'ನಿರ್ಲಕ್ಷ ಮುಂದುವರೆದರೆ ಪ್ರತ್ಯೇಕ ರಾಜ್ಯ ಹೋರಾಟ'
ಬೆಳಗಾವಿ : ಉತ್ತರ ಕನರ್ಾಟಕ ಭಾಗದ ಜನರಿಗೆ ಪ್ರತ್ಯೇಕ ರಾಜ್ಯವೇ ಬೇಕು ಎಂಬ ಉದ್ದೇಶ ಇಲ್ಲ. ಆದರೇ, ಇಲ್ಲಿಯವರೆಗೆ ರಾಜ್ಯ ಸರಕಾರಗಳು ಈ ಭಾಗವನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿವೆ. ಈ ನಿರ್ಲಕ್ಷ ಈಗಲೂ ಮುಂದುವರೆದರೆ ಪ್ರತ್ಯೇಕ ರಾಜ್ಯದ ಹೋರಾಟ ತೀವ್ರಗೊಳ್ಳಲಿದೆ ಎಂಬುದನ್ನು ರಾಜ್ಯ ಸರಕಾರ ಬೇಗ ಅರಿತುಕೊಳ್ಳಬೇಕು ಎಂದು ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ದರಾಮ ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಸಮ್ಮಿಶ್ರ ಸರಕಾರದ ಬಜೆಟ್ನಲ್ಲೂ ಉತ್ತರ ಕನರ್ಾಟಕದ ಜಿಲ್ಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಚಿಕ್ಕೋಡಿ ಭಾಗದ ನೀರಾವರಿ ಯೋಜನೆಗಳಿಗೆ ಒಂದಿಷ್ಟು ಅನುದಾನ ಘೋಷಣೆ ಮಾಡಿರುವದನ್ನು ಬಿಟ್ಟರೆ, ಬೇರಾವ ಜಿಲ್ಲೆಗೂ ಅನುದಾನ ನೀಡಿಲ್ಲ. ಮಹಾದಾಯಿಗಾಗಿ ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆದರೂ ಯಾವೊಂದು ಪಕ್ಷವೂ ಸೂಕ್ತ ಸ್ಪಂಧನ ನೀಡಿಲ್ಲ. ಚುನಾವಣೆಯ ಸಮಯದಲ್ಲಿ ಭರವಸೆಗಳನ್ನು ನೀಡಿ ಮೋಸ ಮಾಡಿವೆ ಎಂದು ಟೀಕಿಸಿದರು.
ಈ ಭಾಗದ ಕೃಷಿ ಕ್ಷೇತ್ರವನ್ನು, ನೀರಾವರಿ ಯೋಜನೆಗಳನ್ನು ಮತ್ತು ಮೂಲಭೂತ ಸೌಕರ್ಯ ಅಭಿವೃದ್ದಿ ಪಡಿಸುವ ಯಾವ ಪ್ರಯತ್ನಗಳೂ ಆಗುತ್ತಿಲ್ಲ. ಈ ಅನ್ಯಾಯವನ್ನು ಇನ್ನೆಷ್ಟು ದಿನ ಸಹಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಅಭಿವೃದ್ದಿಯ ಕಡೆ ಗಮನಹರಿಸದಿದ್ದರೇ, ಪ್ರತ್ಯೇಕ ರಾಜ್ಯದ ಕೂಗು ಬಲಗೊಳ್ಳುವರಲ್ಲಿ ಯಾವ ಅನುಮಾನವೇ ಇಲ್ಲ. ರಾಜ್ಯ ಸರಕಾರ ಬೇಗ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದರು.
ನಿಡಸೋಸಿ ಸಿದ್ದ ಸಂಸ್ಥಾನ ಮಠದ ಶಿಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಉತ್ತರ ಕನರ್ಾಟಕವನ್ನು ಅಭಿವೃದ್ದಿ ಪಡಿಸುವಂತೆ ಆಗ್ರಹಿಸಿ ಕಳೆದ ನಾಲ್ಕು ದಶಕಗಳಿಂದ ನಿರಂತರ ಹೋರಾಟಗಳು ನಡೆಯುತ್ತಿದ್ದರೂ ಯಾವ ಸರಕಾರಗಳೂ ಈ ಕಡೆ ಗಮನ ಹರಿಸಿಲ್ಲ. ಈ ಭಾಗದ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಬೆಳಗಾವಿಯಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಲಾಗಿರುವ ಸುವರ್ಣ ವಿಧಾನ ಸೌಧವು ಭೂತಬಂಗಲೆಯಾಗಿ ನಿಂತಿದೆ. 10 ದಿನಗಳ ಅಧಿವೇಶನ ಹೊರತು ಪಡಿಸಿದರೇ ಅಲ್ಲಿ ಯಾವ ಚಟುವಟಿಕೆಗಳು ನಡೆಯುತ್ತಿಲ್ಲ. ಈ ಭಾಗದಲ್ಲಿ ಅಭಿವೃದ್ದಿ ಎಂಬುದು ಮರಿಚಿಕೆಯಾಗಿದೆ. ಸುವರ್ಣ ಸೌಧಕ್ಕೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸಿ ಅದನ್ನು ಶಕ್ತಿ ಕೇಂದ್ರವನ್ನಾಗಿ ರೂಪಿಸಬೇಕು ಎಂಬ ಬೇಡಿಕೆ ಸೇರಿದಂತೆ ಈ ಭಾಗದ ಅಭಿವೃದ್ದಿಯ ಬಗ್ಗೆ ರಾಜ್ಯ ಸರಕಾರದ ಮೇಲೆ ಒತ್ತಡ ತರಲು ಜುಲೈ 31 ರಂದು ಮುಂಜಾನೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉತ್ತರ ಕನರ್ಾಟಕದ ನೂರಾರು ಮಠಾಧೀಶರು ಸಾಂಕೇತಿಕ ಧರಣಿ ನಡೆಸಲಿದ್ದಾರೆ ಎಂದು ತಿಳಿಸಿದರು.
ಉತ್ತರ ಕನರ್ಾಟಕ ವಿಕಾಸ ವೇದಿಕೆಯ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಮಠಾಧೀಶರು ನಡೆಸುತ್ತಿರುವ ಧರಣಿಯಲ್ಲಿ ಈ ಭಾಗದ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮತ್ತು ಪಕ್ಷಗಳ ಕಾರ್ಯಕರ್ತರು ಪಕ್ಷಾತೀತವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ನಿಜಗುಣ ದೇವರು, ವಿಜಯಪುರದ ಸಿದ್ದಾರೂಢ ಸ್ವಾಮೀಜಿ, ಜಮಖಂಡಿಯ ಸಾವಳಗೀಶ್ವರ ಸ್ವಾಮೀಜಿ, ಕಲ್ಯಾಣರಾವ ಮುಚಳಂಬಿ, ಆರ್.ಎಸ್.ದಗರ್ೆ, ನಾಗೇಶ ಗೋಲಶೆಟ್ಟಿ, ದೀಪಕ ರಾಯಣ್ಣವರ, ಮಹೇಶ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.