"ಗೋಂಡ" ಹುಲಕೋಟಿಯಲ್ಲಿ ಕಲೆಯ ಅನಾವರಣ
(ಲೇಖಕರು: ಜೆ.ಕೆ.ಜಮಾದಾರ)
ಹುಲಕೋಟಿಯಲ್ಲಿರುವ ಕೆ.ಎಚ್.ಪಾಟೀಲ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆ ಆವರಣ ಹತ್ತಾರು ಅದ್ಭುತಗಳ ಆಗರ.
ರ್್ಟರಾಯ ಹೆದ್ದಾರಿಗೆ ಹೊಂದಿಕೊಂಡಿರುವ ಸಂಸ್ಥೆಯ ಮುಖ್ಯ ಪ್ರವೇಶ ದ್ವಾರದಿಂದ ಪ್ರವೇಶಿಸಿದ ತಕ್ಷಣ 'ವ್ಯಕ್ತಿ' ಆವಕ್ಕಾಗುವುದರಲ್ಲಿ ಸಂದೇಹವೇ ಇಲ್ಲ. ಟಾಂಗಾ, ಕುದುರೆ, ಚಕ್ಕಡಿ ಎತ್ತು, ವನದೇವತೆಯ ಮಡಲಲ್ಲಿ ಹಳ್ಳಿಗರ ಊಟದ ದೃಶ್ಯ, ಶುಶ್ರುತ ಮರ್ಹಯ ಶಸ್ತ್ರ ಚಿಕಿತ್ಸೆ, ಧನ್ವಂತರಿಯ ಮೂರ್ತಿ, ಬೆಟ್ಟದಂತಹ "ನ್ನಲೆಯಲ್ಲಿ ಏಶಿಯಾದ ಬೆಳಕು-ಬುದ್ಧನ ಧ್ಯಾನಮೂರ್ತಿ ನಿನ್ನ ಶಿಲ್ಪಿ ನೀನೆ, ಚಿಗರಿ, ಮೊಲ, ನ"ಲು ಗಿಡಮರಗಳ ಕಡಿಯಬಾರದೆಂದು ಸಾರುವ, ಮುಂತಾದ ಕಲಾಕೃತಿಗಳಲ್ಲದೇ ಟೆರಾಕೋಟಾದ ಕಲೆ ಆರ್ಕಸಿದರೆ 40ಕ್ಕೂ ಹೆಚ್ಚು ವೈ"ದ್ಯಮಯ ಫಲ ನೀಡುವ ಹಣ್ಣಿನಗಿಡಗಳು, ನೂರಾರು ಬಗೆಯ ಪರಿಮಳ ಸೂಸುವ ಹೂವು, ಬಳ್ಳಿ-ಪೊದೆಗಳು ಹಾಗೂ ಓಷಧೀಯ ಸಸ್ಯಗಳೆಲ್ಲ ಸೇರಿ ಒಂದು ಅದ್ಭುತ ಲೋಕ ಪ್ರವೇಶಿಸಿದಂತೆ ಭಾಸವಾಗುತ್ತದೆ. ಇದಕ್ಕೆ ಕಳಸ"ಟ್ಟಂತೆ, ಯೋಗ ಹಾಗೂ ಧ್ಯಾನ ಮಂದಿರದ ಹೊರ ಆವರಣ ಗೋಡೆಯ ಮೇಲೆ "ಗೊಂಡ" ಸಂಸ್ಕೃತಿಯ "ಶ್ವ"ಖ್ಯಾತ ಚಿತ್ರಗಳು ಅನಾವರಣ ಗೊಂಡಿವೆ.
