"ಅವಲಕ್ಕಿ ಪವಲಕ್ಕಿ" ಶೀಘ್ರದಲ್ಲೇ ತೆರೆಗೆ
ಬೆಂಗಳೂರು, ಅ.11: ಶ್ರೀ ಪ್ರಣವ್ ಪಿಕ್ಚರ್ಸ್ ಲಾಂಛನದಲ್ಲಿ ರಂಜಿತಾ ಸುಬ್ರಹ್ಮಣ್ಯ ಅವರು ನಿರ್ಮಿಸಿರುವ "ಅವಲಕ್ಕಿ ಪವಲಕ್ಕಿ" ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ "ಅವಲಕ್ಕಿ ಪವಲಕ್ಕಿ" ಅನಾವರಣಗೊಳ್ಳಲಿದೆ. ಇದಕ್ಕೂ ಮುನ್ನ ಚಿತ್ರದಲ್ಲಿ ಆಂಜನೇಯನನ್ನು ಸ್ಮರಿಸುವ ವೀರಶೂರನೇ ಹನುಮ ಎಂಬ ಹಾಡು ನವರಾತ್ರಿ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ . ಸಂದೀಪ್ ಎಸ್ ಅಯ್ಯರ್ ಈ ಹಾಡು ಬರೆದಿದ್ದಾರೆ. ಖ್ಯಾತ ಗಾಯಕ ರಘುದೀಕ್ಷಿತ್ ಈ ಹಾಡನ್ನು ಇಂಪಾಗಿ ಹಾಡಿದ್ದಾರೆ. ಜುಬಿನ್ ಪಾಲ್ ಸಂಗೀತ ನೀಡಿದ್ದಾರೆ. ನನ್ನ ಹಾಡಿನ ಜರ್ನಿಯಲ್ಲೇ ಉತ್ತಮ ಹಾಗೂ ಕಠಿಣವಾದ ಹಾಡು ಇದು. ಎಲ್ಲರಿಗೂ ಖಂಡಿತಾ ಇಷ್ಟವಾಗುತ್ತದೆ. ಹನುಮ ಜಯಂತಿ ಮೊದಲಾದ ಹಬ್ಬಗಳಿಗೆ ಹೇಳಿ ಮಾಡಿಸಿದ ಹಾಗಿದೆ ಈ ಹಾಡು. ಇಂತಹ ಹಾಡು ಕೊಟ್ಟ ಸಂಗೀತ ನಿರ್ದೇಶಕರಿಗೆ ವಂದನೆಗಳು. ಇಡೀ ತಂಡಕ್ಕೆ ಶುಭಾಶಯಗಳು ಎಂದಿದ್ದಾರೆ ರಘುದೀಕ್ಷಿತ್. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೇಲರ್ ಗೂ ಅಪಾರ ಮೆಚ್ಚುಗೆಯೂ ದೊರಕಿದೆ.
ದುರ್ಗಾ ಪ್ರಸಾದ್ ಈ ಚಿತ್ರದ ನಿರ್ದೇಶಕರು. ನಿರೀಕ್ಷಿತ್ ಛಾಯಾಗ್ರಹಣ, ಶಾಂತ ಕುಮಾರ್ ಸಂಕಲನ ಹಾಗೂ ಮಂಜುನಾಥ್ ಶಿಂಧೆ ಕಲಾ ನಿರ್ದೇಶನವಿದೆ.
ದೀಪಕ್ ಪಟೇಲ್, ಸಮರ್ಥ್ ರಾಮಪುರ, ಭಾರಧ್ವಾಜ, ಶ್ರೇಯಾ, ಇಂದಿರಾ ನಾಯರ್, ರಾಘವೇಂದ್ರ, ಸಿಂಚನಾ, ಪ್ರವೀಣ್, ಪ್ರಿಯಾ ಶಂಕರ್, ಉದಯಕುಮಾರ್, ನಾಗರಾಜ್ ಭಂಡಾರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.