ಕನಕ ದುರ್ಗಾ ದೇವಿ ಭಕ್ತಾದಿಗಳಿಂದ ಸಾರ್ವಜನಿಕರಿಗೆ ಅನ್ನ ಸಂತರೆ್ಣ"
ಕನಕ ದುರ್ಗಾ ದೇವಿ ಭಕ್ತಾದಿಗಳಿಂದ ಸಾರ್ವಜನಿಕರಿಗೆ ಅನ್ನ ಸಂತರೆ್ಣ"
ಬಳ್ಳಾರಿ 11: ನಗರದ ಅನಂತಪುರ ರಸ್ತೆಯಲ್ಲಿ ಶ್ರೀ ಬಳ್ಳಾರಿ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವ ಅಂಗವಾಗಿ 16 ನೇ ವರ್ಷದ ಸಾರ್ವಜನಿಕರಿಗೆ ಉಚಿತ ಅನ್ನ ಸಂತರೆ್ಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಯೋಜಿಸಿದ್ದ ಸಾರ್ವಜನಿಕರ ಅನ್ನ ಸಂತರೆ್ಣಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸ್ವೀಕರಿಸಿದರು. ಮಂಗಳವಾರ ಬೆಳಗಿನ ವಿಶೇಷ ಪೂಜಾ ಕೈಂಕರ್ಯಗಳು ನಡೆದ ನಂತರ ಮಧ್ಯಾಹ್ನ 12 ಗಂಟೆಗೆ ದೇವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಅನ್ನಸಂತರೆ್ಣಗೆ ಮುಕ್ಕಣ್ಣ, ಮತ್ತವರ ತಂಡದ ವತಿಯಿಂದ ಚಾಲನೆ ನೀಡಿದರು. ಎರಡು ಸಾವಿರಕ್ಕೂ ಹೆಚ್ಚು ಭಕ್ತರು ದೇವರ ಪ್ರಸಾದ ಸ್ವೀಕರಿಸಿದರು.
ಕನಕ ದುರ್ಗ ಭಕ್ತಾದಿ ಮುಕ್ಕಣ್ಣ ಮಾತನಾಡಿ, ದೇವಿಯ ಸಿಡಿಬಂಡಿ ಜಾತ್ರಾ ಮಹೋತ್ಸವದ ಅಂಗವಾಗಿ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಅನ್ನಸಂತರೆ್ಣಯನ್ನು ಆಯೋಜಿಸಲಾದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಭಾವೈಕ್ಯತೆಯನ್ನು ಸಾರುವ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದೇ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.ಎಲ್ಲಾ ಜನರು ಜಾತಿ, ಮತ, ಧರ್ಮ, ಪಂಥಗಳನ್ನು ಮರೆತು ಒಂದಾಗಿ ಸಿಡಿ ಬಂಡಿಯನ್ನು, ಆಚರಣೆ ಮಾಡುತ್ತಿದ್ದೇವೆ ಎಂದು ಸಂಭ್ರಮಿಸಿದರು. ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬಂದು ದೇವಿ ದರ್ಶನ ಪಡೆದು ಶ್ರೀ ಕನಕ ದುರ್ಗಮ್ಮ ದೇವಿಗೆ ಕೃಪೆಗೆ ಪಾತ್ರರಾಗಬೇಕೆಂದು ಮಾತನಾಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ 17 ವಾರ್ಡಿನ ಸದಸ್ಯರಾದ, ಹೊನ್ನಪ್ಪ, ಹಗರಿ ಗೋವಿಂದ, ಅಖಿಲ, ಗೋವಿಂದ,ನಾಗೇಂದ್ರ, ದುರ್ಗ ನರಸಿಂಹ, ಪ್ರಸಾದ್, ಪರಶುರಾಮ, ಹರ್ಷ ಮತ್ತು ಗೀರೀಶ್ ಸೇರಿದಂತೆ ಮುಂತಾದ ಭಕ್ತಾದಿಗಳು ಆಗಮಿಸಿದ್ದರು.