬಿಲಿಯನ್ ವೆಚ್ಛದಲ್ಲಿ ಇಸ್ರೇಲ್ನಿಂದ ಮೀಸೈಲ್, 750 ಕೋಟಿ ವೆಚ್ಛದಲ್ಲಿ 145 ಅತಿ ಹಗುರ ಹೌವಿತ್ಜರ್ ಆರ್ಟಿಲಾರಿ, 100 0-9 ವಜ್ರ ಆರ್ಟಿಲರಿ ಬಂದುಕು ಖರೀದಿಸಲು ಮುಂದಾಗಿರುವುದಲ್ಲದೆ ಕ್ರಿವಾಕ್‌-111 ಶ್ರೇಣಿ 2ರ ಯುದ್ಧ ನೌಕೆ ಖರೀದಿಸಲು ಒಪ್ಪಂದ, ಅಲ್ಲದೇ ಇದೇ ದಿನಾಂಕ 04-06-2021 ರಂದು ರಕ್ಷಣಾ ವ್ಯವಸ್ಥೆಗೆ 50 ಸಾವಿರ ಕೋಟಿ ಮೌಲ್ಯದ 6 ಜಲಾಂತರ್ಗಾ"ು ನೌಕೆಗಳನ್ನು ಹೊಂದಲು 43 ಸಾವಿರಕೋಟಿ ಹಾಗೂ 6.800 ಕೋಟಿ ಮೌಲ್ಯಗಳ ಯುದ್ಧೋಪಕರಣ ಸಂಗ್ರಹದ ಯೋಜನೆಗೂ ರಕ್ಷಣಾ ಸಚಿವ ರಾಜನಾರ್ಥಸಿಂಗ್ ಅವರಿಗೆ ಒಪ್ಪಿಗೆ ನೀಡಿದ್ದು, ಮೇಕ್ ಇನ್ ಇಂಡಿಯಾ ಪ್ರಾಜೆಕ್ಟ ನಡಿಯಲ್ಲಿ ನೌಕಾಪಡೆಯ ಸಬ್‌-ಮರಿನ್ ಖರೀದಿ, 24 ಹೊಸ ಜಲಾಂತರ್ಗಾಮಿಗಳನ್ನು ಖರೀದಿಸುವ ಯೋಜನೆ, ಆರು ನೌಕೆಗಳು ಅಣ್ವಸ್ತ್ರ ದಾಳಿ ನಡೆಸಬಲ್ಲ ಸಾಮರ್ಥ್ಯಯುಳ್ಳ ಸ್ವದೇಶಿ ರಕ್ಷಣಾ ಉತ್ಪಾದಕರ ನೆರ"ನೊಂದಿಗೆ ನಿಮಿರ್ಸಲು ಮೋದಿ ಸರ್ಕಾರ ಉದ್ದೇಶಿಸಿದೆ. ಚೀನಾದ ದಾಳಿಯನ್ನು ಏದುರಿಸಲು ಹೊಸ ಅತ್ಯಾಧುನಿಕ ಸಬ್ ಮೆರಿನ್ ಐ.ಎನ್‌.ಎಸ್ ಚಕ್ರ ಎಂಬ ಹೆಸರಿನಲ್ಲಿ 300 ಕೋಟಿ ಡಾಲರ್ ಒಪ್ಪಂದದಂತೆ 2025ಕ್ಕೆ ನೌಕಾಪಡೆಗೆ ಸೇರ್ಪಡೆಯಾಗಲಿದೆ. "ಹೀಗೆ ಹಲವಾರು ಕನಸುಗಾರ ನಮ್ಮ ಮೋದಿ ಸಾಮಾನ್ಯನಲ್ಲ.  

1962ರಲ್ಲಿ ಸೈನಿಕರಿಗೆ ಆದ ತೊಂದರೆ ಎಳ್ಳಷ್ಟು ಆಗಬಾರದೆಂಬ ದೂರದ್ಟೃವುಳ್ಳ ಮೋದಿ ಸೈನಿಕರಿಗೆ ಗುಂಡು ನಿರೋಧಕ ಜಾಕೇಟ (1,86,138 ಸೈನಿಕರಿಗೆ), ಇನ್ನೂ 1,58000 ಸೈನಿಕರಿಗೆ ಗುಂಡು ನಿರೋಧಕ ಹೆಲ್ಮೆಟ್ ಒದಗಿಸಿದ್ದಾನೆ.  

