ಬಳ್ಳಾರಿ

ಕೆ.ಶಿವಕುಮಾರ್‌ಗೆ "ಡಾ.ಅಂಬೇಡ್ಕರ್ ಸೇವಾಶ್ರೀ ರಾಷ್ಟ್ರೀಯ ಪ್ರಶಸ್ತಿ" ಪ್ರಧಾನ

ಕೆ.ಶಿವಕುಮಾರ್‌ಗೆ "ಡಾ.ಅಂಬೇಡ್ಕರ್ ಸೇವಾಶ್ರೀ ರಾಷ್ಟ್ರೀಯ ಪ್ರಶಸ್ತಿ" ಪ್ರಧಾನ

ಕೆ.ಶಿವಕುಮಾರ್‌ಗೆ "ಡಾ.ಅಂಬೇಡ್ಕರ್ ಸೇವಾಶ್ರೀ ರಾಷ್ಟ್ರೀಯ ಪ್ರಶಸ್ತಿ" ಪ್ರಧಾನ 

ಕಂಪ್ಲಿ  16:  ಕಂಪ್ಲಿ ತಾಲ್ಲೂಕು ದೇವಲಾಪುರ ಗ್ರಾಮದ, ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಗ್ರಾಮ ಪಂಚಾಯಿತಿ ಮಾಜಿ  ಸದಸ್ಯ ಹಾಗೂ ಬಳ್ಳಾರಿ ವಿ.ಎಸ್‌. ಕೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ವಕೀಲ ಕೆ.ಶಿವಕುಮಾರ್ ರವರಿಗೆ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ರಾಷ್ಟ್ರಾಧ್ಯಕ್ಷರಾದ ಎಸ್ ಪಿ.  ಸುಮಾನಾಕ್ಷರ್ ಮತ್ತು ಹರಿಯಾಣ ರಾಜ್ಯದ ಮಾಜಿ ಆರೋಗ್ಯ ಸಚಿವರಾದ ಸಚಿವರಾದ ಡಾ.ಎಂ.ಎಲ್‌.ರಂಗ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮಾಜಿ ಕೇಂದ್ರ ಸಚಿವರುಗಳಾದ ಸತ್ಯನಾರಾಯಣ ಜೆ, ಮತ್ತು ರಾಮಜಿ ಲಾಲ್ ಸುಮನ್ ರವರು 2024ನೇ ಸಾಲಿನ "ಡಾ.ಅಂಬೇಡ್ಕರ್ ಸೇವಾಶ್ರೀ ರಾಷ್ಟ್ರೀಯ ಪ್ರಶಸ್ತಿ" ಪ್ರಧಾನ ಮಾಡಿದರು. ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಮುಖಾಂತರ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ದಲಿತ ಹಿಂದುಳಿದವರ ಪರವಾಗಿ ಮತ್ತು ಸಾಮಾಜಿಕ  

ಸಮಸ್ಯೆಗಳ ಕುರಿತಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದವರಿಗೆ ವೈಯಕ್ತಿಕ ಹಣದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಶಾಲಾ ಸಮವಸ್ತ್ರಗಳು, ಶೂಗಳು, ಪಠ್ಯಪುಸ್ತಕಗಳನ್ನ ಉಚಿತವಾಗಿ ನೀಡುತ್ತಿರುವುದು ಹಾಗೂ ಬಡ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಶಾಲೆ ನಡೆಸುವುದು ಹಾಗೂ ಉಚಿತವಾಗಿ ಕೋಚಿಂಗ್ ನೀಡುವುದು ಹಾಗೂ ದಲಿತ ಸಮುದಾಯದವರ ಪರ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಲವಾರು ಸಮಾಜ ಸೇವೆಗಳನ್ನ ತಾವು ಕೈಗೊಂಡಿರುವುದನ್ನು ಗುರುತಿಸಿ ತಮಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆಂದು ಪ್ರಶಸ್ತಿ ಪುರಸ್ಕೃತ ಕೆ.ಶಿವಕುಮಾರ್ ತಿಳಿಸಿದರು. 


ಸುದ್ದಿ ಓದಿ