ಕಲಾ"ದರ ಕುಟುಂಬ
ಮಧ್ಯ ಪ್ರದೇಶದ ಭೋಪಾಲದಿಂದ ಬಂದಿರುವ ಪ್ರದೀಪ ಮಾರಾ", ಪತ್ನಿ ಧನೇಶ್ವರಿ ಹಾಗೂ ಪುತ್ರಿ ಪ್ರೀಯಾಂಕಾ. ಈ ವರ್ಣ ಚಿತ್ರಗಳ ಜನಕರು. ಆದಿವಾಸಿಗಳೇ ಅತ್ಯಧಿಕವಾಗಿರುವ ದಿಂಡೋರಿ ಜಿಲ್ಲೆಯ ಗಾರಕಾಮಟ್ಟಾ ಗ್ರಾಮದವರು. ಪತಿ ಪತ್ನಿ ಇಬ್ಬರೂ ಇಂದಿರಾಗಾಂಧಿ ರ್್ಟರಾಯ ಮಾನವ ಸಂಗ್ರಹಾಲಯ ಪುರಸ್ಕಾರಕ್ಕೆ ಹಾಗೂ ಅಖಿಲಭಾರತ ರ್್ಟರಾಯ ಕಾಳಿದಾಸ ಸಮ್ಮಾನಕ್ಕೆ ಭಾಜನರಾಗಿರುವ ಈ ಕಲಾ"ದರ ಕುಟುಂಬ ಮಧ್ಯಪ್ರದೇಶದ ಅಮರಕಂಟಕ ಬುಡಕಟ್ಟು "ಶ್ವ"ದಾಲಯದ ಉಪಕುಲತಿಗಳಾಗಿದ್ದ ಕರ್ನಾಟಕದವರೇ ಆದ ಶಿಕ್ಷಣ ತಜ್ಞ ಡಾ.ತೇಜಸ್ವಿ ಕಟ್ಟಿಮನಿಯವರ ಸಂಪರ್ಕಕ್ಕೆ ಬಂದು ದೇಶದಾದ್ಯಂತ ತಮ್ಮ ಕಲಾಪ್ರತಿಭೆಯನ್ನು ಅನಾವರಣಗೊಳಿಸಿ ಖ್ಯಾತಗಳಿಸಿದ್ದಾರೆ. ಮುಂಬು, ಮೈಸೂರು, ಬೆಂಗಳೂರು, ಚೆನ್ನೈ, ಕಲಕತ್ತ, ರಾಜಸ್ಥಾನದ ""ದೆಡೆ ಕೆಲಸ ಮಾಡಿದ್ದಾರೆ.
-2-
ಗೊಂಡ ಕಲೆ
ಇದೊಂದು ಬುಡಕಟ್ಟು ಜನರ ಜಾನಪದ ಕಲೆ. "ಗೊಂಡ" ಅತ್ಯಧಿಕ ಜನಸಂಖ್ಯೆ ಹೊಂದಿರುವ ಬುಡಕಟ್ಟು ಜನಾಂಗ. ಮಧ್ಯಪ್ರದೇಶದಲ್ಲಿ ಸಾಂದ್ರೀಕೃತಗೊಂಡಿರುವ ಈ ಜನಾಂಗ ಆಂದ್ರ ಪ್ರದೇಶ, ತೆಲಂಗಾಣ, ಬಿಹಾರ, ಮಹಾರಾಷ್ಟ್ರ, ಓಡಿಸಾಗಳಲ್ಲಿಯೂ ಇದ್ದಾರೆ. ಈ ಜನರಲ್ಲಿ ಉತ್ತಮ ಚಿತ್ರ ನೋಡಿದರೆ ಶುಭವಾಗುವುದೆಂದು ನಂಬಿಕೆ ಇದೆ. ಅದಕ್ಕಾಗಿಯೇ ಬುಡಕಟ್ಟು ಜನರು ತಮ್ಮ ಮನೆ ಗೊಡೆಗಳನ್ನು "ಗೊಂಡ" ಚಿತ್ರಗಳಿಂದ ಅಲಂಕರಿಸುತ್ತಾರೆ.