ಸೈನಿಕರಿಗೆ ಶೀತ ನಿರೋಧಕ ಆಧುನಿಕ ಉಡುಪು, ಸತ್ವಭರಿತ ಆಹಾರ ನೀಡುವುದು ದೇಶಿ ನಿಮಿರ್ತ ಗನ್ ನಿರ್ಮಾಣ, 6,700 ಕೋಟಿ ಮೊತ್ತದ 4 ಜಲಾಂರ್ಗಾಮಿ  ನಿರೋಧಕ ಬೋಯಿಂಗ್  ಈಗಾಗಲೆ ಸೈನ್ಯದಲ್ಲಿ ಇದೆ. ಹೀಗೆ ಸಹಸ್ರಾರು ಕೋಟಿ ಹಣವನ್ನು ನೀರಿನಂತೆ ಖರ್ಚುಮಾಡಿ ನಾಗಾ ಉಗ್ರರನ್ನು, ಪಾಕಿಸ್ತಾನಿ ಉಗ್ರರನ್ನು ಬಗ್ಗು ಬಡೆದಿದ್ದು ಒಂದು ದಾಖಲೆ. ಡೊಕ್ಲಂನಿಂದ ಚೀನಾ ಸೈನ್ಯವನ್ನು ಹಿಮ್ಮೆಟ್ಟಿಸಿ ಅರುಣಾಚಲ ಪ್ರದೇಶವನ್ನು ಸುರಕ್ಷಿತ ಮಾಡಿದ್ದು ಮತ್ತು ಲಡಾಖನ್ನು ನುಂಗಬೇಕೆಂಬ ಚೀನಾದ ಕನಸನ್ನು ನುಚ್ಚುನೂರು ಮಾಡಿದ್ದು ಹಾಗೂ ಕಳೆದ ವರ್ಷ ಎಪ್ರೀಲ್‌-ಮೇ ತಿಂಗಳಲ್ಲಿ ಪ್ಯಾಂಗಾಂಗ್ ಸರೋವರದ ದಂಡೆಯಗುಂಟ ಸುಮಾರು 50 ಸಾವಿರಕ್ಕೂ ಹೆಚ್ಚು ಯೋಧರನ್ನು ನಿಲ್ಲಿಸಿದ್ದು, ಕಾಲು ಕೆರೆದು ಗಡಿಯನ್ನು ಛೇದಿಸಿ ನಮ್ಮ ಪ್ರದೇಶಗಳಲ್ಲಿ ಒಳಬರಲು ಹವಣಿಸಿದ್ದು ನಮ್ಮ ಸೈನಿಕರು ಅದನ್ನು ತಡೆದು ಚೀನಾದ 20 ಸೈನಿಕರನ್ನು ಹತ್ಯೆಗೈದದ್ದು ಒಂದು ಮೈಲಿಗಲ್ಲು ಎನ್ನಬಹುದು. ಇನ್ನು ನಕ್ಸಲರನ್ನು ಹಣ್ಣು ಮಾಡಿದ್ದು, ಮುಖ್ಯವಾಗಿ ಹೇಳಬೇಕೆಂದರೆ ಮಹಿಳೆಯರ ಮಾನ ಪ್ರಾಣ ಕಾಪಾಡಲು ಅತ್ಯಾಚಾರಿಗಳಿಗೆ ಮರಣ ದಂಡನೆಯಂತಹ ಕಠಿಣ ಕಾನೂನು ತಂದದ್ದು, ಮುಸ್ಲಿಮ್ ಹೆಣ್ಣುಮಕ್ಕಳಿಗೆ ಸ್ವಯಂ ಹಜ್‌ಯಾತ್ರೆಗೆ ಅವಕಾಶ ಮಾಡಿಕೊಟ್ಟ ಪರಧರ್ಮ ಸಹಿಷ್ಟು ನಮ್ಮ ಪ್ರಧಾನಿ. ಅಲ್ಲದೆ ಹಲವಾರು ಶತಮಾನಗಳಿಂದ ಶರಿಯತ್ ಕಾನೂನಿನ ಪ್ರಕಾರ ಮುಸ್ಲಿಮ್ ಹೆಣ್ಣುಮಕ್ಕಳಿಗೆ ತ್ರಿವಳಿ ತಲ್ಲಾಕ್ ಕೊಡುವ ಅಮಾನುಷ್ಯ ಕಾಯ್ದೆಯನ್ನು ತೆಗೆದು ಹಾಕಿದ್ದು ಒಂದಾದರೆ, ಜಮ್ಮು-ಕಾಶ್ಮೀರದಲ್ಲಿ ಇದ್ದ 370ರ ಸಂವಿಧಾನದ ಪರಿಚ್ಛೆದವನ್ನೂ ಹಾಗೂ 35 Act A  ಕಾನೂನನ್ನೂ ತೆಗೆದುಹಾಕಿ ಲಡಾಖ, ಜಮ್ಮು, ಕಾಶ್ಮೀರಗಳನ್ನು ವಿಂಗಡಿಸಿ ರಾಜ್ಯಗಳ ಸ್ಥಾನಮಾನ ನೀಡಿ ಇಡೀ ಹಿಂದೂಸ್ಥಾನಕ್ಕೆ ಒಂದೇ ಕಾನೂನನ್ನು ಜಾರಿಗೊಳಿಸಿದ್ದು ಗಂಡೆದೆಯ ಗಂಡಿಗೆ ಮಾತ್ರ ಸಾಧ್ಯ. ಅಷ್ಟು ಕಠಿಣ ಹೃದಯದ, ಸದೃಢ ಮನಸ್ಸಿನ ಪ್ರಖ್ಯಾತ ರಾಜಕಾರಣಿ ನಮ್ಮ ಪ್ರಧಾನಿ ಮೋದಿ ಎಂಬುದನ್ನು ನಾವು ತಿಳಿದು ನಡೆಯಬೇಕು. ಚೀನಾದ ಹಮ್ಮನ್ನು ಬಗ್ಗು ಬಡೆದ ಧೀರ, ಪಾಪಿ ಪಾಕಿಸ್ತಾನದ ಉಪಟಳಕ್ಕೆ ಕೊನೆ ಇಲ್ಲವೇ? ಎಂದು ಹಲಬುತ್ತಿದ್ದ ರಾಷ್ಟ್ರಪ್ರೇಮಿಗಳಿಗೆ ಸಂತಸ ನೀಡಿದ್ದಾನೆ. ಭಯೋತ್ಪಾದಕರು ಯಾವ ಯಾವ ಅಡಗುತಾಣ ಸೇರಿದ್ದಾರೋ ಅಲ್ಲಿಗೆ ನಮ್ಮ ಸೈನಿಕರನ್ನು ಕಳಿಸಿ ಸರ್ಜಿಕಲ್ ವಾರ್ ಮುಖಾಂತರ ಅವರ ಹುಟ್ಟು ಅಡಗಿಸಿದ ವಜ್ರಮನುಷ್ಯ ನಮ್ಮ ನರೇಂದ್ರ ಮೋದಿ. 

