ವಸತಿ ನಿಲಯದ ಮಕ್ಕಳ "ಕಲರವ ದಸರಾ ಶಿಬಿರದ" ಸಮಾರಂಭ
ಮುಂಡಗೋಡ 09: ಪಟ್ಟಣದ ಲೊಯೋಲ ವಿಕಾಸ ಕೇಂದ್ರ ಸಭಾಂಗಣದಲ್ಲಿ ವಸತಿ ನಿಲಯದ ಮಕ್ಕಳ ಕಲರವ ದಸರಾ ಶಿಬಿರದ ಸಮಾರೋಪ ಸಮಾರಂಭ ಹಾಗೂ ಮಕ್ಕಳ ಪಾಲಕರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಐದು ದಿನಗಳ ದಸರಾ ಶಿಬಿರದಲ್ಲಿ ಮಕ್ಕಳಿಗೆ ಕನ್ನಡ, ಗಣಿತ, ಇಂಗ್ಲೀಷ, ವಿಜ್ಞಾನ, ಜೀವನಕೌಶಲ್ಯ, ಜಾನಪದ ಕಲೆ, ಆಟೋಟಗಳು. ಪ್ರೇಕ್ಷಣೀಯ ಸ್ಥಳಗಳ ವಿಕ್ಷಣೆ, ಈ ಎಲ್ಲಾ ಅಂಶಗಳೂ ಓಳಗೋಂಡಿದ್ದವು.ಸಮಾರೋಪ ಸಮಾರಂಭಕ್ಕೆ ವಿವಿದ ರೀತಿಯ ಸಂಪ್ರದಾಯದ ನೃತ್ಯಗಳನ್ನು ಪ್ರದರ್ಶಿಸಿದ್ದರು. ಶ್ರೀರಾಮಚಂದ್ರ ಕಲಾಲ ಶಿಕ್ಷಕರು ಎಲ್.ಪಿ.ಎಸ್.ಜೊಗೇಶ್ವರಹಳ್ಳ ರಾಜ್ಯಮಟ್ಟದ ಉತ್ತಮಶಿಕ್ಷಕ ಪ್ರಶಸ್ತಿ ಪುರಸ್ಕೃತರು ಮಾತನಾಡುತ್ತ ಮಕ್ಕಳು ತಮ್ಮ ಜೀವನದ ಎಲ್ಲಾ ಹಕ್ಕುಗಳನ್ನು ಪಡೆದುಕೊಳ್ಳುವ ಹಕ್ಕು ಮಕ್ಕಳಿಗೆ ಇದೆ. ಮಗುವಿನ ಸರ್ವತೋಮುಖ ಬೆಳವಣಿಗೆ ಆಗಬೇಕೆಂದರೆ ಮಗುವಿನ ಜೀವನದಲ್ಲಿ ತಂದೆ ತಾಯಿಗಳ ಪಾತ್ರ ಮಹತ್ವದ್ದಾಗಿದೆ. ಮಗು ತನ್ನ ಗುರಿಎಡೆಗೆ ಸಾಗುವಾಗ ಪಾಲಕರಾದವರು ಮಗುವಿಗೆ ಬೆನ್ನೆಲುಬಾಗಿ ನಿಲ್ಲಬೇಕು.
ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ಪಾಲಕರು ಮಕ್ಕಳ ಭವಿಷ್ಯದುದ್ದಕ್ಕೂ ಜೋತೆ ಇರಬೇಕು. ಎಂದು ಹೇಳಿದರು. ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರಾದ ಫಾ.ಅನಿಲ್ ಡಿಸೋಜಾರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಹಿಂದೂಳಿದ ಸಮುದಾಯದ ಅಭಿವೃದ್ದಿ ಎಡೆಗೆ ನಮ್ಮ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದ್ದು ಹಿಂದೂಳಿದ ಹಲವಾರು ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲೂ ನಮ್ಮ ಸಂಸ್ಥೆ ದಾರೀದೀಪವಾಗಿದೆ ಮತ್ತು ಅವಕಾಶ ವಂಚಿತ ಮಕ್ಕಳಿಗೆ ಬೆನ್ನೆಲುಬಾಗಿ ನಿಂತಿದೆ.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು ಸಮಾಜದಲ್ಲಿ ಉತ್ತಮ ಸ್ಥಾನಗಳನ್ನು ಹೆಣ್ಣುಮಕ್ಕಳೂ ಅಲಂಕರಿಸಬೇಕು ಎಂದು ತಿಳಿಸಿದರೂ ಹಿಂದೂಳಿದ ಹಾಗೂ ಅವಕಾಶವಂಚಿತ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವದಾಗಿ ಹೇಳಿದರು. ಶ್ರೀಬಾಲಚಂದ್ರ ಹೆಗಡೆ ಶಿಕ್ಷಕರು ಎಲ್.ಪಿ.ಎಸ್ ಹೊಸಕೊಪ್ಪಾ ಪಾಲಕರು ಮಕ್ಕಳ ಕನಸುಗಳನ್ನು ತಿಳಿದು ಪ್ರೋತ್ಸಾಹಿಸಬೇಕು ಟಿ,ವಿ ಮೋಬೈಲ್. ಬಳಕೆ ಕಡಿಮೆಮಾಡಿ ಒದಿನಲ್ಲಿ ಅಸಕ್ತಿ ಹೆಚ್ಚಿಸಿ ಎಲ್ಲರೊಂದಿಗೆ ಬೇರೆಯುವ ಮನೋಭಾವನೆಯನ್ನು ಪಾಲಕರು ಕಲಿಸಬೇಕು ಶಾಲೆಯಲ್ಲ ನಡೆಯುವ ಚಟುವಟಿಕೆ ಹಾಗೂ ವೇಳಾಪಟ್ಟಿಯ ಬಗ್ಗೆ ಪ್ರತಿದಿನ ಪಾಲಕರು ವಿಚಾರಿಸಬೇಕು. ಇದರಿಂದ ಮಕ್ಕಳೂ ಮೌಲ್ಯಯುತವಾದ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ ಎಂಬ ಕಿವಿಮಾತನ್ನು ಪಾಲಕರಿಗೆ ತಿಳಿಸಿದರು. ಈ ಸಂಧರ್ಭದಲ್ಲಿ ಎಲ್,ವಿಕೆ ಹಾನಗಲ್ ಸಹ ನಿರ್ದೇಶಕರಾದ ಫಾ.ವಿನ್ಸಂಟ್ ಜೈಸನ್,ಪಾ, ಆಲ್ವಿನ್ ಡಿಸೋಜಾ ನಿರ್ದೇಶಕರು ಸಿದ್ದಿ ಅಭಿವೃದ್ಧಿ ಯೋಜನೆ, ಬ್ರದರ್ ದೀಲಿಪ್ ಕ್ಷೇವಿಯರ್ ವಸತಿ ನಿಲಯಗಳ ಮೇಲ್ವಿಚಾರಕರು.ಮಕ್ಕಳ ಪಾಲಕರಾದ ಮಹಮದ್ ಸಾನ್ ಬಾಗವತಿ, ಸಹದೇವ ವಡ್ಡರ,ಸಾವುಬಾಯಿ. .ಮಕ್ಕಳ ಪಾಲಕರು,ಮುಂಡಗೋಡ,ಹಾಗೂ ಹಾನಗಲ್ಲ ವಸತಿನಿಲಯಗಳ ಪಾಲಕ ಪಾಲಕಿಯರು ಹಾಗೂ 250 ವಸತಿನಿಲಯದ ಮಕ್ಕಳೂ ಎಲ್,ವಿ,ಕೆ ಸಿಬ್ಬಂದಿಗಳೂ ಹಾಜರಿದ್ದರು. ಸ್ವಾಗತ ಅಶ್ವಿನಿ ಕೊರಿದರು. ನಿರೂಪಣೆ ಅರ್ಚನಾ, ಧನ್ಯವಾದಗಳು ರೀಗನ್ ನೇರವೇರಿಸಿದರು.