ಭೋಪಾಲದಲ್ಲಿ ಭಾರತ ಭವನ ವಸ್ತು ಸಂಗ್ರಹಾಲಯದ ನಿರ್ದೇಶಕರಾಗಿದ್ದ ಜೆ.ಸ್ವಾ"ುನಾಥನ್ ಅವರ "ಶೇಷ ಪ್ರಯತ್ನದಿಂದ ದಿಂಡೋರಿ ಜಿಲ್ಲೆಯ "ಗೊಂಡ" ಬುಡಕಟ್ಟು ಜನರ ಕಲೆ ಹೊರ ಜಗತ್ತಿಗೆ ಪರಿಚುಸಲ್ಪಟ್ಟಿತು. ಅದರಲ್ಲಿಯೂ "ಶೇಷವಾಗಿ ಶ್ರೀ.ಜೆನಗಳಸಿಂಗ ಶ್ಯಾಮ ಅತ್ಯಂತ ಖ್ಯಾತ ಕಲಾ"ದರಾಗಿ ಹೊರ ಹೊ"್ಮುದರು. ಇವರ ಚಿತ್ರಗಳು ಟೋಕಿಯೊ ಪ್ಯಾರೀಸಗಳಲ್ಲಿ ಪ್ರದರ್ಶನಗೊಂಡವು. ಅವರ ಕಲಾ ಮಾದರಿಯೇ ಒಂದು ಮಾರ್ಗವಾಗಿ, ಪಂಥವಾಗಿ ಬೆಳೆದಿದೆ. ಪ್ರದೀಪ ಈ ಖ್ಯಾತ ಕಲಾ"ದರ ಸಂಬಂಧಿಯಾಗಿರುವುದೊಂದು ಹೆಮ್ಮೆಯ ಸಂಗತಿ.
ಗೊಂಡ ಚಿತ್ರಕಲೆಯಲ್ಲಿ ಒಂದು ಸಿದ್ದಾಂತ ಅಡಿಗಿರುತ್ತದೆ. ಹುಲಕೋಟಿಯಲ್ಲಿ ಅರಳಿರುವ ಚಿತ್ರಗಳು ಅದ್ಭುತವಾದುದನ್ನು ಸಾರುತ್ತವೆ.
ಈ ಶರೀರ ಆಕಾಶ, ಜಲ, ಪೃಥ್ವಿ, ಅಗ್ನಿ, ವಾಯು ಎಂಬ ಪಂಚಮಹಾಭೂತಗಳಿಂದಾಗಿದೆ. ಮನುಷ್ಯನ ಪಂಚಕರ್ಮೇಂದ್ರಿಯಗಳು ಕೈ, ಕಾಲು, ವಾಣಿ, ಜನನೇಂದ್ರೀಯ, ಗುದ ಹಾಗೂ ಪಂಚ ಜ್ಞಾನೇಂದ್ರಿಯಗಳು, ಕಿ", ನಾಲಿಗೆ, ಮೂಗು, ನೇತ್ರ ಹಾಗೂ ಚರ್ಮ ಹುಲಕೋಟಿಯಲ್ಲಿ ಮೂಗು (ವಾಸನೆ) ಹಾಗೂ ನಾಲಿಗೆ (ರುಚಿ)ಜ್ಞಾನೇಂದ್ರಿಯಗಳನ್ನು ಅನಾವರಣಗೊಳಿಸಲಾಗಿದೆ.
ಜಿಂಕೆ-ತನ್ನ ನಾಭಿಯಲ್ಲಿಯೇ ಕಸ್ತೂರಿಯನ್ನಿರಿಸಿಕೊಂಡು ಹೊರಗೆ ಸುಗಂಧ ಹುಡುಕುತ್ತದೆ. ಅದು ತನ್ನಲ್ಲಿಯೇ ಕಸ್ತೂರಿಯನ್ನಿಟ್ಟಿಕೊಂಡು ಅದನ್ನು ಅರಸುತ್ತ ಎಲ್ಲಿಯೋ ಸುತ್ತುತ್ತದೆ. ಅದೇ ರೀತಿ ಮಾನವ ತನ್ನಲ್ಲಿರುವ ಅಮೂಲ್ಯ ಗುಣಗಳನ್ನು ತಾನರಿಯದೇ ಎಲ್ಲೆಲ್ಲೋ ಎನನ್ನೋ ಹುಡುಕುತ್ತ ಅಲೆಯುತ್ತಾನೆ.