ರಾಮರಾಜ್ಯದ ಕನಸನ್ನು ನನಸು ಮಾಡಲು ಬಂದ ದೇವ ಮಾನವ ಎಂದರೆ ತಪ್ಪಾಗದು. ಬಡ ಜನರಿಗೆ ಆರೋಗ್ಯ ಅಭಿಯಾನ, ಮಹಿಳೆಯರಿಗೆ ಎಲ್‌.ಪಿ.ಜಿ ಸಂಪರ್ಕ, ಅಮರನಾಥ ಯಾತ್ರೆಗೆ ತಡೆ ಒಡ್ಡುತ್ತಿದ್ದ ಲಜ್ಜಿಗೇಡಿ ಪಾಕಿಸ್ತಾನದ ಉಗ್ರರರನ್ನು ಹೊಡೆದುರುಳಿಸಲು 40 ಸಾವಿರ  ಮೀಲಿಟರಿ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಚೀನಾ ಅಧ್ಯಕ್ಷನನ್ನು ಒಪ್ಪಿಸಿ ಕೈಲಾಸ ಪರ್ವತಕ್ಕೆ ಮತ್ತು ಮಾನಸ ಸರೋವರ ಯಾತ್ರೆಗೆ ಅನುಕೂಲವಾಗುವಂತೆ ಮಾಡಿದ್ದು, ಬಡಜನರಿಗಾಗಿ ಜನ ಓಷಧಿ ಕೇಂದ್ರಗಳನ್ನು ಸ್ಥಾಪಿಸಿ ಸುಮಾರು 800ಕ್ಕಿಂತಲೂ ಹೆಚ್ಚು ಓಷಧಿಗಳನ್ನು 40ಅ ದಿಂದ 70ಅ ರಿಯಾಯತಿ ದರದಲ್ಲಿ ಮಾರಾಟ ಮಾಡುವ ಕೇಂದ್ರಗಳನ್ನು ತೆರೆದಿದ್ದು ಸಾಮಾನ್ಯ ಕೆಲಸವಲ್ಲ. ಒಟ್ಟಿನಲ್ಲಿ ಹೇಳಬೇಕೆಂದರೆ ಈ ದೇಶವನ್ನು ಸ್ವಚ್ಛ ಭಾರತ, ಶ್ರೇಷ್ಠ ಭಾರತ, ಸ್ವಾಭಿಮಾನಿ ಭಾರತ, ಸದೃಢ ಭಾರತ, ಆತ್ಮನಿರ್ಭಿರ ಭಾರತ, ಸಶಕ್ತ ಭಾರತ ಮತ್ತು ಜಗತ್ತಿಗೆ ಯೋಗ ನೀಡಿದ ಭಾರತವನ್ನಾಗಿ ಮಾಡಿದ ಮೋದಿ ಈ ಕರೋನಾ ಹೆಮ್ಮಾರಿಯ ಅಟ್ಟಹಾಸದ ಸಂದರ್ಭದಲ್ಲಿ ದೇಶವನ್ನು ಸ್ಥೈರ್ಯದಿಂದ ಮುನ್ನಡೆಸಿದ್ದು, "ರೋಧಿಗಳ ಬೊಗಳಿಕೆಗೆ ಸೊಪ್ಪು ಹಾಕದೆ ನಿಭಾುಸಿದ್ದು ಶ್ಲಾಘನೀಯವಾದುದು. 

ಈ ಮಹಾಮಾರಿ ಕರೋನಾದ ಉಗಮಸ್ಥಾನವೇ ಚೀನಾ ಎಂಬುದನ್ನು ವಿಶ್ವದ ಜನತೆಗೆ ಅರಿಯುವಂತೆ ಮಾಡಿದ್ದು ನಮ್ಮ ದೇಶದ ಪ್ರಧಾನಿ ಎನ್ನಬಹುದು. ಆದರೆ ಅಮೇರಿಕೆಯ 'ನ್ಯೂಯಾರ್ಕ ಟೈಮ್ಸ್‌" ಭಾರತದ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಲೇ ಇತ್ತು. ಅದರೊಂದಿಗೆ ಪಾಕಿಸ್ತಾನ ಹಾಗೂ ಚೀನಾ ಕೂಡಾ ಧ್ವನಿ ಗೂಡಿಸುತ್ತಿದ್ದವು. ಇತ್ತೀಚಿಗೆ ನಮ್ಮ ದೇಶದ "ದೇಶಾಂಗ ಸಚಿವರಾದ ಜೈಶಂಕರ್ ಅಮೇರಿಕಾಕ್ಕೆ ಹೋದಾಗ ಅವರ ದೇಶದಲ್ಲಿಯೇ ಖಡಕ್ ಉತ್ತರ ನೀಡಿದ್ದು ಹೀಗೆ "ನಮ್ಮ ದೇಶದ 80 ಕೋಟಿ ಜನರಿಗೆ ಮೊಪತ್ತಾಗಿ ಊಟ ಕೊಡುತ್ತಿರುವ ಮೋದಿ ಸರ್ಕಾರದ ಸಾಧನೆ ಅ್ಟಷ್ಟಲ್ಲ. 40 ಕೋಟಿ ಜನರ ಖಾತೆಗಳಿಗೆ ನೇರವಾಗಿ ಹಣ ಮುಟ್ಟುವಂತೆ ಮಾಡುತ್ತಿದೆ. ಕೊರೋನಾದ ಕ್ಲೀಷ್ಟ ಸಮಯದಲ್ಲಿ ಸಕಲರನ್ನು ಅತ್ಯಂತ ಜಾಗೃಕತೆುಂದ ಮೈಯೆಲ್ಲ ಕಣ್ಣಾಗಿಸಿ ಕಾಯುತ್ತಿದೆ. ಸರ್ಕಾರ ಉಚಿತವಾಗಿ ಕೊರೋನಾ ವ್ಯಾಕ್ಸಿನ್ ಡೋಜ್ ಹಾಗೂ ಆಕ್ಸಿಜನ್ ಪೂರೈಸಲಾಗುತ್ತಿದೆ. ಹೀಗಿರುವಾಗ ನಮ್ಮ ದೇಶದ ಮೇಲೆ ಬೆರಳು ತೋರಿಸುತ್ತಿರುವ ಅಮೇರಿಕದ ಕೆಲವು ಪತ್ರಿಕೆಗಳಿಗೆ ಹೇಳುವುದು ಏನಂದರೆ ನಿಮ್ಮ ದೇಶದ ಜನಸಂಖ್ಯೆ 35 ಕೋಟಿಯೂ ಇಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿರಿ ಎಂದು ಬಿಸಿ ಮುಟ್ಟಿಸಿದ್ದಾರೆ.  

ಮೋದಿ ಬಹಳ ಚಾಣಾಕ್ಷ ರಾಜನೀತಿ ತಜ್ಞ ಎನ್ನಲು ಚೀನಿ ಕೊರೋನಾ ವೈರಸ್ಸಿನ ಭಯಾನಕ ಅಟಾಟೋಪದ ಮಧ್ಯದಲ್ಲಿಯೇ ಅಂದರೆ ಕಳೆದ ಎಪ್ರೀಲ್ ತಿಂಗಳೊಂದರಲ್ಲಿಯೇ 12500 ರಷ್ಟು ಕಂಪನಿಗಳು ನೋಂದಣಿಯಾಗಿವೆ. ಇದರಿಂದ 1500 ಸಾವಿರ ಕೋಟಿ ರೂಪಾುಗಳ ಬಂಡವಾಳ ಹೂಡಿಕೆಯಾಗಿದೆ. ಅಲ್ಲದೆ ದೇಶದ ಗಡಿಭಾಗವಾದ ಲಡಾಕ್‌ನ ಹಳ್ಳಿಗಳಿಗೆ ಈ ಕರೋನಾದ ಸಂಕಟ ಸಮಯದಲ್ಲಿ ವಿದ್ಯುತ್ ತಂತಿಯನ್ನು ಎಳೆಯುವ 1300 ಕೋಟಿ ರೂಪಾಯಿಗೂ ಹೆಚ್ಚು ಹಣದ ಯೋಜನೆಯನ್ನು ಮೋದಿ ಸರ್ಕಾರ ಅನುಮೋದಿಸಿದೆ. ಇದರಿಂದಾಗಿ ಚೀನಾ ದೇಶಕ್ಕೆ ಭಾರತದ ಅಭಿವೃದ್ಧಿಯನ್ನು ಕಂಡು ಸಹಿಸಲು