"ಜಿಗ್ರಿದೋಸ್ತ್" ಸೆಪ್ಟೆಂಬರ್ 17 ಕ್ಕೆ
ಬೆಂಗಳೂರು, ಸೆ. 07 ಬಿ. ಎನ್. ಗಂಗಾಧರ್ ನಿರ್ಮಾಣದ “ಜಿಗ್ರಿದೋಸ್ಟ್” ಇದೇ 17ರಂದು ತೆರೆಗೆ ಬರಲಿದೆ.
ಈ ಮೊದಲು "ಅಂಜದ ಗಂಡು"," ಯಾರಿಗೆ ಸಾಲತ್ತೆ ಸಂಬಳ" ಮುಂತಾದ ಯಶಸ್ವಿ ಚಿತ್ರಗಳನ್ನು ಬಿ.ಎನ್.ಗಂಗಾಧರ್ ನಿರ್ಮಿಸಿದ್ದು, ಜಿಗ್ರಿದೋಸ್ತ್ ಅವರ 27ನೇ ಚಿತ್ರವಾಗಿದೆ.
ನಟ ಹಾಗೂ ನಿರ್ದೇಶಕ ಎಸ್.ಮೋಹನ್ ಈ ಚಿತ್ರ ನಿರ್ದೇಶಿಸಿದ್ದಾರೆ. ನನಗೆ ಗಂಗಾಧರ್ ಅವರು ಸುಮಾರು 22 ವರ್ಷಗಳ ಪರಿಚಯ. ಅವರ "ಯಾರಿಗೆ ಸಾಲತ್ತೆ ಸಂಬಳ" ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ಈಗ ಅವರದೇ ನಿರ್ಮಾಣದ ಚಿತ್ರ ನಿರ್ದೇಶನ ಮಾಡಿದ್ದೇನೆ. ಪ್ರಪಂಚದಲ್ಲಿ ಎಲ್ಲಾ ಸಂಬಂಧಿಗಳನ್ನು ನಮಗೆ ಅಪ್ಪ - ಅಮ್ಮ ಪರಿಚಯ ಮಾಡಿಕೊಟ್ಟರಷ್ಟೇ ತಿಳಿಯುತ್ತದೆ. ಆದರೆ ನಾವು ಇಷ್ಟ ಪಟ್ಟು ಪಡೆಯುವ ಸಂಬಂಧ ಸ್ನೇಹ. ಹಾಗಾಗಿ ಎಲ್ಲಕ್ಕಿಂತ ಮೀರಿದ್ದು ಸ್ನೇಹ. ಇದನ್ನೇ ನಮ್ಮ ಚಿತ್ರದಲ್ಲಿ ಹೇಳಿದ್ದೇವೆ ಎಂದು ಮೋಹನ್ ತಿಳಿಸಿದ್ದಾರೆ.
ಸ್ಕಂದ ಅಶೋಕ್ ಹಾಗೂ ಚೇತನ್ ಇಬ್ಬರೂ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಅಕ್ಷತ, ಸುಷ್ಮ ನಾಯಕಿಯರು. ಪಂಚಭಾಷಾ ನಟ ವಿನೋದ್ ಆಳ್ವ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಚಿತ್ಕಲಾ ಬಿರಾದಾರ್, ಇಫ್ರಾನ್, ಮಂಜುನಾಥ್, ರಮೇಶ್ ಪಂಡಿತ್, ಟಿನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಪ್ರಸಾದ್ ಬಾಬು ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಮದನ್ - ಹರಿಣಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.