-3-
ಇನ್ನೊಂದು ಚಿತ್ರ ರುಚಿ ಅಂದರೆ ನಾಲಗೆ ಚಪಲದ ಕಥೆ ಸಾರುತ್ತದೆ. ಸೋದರಿಯ ಒಂದು ಹನಿ ರಕ್ತ ಆಹಾರದ ರುಚಿ ಬದಲಿಸುತ್ತದೆ. ಆ ರುಚಿಯ ಬೆನ್ನು ಹತ್ತಿದ ಸೋದರರು ಸೋದರಿಯ ಕೊಲೆ ಮಾಡಿ ಆಕೆಯ ಮಾಂಸ ಸೇ"ಸುತ್ತಾರೆ. ಮನುಷ್ಯ ನಾಲಿಗೆ ರುಚಿಗೆ ಮರುಳಾಗಿ ಆರೋಗ್ಯಕರವಲ್ಲದೆ ಆಹಾರ ಕ್ರಮಗಳನ್ನು ಅನುಸರಿಸುತ್ತಾನೆ. ಅದಕ್ಕಾಗಿ ಎನೆಲ್ಲಾ ತ್ಯಾಗಕ್ಕೂ ಸಿದ್ಧನಾಗುತ್ತಾನೆ
ಈ ಚಿತ್ರಗಳ ಕಥೆಯ ಮೂಲಕ ತತ್ವ ಹಾಗೂ ಮೌಲ್ಯಗಳನ್ನು ಸಾರುತ್ತವೆ.
ಗೊಂಡ ಚಿತ್ರಗಳಲ್ಲಿ ಸಾಮಾನ್ಯವಾಗಿ ನ"ಲು, ಪಕ್ಷಿಗಳು, "ುನು, ಏಡಿಗಳು, ಕಾಲ್ಪನಿಕ ಪ್ರಾಣಿಗಳು ಹಲ್ಲಿ, ಸಿಂಹ, ಹುಲಿ, ಜಿಂಕೆ, ಹಾವು, ಆಕಳು, ಮಂಗಗಳು, ಆನೆ, ಕುದುರೆ ಕಾಣಿಸಿಕೊಂಡರೆ, "ಮಹುವಾ' ಮರ ಎಲ್ಲೆಡೆ ರಾಜಾಜಿಸುತ್ತದೆ. ಈ ಮರದ ಎಲೆ, ಹೂವು, ಹಣ್ಣು ಎಲ್ಲವನ್ನು ಬುಡಕಟ್ಟು ಜನರು ಬಳಸುತ್ತಾರೆ. ಆಧುನಿಕ ಯಂತ್ರಗಳು ಸಹ, ಪೌರಾಣಿಕ ದೇವಾನುದೇವತೆಗಳ ಜೊತೆಗೆ ಬುಡಕಟ್ಟು ಜನರು ಪೂಜಿಸುವ ದೇವತೆಗಳಂತೆ ಚಿತ್ರಣಗೊಂಡಿರುತ್ತವೆ.
"ಗೊಂಡ" ಕಲೆ ಒಂದು ಅದ್ಭುತ ಲೋಕವನ್ನೇ ತೆರೆದಿಡುತ್ತದೆ. ಅವರ ಕಲೆಯ ಸೂಕ್ಷ್ಮತೆಯನ್ನರಿಯಲು ಆ ಕಲಾ ಸೌಂದರ್ಯವನ್ನು ಅಶ್ವಾಧಿಸಲು ಸಮಯ ಒದಗಿಸಿ ಅವಲೋಕನ ಮಾಡುವುದು ಅಗತ್ಯ. ಹುಲಕೋಟಿಯ ಕೆ.ಎಚ್.ಪಾಟೀಲ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ "ಜ್ಞಾನ ಸಂಸ್ಥೆ ಖ್ಯಾತ ಕಲಾ"ದರಿಂದ ಗೊಂಡ ಕಲೆ ಅರಳುವಂತೆ ಮಾಡಿದ್ದು ಅಭಿನಂದನೀಯ ರೂರಲ್ ಮೆಡಿಕಲ್ ಸ"ರ್ಸ್ ಸೊಸೈಟಿ ಸಂಸ್ಥೆಯ ಪೋಷಕರ ಹಾಗೂ ಪದಾಧಿಕಾರಿಗಳ ಸೌಂದರ್ಯದ್ಠೃ, ದೇಶಿಯ ಕಲೆಗಳ ಬಗ್ಗೆ ಅವರಿಗೆ ಇರುವ ಪ್ರೀತಿ ಹಾಗೂ ಗೌರವ ಜೊತೆಗಿರುವ ಕಳಕಳಿ ಇದಕ್ಕೆ ಕಾರಣವೆಂದರೆ ಅತಿಶಯೋಕ್ತಿಯಾಗದು.