ಆಗುತ್ತಿಲ್ಲ. ಗಡಿಯಲ್ಲಿ ಸೈನ್ಯದ ಜಮಾವಣೆ, ಗಲ್ವಾನ್‌ನಲ್ಲಾದ ಅವಮಾನವನ್ನು ಚೀನಾ ತೀರಿಸಿಕೊಳ್ಳಲು ಹೊಂಚು ಹಾಕುತ್ತಿದೆ. ಆದರೆ ಅದರ ಇಂಗಿತವನ್ನು ಅರಿತ ರಾಜನಾಥಸಿಂಗ್ ಆಗಲಿ, ಮೋದಿಯಾಗಲಿ ಸೊಪ್ಪು ಹಾಕುತ್ತಿಲ್ಲ. ನಿದ್ರೆಯಲ್ಲೂ ಜಾಗೃತರಾಗಿ ನಮ್ಮ ಸೈನಿಕರು ಗಡಿಯನ್ನು ಕಾಯುತ್ತಿದ್ದಾರೆ. ಭಾರತದ ಸೈನ್ಯಾಧಿಕಾರಿಗಳು ಮೇಲಿಂದ ಮೇಲೆ ಗಡಿಗೆ ಭೇಟಿ ನೀಡುತ್ತಿರುವುದು ಚೀನಾದ ಅಧ್ಯಕ್ಷನಿಗೆ ಒಳ ಒಳಗೆ ಭೀತಿಯನ್ನುಂಟು ಮಾಡಿದೆ ಎನ್ನಬಹುದು. ಒಟ್ಟಿನಲ್ಲಿ ಹೇಳಬೇಕೆಂದರೆ ಸ್ವಾತಂತ್ರ್ಯದ ನಂತರ ಇಂಥ ಪ್ರಧಾನಿ ದೊರಕ್ಕಿದ್ದು ನಮ್ಮ ದೇಶದ ಜನತೆಯ ಪುಣ್ಯ ಎನ್ನಬಹುದು. ಆದರೆ ನಮ್ಮಲ್ಲಿ ಹಲವಾರು ದಶಕಗಳಿಂದ ಲಂಚಗೂಳಿತನ, ಸ್ವಾರ್ಥ ರಾಜಕೀಯ, ಭ್ರಷ್ಟ ಜನರ ಅಟಾಟೋಪ, ಜಾತಿಯ ಪೆಡಂಭೂತ, ಹಣಕ್ಕಾಗಿ ಹಪಹಪಿಸುವ ಜನತೆ ಜಾಗೃತರಾಗಬೇಕಾಗಿದೆ. ವೋಟಬ್ಯಾಂಕನ್ನು ಯಾವ ರೀತಿ ಕೈವಶ ಮಾಡಿಕೊಳ್ಳಬಹುದು ಎಂಬ ಚಾಣಾಕ್ಷ ನೀಚರು ಈ ದೇಶದಲ್ಲಿ ತುಂಬಿ ತುಳುಕುತ್ತಿದ್ದಾರೆ ಎಂಬುದು ಕೂಡಾ ಒಂದು ಕೊರಗು. ಏನೇ ಆಗಲಿ ಬಂಧುಗಳೇ ರಾಷ್ಟ್ರಾಭಿಮಾನಿಗಳನ್ನು, ಧರ್ಮಾಭಿಮಾನಿಗಳನ್ನು, ಸಾಮಾನ್ಯ ಜನರ ಕಷ್ಟ ಕಾರ್ಪಣೆಗಳನ್ನು ಅರಿತವರನ್ನು ಈ ದೇಶದ ಸಾರ್ವಭೌಮರನ್ನಾಗಿ ಮಾಡಿ, ಸ್ವಾರ್ಥಿಗಳನ್ನು, ಕುಟುಂಬ ರಾಜಕಾರಣಿಗಳನ್ನು ದೂರ ಇಡಿ ಎಂದು ಬೇಡಿಕೊಳ್ಳುವೆ. ಮೋದಿಯ ರಾಜ್ಯ ರಾಮರಾಜ್ಯ ಎಂಬುದನ್ನು ಅರಿತರೆ ಅದೇ ಭಾಗ್ಯ! 


ಡಾ. ಸಿ. ಕೆ. ಜೋರಾಪೂರ 

ಕರ್ನಾಟಕ ರಾಜ್ಯೋತ್ಸವ ಪುರಸ್ಕೃತರು,  

ಸಾಹಿತಿಗಳು, ಬೆಳಗಾವಿ 

ಮೊ: 9845144194  



ಸುದ್ದಿ ಓದಿ